ಗುಡಿ ಜೀರ್ಣೋದ್ಧಾರಕ್ಕೆ ಚಾಲನೆ
•ಸಸಿ ನೆಟ್ಟು ಕಾಮಗಾರಿ ಉದ್ಘಾಟನೆ•ಮೂಲ ಸೌಲಭ್ಯ ಒದಗಿಸಲು ಶಾಸಕರಲ್ಲಿ ಮನವಿ
Team Udayavani, Aug 5, 2019, 11:42 AM IST
ಸಿರುಗುಪ್ಪ: ಶಾಲಿಗನೂರು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ಸಸಿ ನೆಟ್ಟು ಚಾಲನೆ ನೀಡಿದರು
ಸಿರುಗುಪ್ಪ: ತಾಲೂಕಿನ ಶಾಲಿಗನೂರು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಹಸಿರು ಉಳಿದಾಗ ಮಾತ್ರ ಜೀವ ಸಂಕುಲ ಜಗತ್ತಿನಲ್ಲಿ ಉಳಿಯಲು ಸಾಧ್ಯ. ಆದ್ದರಿಂದ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಆವರಣದಲ್ಲಿ ಸಸಿಗಳನ್ನು ನೆಟ್ಟು ಪೋಷಿಸಿದರೆ ಭಗವಂತನ ಕೃಪೆ ದೊರೆಯುತ್ತದೆ. ಅಲ್ಲದೆ ಜಾಗತಿಕ ತಾಪಮಾನದಿಂದಾಗುವ ಕೆಟ್ಟ ಪರಿಣಾಮಗಳನ್ನು ತಡೆಗಟ್ಟಬಹುದು. ಕಾಡಿದ್ದರೆ, ಮಳೆ ಸಕಾಲಕ್ಕೆ ಬರುತ್ತದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದರು.
ಮುಖಂಡ ಪಿ.ರಾಮನಗೌಡ ಮಾತನಾಡಿ, ರಾಮಲಿಂಗೇಶ್ವರ ದೇವಸ್ಥಾನವು ಐತಿಹಾಸಿಕ ದೇವಸ್ಥಾನವಾಗಿದೆ. ಇಲ್ಲಿನ ಸುತ್ತಲಿನ ಹತ್ತಾರು ಗ್ರಾಮಗಳ ಗ್ರಾಮಸ್ಥರು ವಿವಾಹ ಸೇರಿದಂತೆ ಅನೇಕ ಸಮಾರಂಭ ನಡೆಸುತ್ತಾರೆ. ಆದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗಲು ಸ್ನಾನಗೃಹ, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯ ಹಾಗೂ ಸಮುದಾಯ ಭವನದ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಪಿಕಾರ್ಡ್ ಬ್ಯಾಂಕ್‌ನ ಅಧ್ಯಕ್ಷ ಚೊಕ್ಕಬಸವನಗೌಡ, ಎಪಿಎಂಸಿ ಅಧ್ಯಕ್ಷ ಗಿರೀಶ್‌ಗೌಡ, ಮಾಜಿ ಅಧ್ಯಕ್ಷ ವೀರೇಶಗೌಡ, ಮುಖಂಡರಾದ ನಾಗೇಶಪ್ಪ, ಶೇಕಪ್ಪ, ಸೂರ್ಯ ಭಾಸ್ಕರರಾವ್, ದೊಡ್ಡನಗೌಡ, ಗ್ರಾಪಂ ಸದಸ್ಯರಾದ ರವಿಗೌಡ, ಗೆಜ್ಜೆಳ್ಳಿ ಈರಪ್ಪ ಮತ್ತು ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.