ಡಿಜಿಟಲ್ ಬ್ರೈಲ್ ಬುಕ್
ಅಂಧರು, ಕಾದಂಬರಿ, ಅಂಕಣಗಳನ್ನು ಓದಬಹುದು!
Team Udayavani, Aug 5, 2019, 5:00 AM IST
ಜಗತ್ತಿನಾದ್ಯಂತ ಲಭ್ಯವಿರುವ ಪುಸ್ತಕಗಳಲ್ಲಿ ಶೇ. 1 ರಷ್ಟು ಮಾತ್ರ ಬ್ರೈಲ್ ಪುಸ್ತಕಗಳಾಗಿವೆ. ಅಲಭ್ಯತೆ ಒಂದು ಸಮಸ್ಯೆಯಾದರೆ ಬ್ರೈಲ್ ಪುಸ್ತಕದ ತೂಕ ಇನ್ನೊಂದು ಸಮಸ್ಯೆ. ಏಕೆಂದರೆ ಬ್ರೈಲ್ ಲಿಪಿಗೆ ಪರಿವರ್ತನೆಗೊಂಡ 500 ಪುಟಗಳ ಪುಸ್ತಕ ಏನಿಲ್ಲವೆಂದರೂ 4 ಕೆ.ಜಿ ತೂಕವಿರುತ್ತದೆ. ಅಲ್ಲದೆ, ಅದರ ಬೆಲೆಯೂ ಹೆಚ್ಚಿರುತ್ತದೆ. ಇವೆಲ್ಲಾ ಸಮಸ್ಯೆಯನ್ನು ಮನಗಂಡ ಬೆಂಗಳೂರಿನ ಎಂ.ವಿ.ಜೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ರೋಹಿತ್ ಹಾಗೂ ರುಚಿತಾ ಅದಕ್ಕೊಂದು ಕೊನೆಗಾಣಿಸಲು, “ಬಿ ಬುಕ್’ ಉಪಕರಣವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ.
ಏನಿದು ಬಿ ಬುಕ್?
ಪಿ.ಡಿ.ಎಫ್, ಟೆಕ್ಸ್ಟ್, ಇ- ಪಬ್ ಮಾದರಿಯ ಫೈಲ್‌ಗಳನ್ನು ಪೆನ್‌ಡ್ರೈವ್ ಮೂಲಕ ಈ ಬಿ- ಬುಕ್ ಉಪಕರಣಕ್ಕೆ ಸಿಕ್ಕಿಸಿದರೆ ಅದು ಅಕ್ಷರಗಳನ್ನು ಗುರುತು ಹಿಡಿದು, ಅವನ್ನು ಬ್ರೈಲ್ ಸಂಕೇತದಲ್ಲಿ ವ್ಯಕ್ತಪಡಿಸುತ್ತದೆ. ಈ ಉಪಕರಣ, ಬ್ರೈಲ್ ಸಂಕೇತವನ್ನು 6 ಪಿನ್‌ಗಳ ಮೂಲಕ ವ್ಯಕ್ತಪಡಿಸುತ್ತದೆ. ಪಿನ್ ಎಂದರೆ ಬಟನ್‌ನಂತೆ ಕಾರ್ಯ ನಿರ್ವಹಿಸುವ ಸ್ವಿಚ್ ಎಂದುಕೊಳ್ಳಬಹುದು. ಆದರೆ ಅದನ್ನು ಒತ್ತಲಾಗುವುದಿಲ್ಲ. ಅದನ್ನು ಯಂತ್ರವೇ ನಿಯಂತ್ರಿಸುತ್ತದೆ. 6 ಬಟನ್‌ಗಳಲ್ಲಿ ಆನ್ ಮತ್ತು ಆಫ್ ಎಂಬ ಎರಡು ಸ್ಥಿತಿಗಳಿರುತ್ತವೆ. ಪಿನ್ ಮೇಲಕ್ಕೆ ಎದ್ದಿದ್ದರೆ ಆಫ್ ಎಂದುಕೊಳ್ಳಬಹುದು, ಕೆಳಕ್ಕೆ ಹೋಗಿದ್ದರೆ ಆನ್ ಎಂದುಕೊಳ್ಳಬಹುದು. ಅಂಧರು ಈ ಪಿನ್‌ಗಳ ಮೇಲೆ ಬೆರಳಾಡಿಸುವ ಮೂಲಕ ಯಾವೆಲ್ಲ ಪಿನ್ ಆನ್ ಅಥವಾ ಆಫ್ ಆಗಿವೆ ಎಂಬುದನ್ನು ಕಂಡುಹಿಡಿದು ಅಕ್ಷರಗಳ ಗುರುತು ಹಿಡಿಯುತ್ತಾರೆ. ಆ ಮೂಲಕ ಅಂಧರು, ಕಾದಂಬರಿ ಪುಸ್ತಕ, ಇಂಟರ್‌ನೆಟ್‌ನ ಅಂಕಣಗಳನ್ನು ಪಿಡಿಎಫ್, ಟೆಕ್ಸ್ಟ್ ಅಥವಾ ಇ ಪಬ್ ಫಾಮ್ಯಾಟ್‌ಗೆ ಕನ್ವರ್ಟ್ ಮಾಡಿಕೊಂಡರೆ ಪೆನ್‌ಡ್ರೈವ್ ಮೂಲಕ ಬಿ-ಬುಕ್‌ಗೆ ಅಳವಡಿಸಿ ಅದನ್ನು ಬ್ರೈಲ್ ರೂಪದಲ್ಲಿ ಓದಬಹುದಾಗಿದೆ.
ಈ ಯಂತ್ರವನ್ನು ಆಭಿವೃದ್ಧಿಪಡಿಸುವ ಮುನ್ನ ವಿದ್ಯಾರ್ಥಿಗಳು ಅಂಧರ ಶಾಲೆಗೆ ಭೇಟಿ ನೀಡಿ, ಶಿಕ್ಷಕ ವೃಂದ ಹಾಗೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಅವರ ಅಗತ್ಯತೆಗಳನ್ನು ಮನಗಂಡಿದ್ದಾರೆ. ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಇರಾದೆಯೂ ಈ ವಿದ್ಯಾರ್ಥಿಗಳಿಗಿದೆ.
9591119113
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.