ಮೆಟ್ರೋ ಸೇವೆ ಪುನರಾರಂಭ
Team Udayavani, Aug 5, 2019, 3:00 AM IST
ಬೆಂಗಳೂರು: ನಿರ್ವಹಣೆ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ನೇರಳೆ ಮಾರ್ಗದಲ್ಲಿ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆ ಪುನರಾರಂಭಗೊಂಡಿದ್ದು, ಭಾನುವಾರ ಮಧ್ಯಾಹ್ನದಿಂದ ಎಂದಿನಂತೆ ವಾಣಿಜ್ಯ ಸಂಚಾರ ಶುರುವಾಯಿತು.
ಬೈಯಪ್ಪನಹಳ್ಳಿ-ಎಂ.ಜಿ. ರಸ್ತೆ ನಡುವೆ ಮೆಟ್ರೋ ಸಂಚಾರ ಬೆಳಗ್ಗೆ 11.25ರಿಂದಲೇ ಪುನರಾರಂಭಗೊಂಡಿದ್ದು, ಇಡೀ ದಿನ ಎಂದಿನಂತೆ “ನಮ್ಮ ಮೆಟ್ರೋ’, ಸೇವೆ ಸಲ್ಲಿಸಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಸ್ಪಷ್ಟಪಡಿಸಿದೆ.
ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಆಗಸ್ಟ್ 3ರ ರಾತ್ರಿ 9.30ರಿಂದ ಮತ್ತು 4ರಂದು ಬೆಳಗ್ಗೆ 11.30ರವರೆಗೆ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ನಿಲ್ದಾಣದಿಂದ ಎಂ.ಜಿ. ರಸ್ತೆವರೆಗೆ ಮೆಟ್ರೋ ಸೇವೆ ಲಭ್ಯ ಇರಲಿಲ್ಲ. ತ್ವರಿತ ಗತಿಯಲ್ಲಿ ತಜ್ಞರು ನಿರ್ವಹಣಾ ಕಾರ್ಯ ಪೂರ್ಣಗೊಳಿಸಿದ್ದು, 11.25ರಿಂದಲೇ ಸೇವೆಗೆ ಮುಕ್ತಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ತಾಯಿ, ಮಗನ ವಿರುದ್ಧ ಎಫ್ಐಆರ್
BMTC ಬಸ್ ಕಂಡಕ್ಟರ್ಗೆ ಕಲ್ಲಿನಿಂದ ಹೊಡೆದ ಆರೋಪಿ ಸೆರೆ, ಕೇಸ್ ದಾಖಲು
Bengaluru: ನಗರದಲ್ಲಿ ಶಂಕಿತ ನಕ್ಸಲ್ ಬಂಧನ ಪ್ರಕರಣ: ಎನ್ಐಎಗೆ ವರ್ಗಾವಣೆ
Bengaluru: ದೀಪಾವಳಿ ಪ್ರಯುಕ್ತ 14 ರೈಲುಗಳಿಗೆ ಹೆಚ್ಚುವರಿ ಬೋಗಿ
Bengaluru: ನಗರದಲ್ಲಿ ಅನಧಿಕೃತ ಕಟ್ಟಡ ಪತ್ತೆಗೆ ಅ.28ರಿಂದ ಸಮೀಕ್ಷೆ : ಡಿಕೆಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.