ಅಂಬೇಡ್ಕರ್ ನಿಗಮಕ್ಕೆ ವರ್ಷದಿಂದ ಅನುದಾನವೇ ಇಲ್ಲ
ಸರಕಾರ ಬದಲು: ಫಲಾನುಭವಿಗಳ ಆಯ್ಕೆಗೆ ಬ್ರೇಕ್!
Team Udayavani, Aug 5, 2019, 11:35 AM IST
ಉಡುಪಿ: ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಗ್ರಾ.ಪಂ.ಗಳ ಮೂಲಕ ನಡೆಯುತ್ತಿದ್ದ ವಸತಿ ಯೋಜನೆ ಫಲಾನುಭವಿಗಳ ಆಯ್ಕೆಗೆ ಬ್ರೇಕ್ ಬಿದ್ದಿದೆ.
ಈಗ ರಾಜೀವ್ ಗಾಂಧಿ ವಸತಿ ನಿಗಮದ ಸೈಟ್ ಯಾವುದೇ ರೀತಿಯ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ, ಮಂಜೂರಾತಿಗೆ ತೆರೆದುಕೊಳ್ಳುತ್ತಿಲ್ಲ. “ಮುಂದಿನ ಆದೇಶದವರೆಗೆ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ’ ಎಂಬ ಸಂದೇಶ ಬರುತ್ತಿದೆ. ಇದರಲ್ಲಿ ಬಸವ ವಸತಿ, ಡಾ| ಅಂಬೇಡ್ಕರ್ ವಸತಿ ಮತ್ತು ವಾಜಪೇಯಿ ವಸತಿ ಯೋಜನೆಗಳೂ ಸೇರಿವೆ.
ಹೊಸ ಪಟ್ಟಿ?
ಯಾವ ಉದ್ದೇಶಕ್ಕೆ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಅಧಿಕಾರಿಗಳಲ್ಲಿ ಇಲ್ಲ. ಈಗಾಗಲೇ ಸಮೀಕ್ಷೆ ನಡೆಸಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ವಸತಿ ಮತ್ತು ನಿವೇಶನ ರಹಿತರ ಪಟ್ಟಿ ಸಿದ್ಧವಾಗಿತ್ತು. ಆಕಾಂಕ್ಷಿಗಳ ಅರ್ಜಿಯನ್ನು 6 ತಿಂಗಳುಗಳಿಂದ ನಿಗಮದ ವೆಬ್‌ಸೈಟ್ ಸ್ವೀಕರಿಸುತ್ತಿರಲಿಲ್ಲ. ಈಗ ಹಳೆಯ ಮತ್ತು ಹೊಸ ಅರ್ಜಿಗಳ ಅಪ್‌ಲೋಡ್ ಕೂಡ ನಿಂತಿದೆ. ಈ ಕುರಿತಾದ ಇ ಮೇಲ್ ಸಂದೇಶ ಪಿಡಿಒಗಳಿಗೆ ರವಾನೆಯಾಗಿದೆ. “ಮತ್ತೆ ಹೊಸ ಸಮೀಕ್ಷೆಯಾಗಿ ಹೊಸ ಪಟ್ಟಿ ಸಿದ್ಧವಾಗುತ್ತದೆಯೋ ಅಥವಾ ಹಳೆಯ ಪಟ್ಟಿಯ ಜತೆಗೆ ಹೊಸಬರಿಗೂ ಅವಕಾಶ ನೀಡಲಾಗುತ್ತದೆಯೋ ಎಂಬ ಮಾಹಿತಿ ದೊರೆತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದಿನ ಸಮೀಕ್ಷೆಯಂತೆ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 15,750 ಮತ್ತು ದ.ಕ. ಜಿಲ್ಲೆಯಲ್ಲಿ ಒಟ್ಟು 18,926 ವಸತಿ ರಹಿತ ಕುಟುಂಬಗಳನ್ನು ಗುರುತಿಸಲಾಗಿದೆ.
ಪರಿಶಿಷ್ಟರ ಪಾಡು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಸತಿ ಭಾಗ್ಯ ಒದಗಿಸುವ ಅಂಬೇಡ್ಕರ್ ವಸತಿ ನಿಗಮಕ್ಕೆ ಒಂದು ವರ್ಷದಿಂದ ಚಿಕ್ಕಾಸೂ ಬಿಡುಗಡೆಯಾ
ಗಿಲ್ಲ. ಪರಿಣಾಮ ರಾಜ್ಯದೆಲ್ಲೆಡೆ ಸಾವಿರಾರು ಪ.ಜಾತಿ,ಪಂಗಡದ ಕುಟುಂಬಗಳು ವಸತಿ ವಂಚಿತವಾಗಿವೆ. ಉಡುಪಿ ಜಿಲ್ಲೆಗೆ ಅಂಬೇಡ್ಕರ್ ವಸತಿ ಯೋಜನೆಯಡಿ (ಪ.ಜಾತಿ) 2018-19ನೇ ಸಾಲಿನಲ್ಲಿ 1.03 ಕೋ.ರೂ. ನಿಗದಿಯಾಗಿತ್ತಾದರೂ ಬಿಡುಗಡೆಯಾಗಿಲ್ಲ. 2017-18ನೇ ಸಾಲಿನಲ್ಲಿ ನಿಗದಿಯಾದ ಅನುದಾನಕ್ಕಿಂತ ತೀರಾ ಕಡಿಮೆ ಅನುದಾನ ಬಿಡುಗಡೆಯಾಗಿತ್ತು. 2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 268 ಮನೆ ನಿರ್ಮಾಣದ ಗುರಿ ಇತ್ತಾದರೂ 59 ಮನೆ ನಿರ್ಮಾಣ ಮಾತ್ರ ಸಾಧ್ಯವಾಗಿದೆ. ಅಂಬೇಡ್ಕರ್ ವಸತಿ ಯೋಜನೆಯಡಿ (ಪ. ಪಂಗಡ) 2018- 19ನೇ ಸಾಲಿನಲ್ಲಿ ಬಿಡುಗಡೆಯಾಗಬೇಕಿದ್ದ 84 ಲ.ರೂ. ಬಿಡುಗಡೆಯಾಗಿಲ್ಲ. ದ.ಕ. ಜಿಲ್ಲೆಯಲ್ಲಿ ಕೂಡ ಅನುದಾನ ದೊರೆತಿಲ್ಲ.
ಅನುದಾನ ಬಿಡುಗಡೆಯಾಗದಿರುವುದು, ಮರಳಿನ ಕೊರತೆ, ಈಗ ಎಲ್ಲ ರೀತಿಯ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಳಿಸಿರುವುದರಿಂದ ವಸತಿ ಆಕಾಂಕ್ಷಿ ಕುಟುಂಬ ಗೊಂದಲಕ್ಕೀಡಾಗಿವೆ. ನಿರ್ಮಾಣ ಹಂತದಲ್ಲಿರುವ ಮನೆಗಳ ಭವಿಷ್ಯ ಕೂಡ ಡೋಲಾಯಮಾನವಾಗಿದೆ.
ಸೇರ್ಪಡೆಗೆ ಅವಕಾಶವಿರಲಿ
ಹೊಸದಾಗಿ ಮತ್ತೆ ಪಟ್ಟಿ ಸಿದ್ಧಪಡಿಸುವುದು ಸರಿಯಲ್ಲ. ಈಗ ಬಿಟ್ಟು ಹೋಗಿರುವವರನ್ನು ಮತ್ತೆ ಸೇರಿಸಲು ಅವಕಾಶ ನೀಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ಗೆ ಅನುವು ಮಾಡಿಕೊಡಬೇಕು ಎಂದು ಹೆಸರು ಹೇಳಲು ಇಚ್ಛಿಸದ ಗ್ರಾ.ಪಂ. ಪಿಡಿಒ ಒಬ್ಬರು ತಿಳಿಸಿದ್ದಾರೆ.
ಶೀಘ್ರ ಸಭೆ
ಬೆಂಗಳೂರಿನಲ್ಲಿ ವಸತಿ ಯೋಜನೆಗಳ ಕುರಿತಾದ ಸಭೆ ನಡೆಯಲಿದೆ. ಅನಂತರ ಈ ಕುರಿತಾದ ಎಲ್ಲ ಗೊಂದಲಗಳಿಗೆ ಉತ್ತರ ದೊರೆಯಲಿದೆ. ಸದ್ಯ ಹೆಚ್ಚಿನ ಮಾಹಿತಿ ತಿಳಿದಿಲ್ಲ.
-ಸಿಂಧೂ ಬಿ. ರೂಪೇಶ್ ಜಿ.ಪಂ. ಸಿಇಒ, ಉಡುಪಿ
ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.