ಜಿಲ್ಲಾದ್ಯಂತ ನಾಗರಪಂಚಮಿ ಸಂಭ್ರಮ
ನಾಗದೇವತೆ ಮೂರ್ತಿಗೆ ಹಾಲೆರೆದ ನೀರೆಯರು,ಜೋಕಾಲಿ ಜೀಕಿದ ಯುವತಿಯರು
Team Udayavani, Aug 5, 2019, 10:05 AM IST
ಕೊಪ್ಪಳ: ಕುಟುಂಬ ಸದಸ್ಯರು ನಾಗಪ್ಪ ದೇವಸ್ಥಾನಕ್ಕೆ ತೆರಳಿ ಹಾಲನ್ನೆರೆದರು.
ಕೊಪ್ಪಳ: ಜಿಲ್ಲಾದ್ಯಂತ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು, ಮಕ್ಕಳು ನಾಗದೇವತೆ ಮೂರ್ತಿಗೆ ಶ್ರದ್ಧಾ ಭಕ್ತಿಯಿಂದ ಹಾಲ್ಲೆರೆದು ಸಿಹಿ ಪದಾರ್ಥವನ್ನು ಅರ್ಪಿಸಿ ಪೂಜೆ ಸಲ್ಲಿಸಿದರು.
ಮನೆಯಲ್ಲಿ ಹೋಳಿಗೆ, ಖರ್ಚಿಕಾಯಿ, ಎಳ್ಳು ಚಿಗುಳಿ, ಎಳ್ಳುಂಡಿ ಸಿದ್ದಪಡಿಸಿ ಮಹಿಳೆಯರೆಲ್ಲ ಸೇರಿ ಸಮೀಪದ ನಾಗಪ್ಪ ದೇವಸ್ಥಾನಕ್ಕೆ ತೆರಳಿ ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲವನ್ನಿಟ್ಟು ಹಾಲೆರೆದರು. ವಿಶೇಷವಾಗಿ ರೈತರು, ರೈತ ಮಹಿಳೆಯರು ವರ್ಷಪೂರ್ತಿ ಕೃಷಿ ಬದುಕಿನಲ್ಲಿ ತೊಡಗಿದ್ದಾಗ ಯಾವುದೇ ವಿಷ ಜಂತುಗಳಿಂದ ಅಪಾಯವಾಗದಿರಲಿ. ನಮ್ಮ ಮಕ್ಕಳು ನಾವು ಕ್ಷೇಮದಿಂದ ಇರಲಿ. ಮಳೆ-ಬೆಳೆ ಸಮೃದ್ಧಿಯಾಗಿ ಬರಲಿ. ನಾಡಿನೆಲ್ಲೆಡೆ ಸುಖ-ಶಾಂತಿನೆಲೆಸಲಿ ಎಂಬು ಪ್ರಾರ್ಥಿಸಿ ನಾಗದೇವತೆ ಮೂರ್ತಿಗೆ ಹಾಲೆರೆದರು.
ಶ್ರಾವಣ ಮಾಸ ಪ್ರಾರಂಭದಲ್ಲಿ ಬರುವ ನಾಗರ ಪಂಚಮಿ ಮೊದಲ ಹಾಗೂ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಸಂತಾನ ಪ್ರಾಪ್ತಿಗಾಗಿ, ಮಕ್ಕಳ ಉನ್ನತಿಗಾಗಿ, ನಾಗದೋಷ ಪರಿಹಾರಕ್ಕಾಗಿ, ಸ್ತ್ರೀಯರು ತಮ್ಮ ಸೋದರರ ಒಳಿತಿಗಾಗಿ ಅನಾದಿಕಾಲದಿಂದಲೂ ನಾಗದೇವತೆಯನ್ನು ಪೂಜಿಸುತ್ತಾ ಬಂದಿರುವುದು ವಿಶೇಷ. ಮನೆಯಲ್ಲಿ ತಾಯಂದಿರು ನಾಗಮೂರ್ತಿಗೆ ವಿಶೇಷ ತಿನಿಸುಗಳ ನೈವೇದ್ಯ ಮತ್ತು ಹರಕೆ ಹೊತ್ತವರು ಲೋಹಗಳ ಕಣ್ಣು, ಮೀಸೆ, ಇತ್ಯಾದಿಗಳನ್ನು ಸಮರ್ಪಿಸಿ, ಮನೆಯವರ ಶ್ರೇಯೋಭಿವೃದ್ಧಿಗಾಗಿ ಹರಕೆ ತೀರಿಸುವುದು ನಂಬಿಕೆ.
ಈ ಹಿನ್ನೆಲೆಯಲ್ಲಿ ಐತಿಹಾಸಿ ಪುಷ್ಕರಣಿ, ಕನಕಾಚಲಪತಿ ದೇವಸ್ಥಾನದ ಮುಂಭಾಗ ಸೇರಿದಂತೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಇರುವ ನಾಗದೇವರ ಕಟ್ಟೆಗೆ ಮಹಿಳೆಯರು ತಂಡೋಪ ತಂಡವಾಗಿ ತೆರಳಿ ಪೂಜೆ ಸಲ್ಲಿಸಿ ದೋಷ ನಿವಾರಣೆಗೆ ಭಕ್ತಿ ಸಮರ್ಪಿಸುವುದು ಕಂಡು ಬಂತು.
ದೋಟಿಹಾಳ ಗ್ರಾಮದ ಶುಖಮುನಿಸ್ವಾಮಿ ಮಠದ ಹತ್ತಿರ, ರುದ್ರಮುನಿ ಸ್ವಾಮಿ ಮಠದ ಹತ್ತಿರ, ಕಾಳಿನ ಸಂತೆ ಬಾಜಾರ್ ಹತ್ತಿರ, ಹನುಮಂತನ ದೇವಸ್ಥಾನದ ಹತ್ತಿರ, ಕೇಸೂರ ಗ್ರಾಮದ ಮಹಾಂತೇಶ್ವರ ಸ್ವಾಮಿ ಮಠದ ಹತ್ತಿರ ಮತ್ತು ಬಸವಣ್ಣನ ದೇವಸ್ಥಾನದಲ್ಲಿ ಮಹಿಳೆಯರು ನಾಗ ದೇವತೆಗೆ ಹಾಲೆರೆದು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಗ್ರಾಮದ ಪ್ರತಿಮನೆಗಳಲ್ಲಿ ಹಲವಾರು ಬಗೆಯ ಲಾಡು (ಉಂಡಿ) ತಯಾರಿಸಿ ನಾಗದೇವತೆಗೆ ಪೂಜೆ ಸಲ್ಲಿಸಿ ಹಾಲನ್ನು ಎರೆದು ನಂತರ ಗಿಡಮರಗಳಿಗೆ ಜೋಕಾಲಿ ಕಟ್ಟಿ ಆಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.