ಸಿಎಂ ಪರಿಹಾರ ನಿಧಿಯಿಂದ ಚೆಕ್ ವಿತರಣೆ
ಬನಹಟ್ಟಿ: ನಗರದ ಶಾಸಕರ ಕಾರ್ಯಾಲಯದಲ್ಲಿ ಸಿಎಂ ಪರಿಹಾರ ನಿಧಿ ಚೆಕ್ಗಳನ್ನು ಶಾಸಕ ಸಿದ್ದು ಸವದಿ ವಿತರಿಸಿದರು.
Team Udayavani, Aug 4, 2019, 4:45 PM IST
ಬನಹಟ್ಟಿ: ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ರಬಕವಿ-ಬನಹಟ್ಟಿ ತಾಲೂಕಿನ ಬಹಳಷ್ಟು ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ನಗರದ ಶಾಸಕರ ಕಾರ್ಯಾಲಯದಲ್ಲಿ ಒಟ್ಟು 22 ಫಲಾನುಭವಿಗಳಿಗೆ 6 ಲಕ್ಷ ರೂ.ವರೆಗೆ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ಅನಾರೋಗ್ಯದಿಂದ ಸಾಕಷ್ಟು ಜನರು ಬಳಲುತ್ತಿದ್ದು, ಅಂಥವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣದ ಚೆಕ್ ಸಹಕಾರಿಯಾಗಲಿದೆ. ಈ ಹಿಂದೆ ಜನರಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮಾಹಿತಿ ಕೊರತೆಯಿತ್ತು. ರೋಗಗಳಿಂದ ಬಳಲುತ್ತಿರುವವರು ನಮ್ಮೆ ಕಚೇರಿಗೆ ಅಗತ್ಯ ದಾಖಲಾತಿಗಳನ್ನು ನೀಡಿದರೆ ಸಿಎಂ ಪರಿಹಾರ ನಿಧಿಯಿಂದ ಚೆಕ್ ಬರುವಂತೆ ಮಾಡಲಾಗುವುದು ಎಂದು ತಿಳಿಸಿದರು. ಪ್ರಭಾಕರ ಮೊಳೇದ, ಶಂಕರ ಹುನ್ನೂರ, ಸದಾಶಿವ ಸಂತಿ, ಪಾಂಡು ಹಿಪ್ಪರಗಿ, ಮನೋಹರ ಮುತಿ, ಶಿವು ಹುಣಶ್ಯಾಳ, ಕಾಡಪ್ಪ ಕೊಣ್ಣೂರ, ರಾಜು ಕೋಲಾರ, ಕಾಡಪ್ಪ ಬಿಳ್ಳೂರ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.