ಸೌಲಭ್ಯ ಕಲ್ಪಿಸಲು ಬದ್ಧ
ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಮುತ್ಯಾಗಿದೆ: ದರ್ಶನಾಪುರ
Team Udayavani, Aug 5, 2019, 11:23 AM IST
ಶಹಾಪುರ: ಹಳೆಪೇಟೆಯ ವಗ್ಗರಾಯಣ್ಣನ ನೂತನ ಮಂದಿರವನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು.
ಶಹಾಪುರ: ಹಳೆಪೇಟೆಯ ವಗ್ಗರಾಯಣ್ಣ ಮುತ್ಯಾನ ನೂತನ ಮಂದಿರ ನಿರ್ಮಾಣ ಮತ್ತು ವಿಶೇಷ ಪೂಜೆ ಶ್ರದ್ಧೆ ಭಕ್ತಿಯಿಂದ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದ ಇಲ್ಲಿನ ಜನರ ಇಷ್ಟಾರ್ಥಗಳ ಈಡೇರಿಸುವ ಜೊತೆಗೆ ಈ ಕ್ಷೇತ್ರದಲ್ಲಿ ಸಮೃದ್ಧ ಮಳೆ ಬೆಳೆಯಾಗಿ ರೈತರ ಕಷ್ಟ ನಿವಾರಿಸಲಿ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಹಳಪೇಟೆಯಲ್ಲಿ ವಗ್ಗರಾಯಣ್ಣ ಮುತ್ಯಾನ ಮಂದಿರ ಉದ್ಘಾಟಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಸಮಾಜ ಸಶಕ್ತವಾಗಬೇಕು. ಕಾಯಕ ನಿಷ್ಠೆ, ಧಾರ್ಮಿಕ ನಂಬಿಕೆ ಜೊತೆ ಶೈಕ್ಷಣಿಕವಾಗಿ ಪ್ರತಿಯೊಬ್ಬರೂ ಮುಂದೆ ಬರಬೇಕು. ಮಂದಿರದ ಪರಿಸರದಲ್ಲಿ ಸಸಿ ನೆಟ್ಟು ವಾತಾವರಣ ಶುಚಿತ್ವವಾಗಿಟ್ಟುಕೊಂಡು ಭಕ್ತರಿಗೆ ಇದೊಂದು ನೆಮ್ಮದಿ ನೀಡುವ ತಾಣವಾಗಿ ಹೊರ ಹೊಮ್ಮಲಿ. ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಈ ಕ್ಷೇತ್ರಾಧಿಪತಿ ವಗ್ಗರಾಯಣ್ಣ ಮುತ್ಯಾಗಿದೆ. ಅವರ ಪವಾಡಗಳನ್ನು ಕೇಳಿದ್ದೇನೆ. ಅದರಂತೆ ಈ ಕ್ಷೇತ್ರದ ಸುತ್ತಮುತ್ತಲೂ ಉತ್ತಮ ವಾತಾವರಣ ಕಲ್ಪಿಸಿದ್ದಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಒಂದಿಷ್ಟು ಸಮಯ ಕ್ಷೇತ್ರದಲ್ಲಿ ಕಳೆದು ನೆಮ್ಮದಿಯಿಂದ ಮನೆಗೆ ತೆರಳುವಂತಾಗಬೇಕು. ಅದಕ್ಕೆ ಬೇಕಾದ ಸೌಲಭ್ಯ ಪಡೆದುಕೊಂಡು ಅಭಿವೃದ್ಧಿ ಪಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ವಿವರ ನೀಡಿದ ಅವರು, ಮೂಲಭೂತ ಸೌಕರ್ಯಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಪ್ರತಿಯೊಂದು ವಾರ್ಡ್ ನಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳುವ ಕುರಿತು ಗಮನಕ್ಕೆ ತಂದರೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಕುರುಬ ಸಮಾಜದ ಯುವಕರು ಸಿದ್ಧಗೊಳಿಸಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ನಾಮಫಲಕ ಉದ್ಘಾಟಿಸಿದರು. ಬಡಾವಣೆ ವತಿಯಿಂದ ಶಾಸಕ ದರ್ಶನಾಪು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಗ್ಗರಾಯಣ್ಣ ಮುತ್ಯಾನ ಸನ್ನಿಧಾನದಲ್ಲಿ ವಿಶೇಷ ಪೂಜೆ ಅಲಂಕಾರ ಜರುಗಿತು. ಆಗಮಿಸಿದ ಜನರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಾಸಕರು ಸ್ಥಳೀಯ ಈಶ್ವರ ದೇವಸ್ಥಾನ ಮತ್ತು ಶ್ರೀ ರಾಘವೇಂದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಅಯ್ಯಪ್ಪ ಜಂಗಳಿ, ಅನಂತರಾವ ದೇಶಪಾಂಡೆ, ಶಿವು ಕುಮಾರ, ವಸಂತ ಸುರಪುರಕರ್, ಹಣಮಂತ್ರಾಯಗೌಡ ರಾಕಂಗೇರಾ, ಭೀಮರಾಯ ವಗ್ಗನೋರ, ನಾಗಪ್ಪ ವಗ್ಗನೋರ, ದ್ಯಾವಣ್ಣ ಮಾಸ್ತರ ಚಿಟ್ಟೆನೋರ, ಚಂದ್ರಾಮಪ್ಪ, ಹೈಯಾಳಪ್ಪ, ಹೊನ್ನಪ್ಪ ಪೂಜಾರಿ, ಯಲ್ಲಪ್ಪ ಪೂಜಾರಿ, ಸುಬ್ಬಣ್ಣ ಪೂಜಾರಿ, ರಾಯಪ್ಪ ಪೂಜಾರಿ, ಸಂಗಪ್ಪ, ಬಸವರಾಜ, ಅಯ್ಯಪ್ಪ ಪೂಜಾರಿ, ಸಾದಪ್ಪ ಪೂಜಾರಿ, ರಾಜಣ್ಣ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.