ನಾಳೆ ಪಾಕ್ ಜಂಟಿ ಅಧಿವೇಶನ
Team Udayavani, Aug 5, 2019, 10:33 PM IST
ದಿಲ್ಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ಭಾರತ ರದ್ದುಗೊಳಿರುವುದು ಪಾಕ್ಗೆ ತಟ್ಟಿದೆ. ಭಾರತದ ಈ ಕ್ರಮವನ್ನು ಪಾಕಿಸ್ಥಾನ ಸರಕಾರ ತೀವ್ರವಾಗಿ ಖಂಡಿಸಿದ್ದು, ಅ. 6ರ ಮಂಗಳವಾರ ಜಂಟಿ ಸಂಸತ್ತು ಅಧಿವೇಶನವನ್ನು ಪಾಕ್ ಕರೆದಿದೆ.
ಭಾರತ ತಾನು ಮಾಡಿದ ಕೆಲಸವನ್ನು ಯಾವುದೇ ಕಾರಣಕ್ಕೂ ಪಾಕ್ ಒಪ್ಪುವುದಿಲ್ಲ ಎಂದಿದೆ. ಮುಂದುವರಿದು ಈ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಸಂವಿಧಾನದ ಆಶಯಕ್ಕೆ ತದ್ವಿರುದ್ದ ಎಂದು ಹೇಳಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ (UNSC) ಯಲ್ಲಿ ವಿವಾದಿತ ಸ್ಥಾನ ಎಂಬ ಹಣೆಪಟ್ಟಿಯನ್ನು ನೀಡಲಾಗಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯಗಳನ್ನು ತೆಗೆದುಕೊಂಡರೆ ಅದು ಉಭಯ ದೇಶಗಳಿಗೆ ಹಾನಿಯಾಗುತ್ತದೆ ಎಂದಿದೆ.
ಈ ಕುರಿತು ಮಾತನಾಡಿದ ಪಾಕ್ ವಿದೇಶಾಂಗ ಸಚಿವ ಷಾ ಮಹಮ್ಮದ್ ಖುರೇಷಿ ನಮ್ಮ ಸರಕಾರ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಚರ್ಚಿಸಲು ಮಂಗಳವಾರ ಸಂಸತ್ತು ಸಭೆ ಸೇರಲಿದೆ ಎಂದಿದ್ದಾರೆ.
ಪಾಕಿಸ್ಥಾನದ ಮಾಧ್ಯಮಗಳಲ್ಲಿ ದಿನವಿಡೀ ಭಾರತದ ಕುರಿತಾದ ಚರ್ಚೆಗಳು, ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿದ್ದವು. ಅಲ್ಲಿನ ಪತ್ರಿಕೆಗಳ ವೆಬ್ ಪುಟಗಳು 370ನೇ ವಿಧಿಯ ಕುರಿತಾಗಿಯೇ ಬರೆದುಕೊಂಡಿದ್ದವು. ಭಾರತದ ಈ ನಿರ್ಣಯವನ್ನು ಅಲ್ಲಿನ ಮಾಧ್ಯಮಗಳು ಕಟುವಾಗಿ ಟೀಕಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.