ಐತಿಹಾಸಿಕ ನಿರ್ಧಾರಕ್ಕೆ ಭಿನ್ನತೆಯ ದನಿ


Team Udayavani, Aug 6, 2019, 3:10 AM IST

itihaasika

ಜಮ್ಮು ಮತ್ತು ಕಾಶ್ಮೀರದಲ್ಲಿ 71 ವರ್ಷಗಳಿಂದ ಜಾರಿಯಲ್ಲಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವಂಥ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆಯೇ ಕೇಂದ್ರದ ನಿರ್ಧಾರ ಕುರಿತಂತೆ ರಾಜ್ಯದ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ತಮ್ಮ ಅಭಿಪ್ರಾಯಗಳನ್ನು “ಉದಯವಾಣಿ’ ಜತೆ ಹಂಚಿಕೊಂಡಿದ್ದಾರೆ…

ಕರ್ನಾಟಕದ ಸದನಕ್ಕೆ ಇರದ ಹಕ್ಕು ಕಾಶ್ಮೀರದ ಸದನಕ್ಕೆ ಯಾಕಿರಬೇಕು?: ನ್ಯಾ.ಸಂತೋಷ್‌ ಹೆಗ್ಡೆ
“ಇವತ್ತಿನ ಹಿನ್ನೆಲೆಯಲ್ಲಿ ಉತ್ತಮವಾದ ಹೆಜ್ಜೆ. ನಮ್ಮ ಸಂವಿಧಾನದ ಇಂತಹ ತಾರತಮ್ಯ ಬರೀ ಜಮ್ಮು-ಕಾಶ್ಮೀರಕ್ಕೆ ಮಾತ್ರ ಇತ್ತು. ಅದನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಕ್ಕೂ ಇರಲಿಲ್ಲ. ಇದು ಸರಿಯಲ್ಲ ‘ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

* ಸಮಾನತೆಯ ಆಧಾರದಡಿ ಎಲ್ಲ ರಾಜ್ಯಗಳು ಒಂದೇ ರೀತಿ ಇರಬೇಕಾಗಿತ್ತು. ಉಳಿದ ರಾಜ್ಯಗಳಿಗೆ ಇರದ ಕೆಲ ಸಂವಿಧಾನದ ಹಕ್ಕುಗಳನ್ನು 370 ಹಾಗೂ 35 (ಎ) ಮೂಲಕ ಜಮ್ಮು-ಕಾಶ್ಮೀರಕ್ಕೆ ಕೊಡಲಾಗಿತ್ತು. ಇದು ಆವತ್ತಿನ ರಾಜಕೀಯದ ಹಿನ್ನೆಲೆಯಲ್ಲಿ ಎಲ್ಲಾದರೂ ಸರಿ ಇರಬಹುದಿತ್ತೇನೂ. ಆದರೆ, ಇವತ್ತಿಗಲ್ಲ.

* ಬಹಳ ದಶಕಗಳ ಹಿಂದೆಯೇ ಇದರ ಬದಲಾವಣೆ ಆಗಬೇಕಿತ್ತು. ಆಗಿಲ್ಲ. ಆದರೆ ಇವತ್ತು ಆದದ್ದು ಉತ್ತಮ ಹೆಜ್ಜೆ ಎಂದು ನಾನು ತಿಳಿದುಕೊಂಡಿದ್ದೇನೆ. ಏಕೆಂದರೆ, ರಾಜ್ಯಗಳ ನಡುವೆ ತಾರತಮ್ಯ ಇರಬಾರದು.

* ಜಮ್ಮು-ಕಾಶ್ಮೀರದ ಪರಿಸ್ಥಿತಿಯನ್ನು ನೋಡಿಕೊಂಡು ಬಂದವರು ನಾವು. ಅಂದರೆ ಭಾರತದ ಇತರ ರಾಜ್ಯಗಳು. ಅವರು (ಕಾಶ್ಮೀರದವರು) ಅದರ ಲಾಭ ಪಡೆದುಕೊಂಡು ಸಂವಿಧಾನದ ಈ ಎರಡು ಪರಿಚ್ಛೇದದ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ ಹೊರತು ದೇಶ ಪ್ರೇಮದಿಂದ ಅಲ್ಲ. ಇದರಿಂದ ನನ್ನ ಅನಿಸಿಕೆಯಲ್ಲಿ, ಅಲ್ಲಿನ ರಾಜಕಾರಣಿಗಳಿಗೆ ಅರ್ಥ ಆಗುತ್ತದೆ, ಇನ್ನು ಮುಂದೆ ನಾವು ಇತರ ರಾಜ್ಯಗಳ ಜೊತೆಗೆ ಇದ್ದರೆ ಮಾತ್ರ ಭಾರತದ ಜೊತೆ ಇರಲು ಸಾಧ್ಯ ಅಂತ. ಆದ್ದರಿಂದ ಬಹಳ ಉತ್ತಮವಾದ ಹೆಜ್ಜೆ ಎಂದು ನಾನು ತಿಳಿದುಕೊಂಡಿದ್ದೇನೆ.

* ಕರ್ನಾಟಕದ ಸದನಕ್ಕೆ ಇರದಂತಹ ಹಕ್ಕು ಜಮ್ಮು-ಕಾಶ್ಮೀರದ ಸದನಕ್ಕೆ ಯಾಕಿರಬೇಕು? ಆವತ್ತು ಯಾವುದೇ ಕಾರಣಕ್ಕೆ ಆಗಿರಬಹುದು. ಆದರೆ, ಆವತ್ತು ಆದದ್ದೆ ತಪ್ಪು. ಆ ತಪ್ಪನ್ನು ಇವತ್ತು ಸರಿಪಡಿಸಿದ್ದೇವೆ. ಯಾವ ರೀತಿ ಅಂದರೆ ಜಮ್ಮು-ಕಾಶ್ಮೀರದ ಅಸೆಂಬ್ಲಿಗೆ 35 (ಎ) ಪ್ರಕಾರ, ಯಾರು ಕಾಶ್ಮೀರದ ಜನ ಎಂದು ಗುರುತಿಸುವ ಅಧಿಕಾರ ಕೊಡಲಾಗಿತ್ತು. ಅದೇ ರೀತಿ ಅಲ್ಲಿನ ಜನತೆಗೆ ಇತರೆ ರಾಜ್ಯಗಳ ಜನರಿಗೆ ಇಲ್ಲದಂತಹ ಹಕ್ಕು ನೀಡುವ ಅಧಿಕಾರ ಅಲ್ಲಿನ ಅಸೆಂಬ್ಲಿಗೆ ನೀಡಲಾಗಿದೆ. ಅದು ಸಂಪೂರ್ಣ ತಾರತಮ್ಯ ಅನ್ನುವುದು ನನ್ನ ಅನಿಸಿಕೆ. ಅದನ್ನು ಇವತ್ತು ಹೋಗಲಾಡಿಸಲಾಗಿದೆ.

ಇದು ಉತ್ತಮವಾದ ನಿರ್ಧಾರ ಎಂದು ನಾನು ತಿಳಿದುಕೊಂಡಿದ್ದೇನೆ. ಯಾವುದೇ ಕಾನೂನು ಅಡಚಣೆ ಬರಬಾರದು ಎಂದು ಈ ಹೆಜ್ಜೆ ತೆಗೆದುಕೊಂಡಿದ್ದಾರೆ. ಏನು ಆಗದೇ ಇರಬಹುದು ಎಂದು ನನ್ನ ಅನಿಸಿಕೆ. ಆದರೂ ಪರವಾಗಿಲ್ಲ, ಅದನ್ನು ನಾವು ಎದುರಿಸೋಣ.

370 ರದ್ದು; ಇನ್ನಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು: ನ್ಯಾ.ರಾಜೇಂದ್ರ ಬಾಬು
“ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ ಪರಿಚ್ಛೇದ 370 ರದ್ದುಗೊಳಿಸಿರುವುದು ಸಮಸ್ಯೆಯ ಪರಿಹಾರಕ್ಕಿಂತ, ಇದು ಮತ್ತಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌. ರಾಜೇಂದ್ರ ಬಾಬು ಅಭಿಪ್ರಾಯಿಸಿದ್ದಾರೆ. ಕೇಂದ್ರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಅವರು ಹೇಳಿದ್ದಿಷ್ಟು…

* ಅಷ್ಟಕ್ಕೂ ಇದೊಂದು ಸಾಮಾಜಿಕ ಹಾಗೂ ಕಾನೂನು ಸಮಸ್ಯೆಗಿಂತ ರಾಜಕೀಯ ಸಮಸ್ಯೆಯಾಗಿದೆ. ರಾಜಕೀಯವಾಗಿ ಅತ್ಯಂತ ನಾಜೂಕುತನದಿಂದ ನಿಭಾಯಿಸಬೇಕಾದ ವಿಷಯನ್ನು ಬಲವಂತದ ಕಾನೂನು ಮೂಲಕ ಬಗೆಹರಿಸುವುದು ಕಷ್ಟ.

* ಕಾಶ್ಮೀರದ ಜನರನ್ನು ನಮ್ಮ ಜೊತೆಗೆ ಕರೆದುಕೊಂಡು ಹೋಗಬೇಕಾದರೆ ಅವರ ಮನಸ್ಸುಗಳನ್ನು ಬದಲಿಸಬೇಕೇ ಹೊರತು ಬಲವಂತದ ಕಾನೂನು ಮೂಲಕ ಸಾಧ್ಯವಿಲ್ಲ. ಇದರಿಂದಾಗಿ ಕಾಶ್ಮೀರದ ಜನರು ನಮಗೆ ಹತ್ತಿರವಾಗುವ ಬದಲು ಇನ್ನಷ್ಟು ದೂರ ಹೋಗುತ್ತಾರೆ. ಕಾಶ್ಮೀರದ ಸಮಗ್ರತೆ ಹೊರಟು ಹೋದರೆ ಇನ್ನಷ್ಟು ಸಮಸ್ಯೆಗಳು ಉದ್ಭವಿಸಿ ಅನಗತ್ಯ ಗಲಾಟೆ-ಸಂಘರ್ಷಗಳು ಉಂಟಾಗಬಹುದು.

* ಭಾರತದ ಜತೆಗೆ ಕಾಶ್ಮೀರ ವಿಲೀನ ಮಾಡುವ ಸಂದರ್ಭದಲ್ಲೂ ಈ ವಿಚಾರ ದೇಶದ “ಕಾನ್ಸ್‌ಟಿಟ್ಯೂಯೆಂಟ್‌ ಅಸೆಂಬ್ಲಿ ಡಿಬೇಟ್‌’ನಲ್ಲಿ ಚರ್ಚೆಗೆ ಬಂದಿತ್ತು. ಆಗ ಕೆಲವೊಂದು ವಿನಾಯಿತಿಗಳು ಬೇಕು ಎಂದು ಕೇಳಿದಾಗ ಪರಿಚ್ಛೇದ 370 ಸೇರಿಸಲಾಯಿತು. ಅದರಲ್ಲಿ ಕಾಶ್ಮೀರದ ಜನರ ಹಿತರಕ್ಷಣೆಗೆ ಸಂಬಂಧಿಸಿದ ತೀರ್ಮಾನ ತೆಗೆದುಕೊಳ್ಳಲು ರಾಷ್ಟ್ರಪತಿಯವರಿಗೆ ವಿಶೇಷ ಅಧಿಕಾರ ನೀಡಲಾಯಿತು.

* ಅದರಂತೆ, ರಾಷ್ಟ್ರಪತಿಯವರು ಕಾಶ್ಮೀರದ “ಕಾನ್ಸ್‌ಟಿಟ್ಯೂಯೆಂಟ್‌ ಅಸೆಂಬ್ಲಿ’ ರಚಿಸಿದರು. ಅಲ್ಲಿ ಚರ್ಚೆ ನಡೆದು ಕೆಲವೊಂದು ವಿನಾಯ್ತಿಗಳನ್ನು ತೀರ್ಮಾನಿಸಿದ ಬಳಿಕ ಆ ಕಾನ್ಸ್‌ಟಿಟ್ಯೂಯೆಂಟ್‌ ಅಸೆಂಬ್ಲಿ’ ವಿಸರ್ಜನೆಗೊಂಡಿತು. ಒಮ್ಮೆ ಕಾನ್ಸ್‌ಟಿಟ್ಯೂಯೆಂಟ್‌ ಅಸೆಂಬ್ಲಿ’ ವಿಸರ್ಜನೆಗೊಂಡರೆ 370 ಕಾಯಂ ಪರಿಚ್ಛೇದ ಎಂದು ಸುಪ್ರೀಂಕೋರ್ಟ್‌ ಹೇಳಿತು. ಹೀಗೆ ಕಾಯಂ ಪರಿಚ್ಛೇದ ಎಂದು ಸುಪ್ರೀಂಕೋರ್ಟ್‌ ಹೇಳಿರುವಾಗ, ಕಾನೂ ನು ಪ್ರಕಾರ ಏನು ಮಾಡಲು ಸಾಧ್ಯ?

* ಅದೇ ರೀತಿ 35 (ಎ) ಕಾಶ್ಮೀರಕ್ಕೆ ತೆಗೆದು ಹಾಕಿದರೆ, ಅದು ಹಿಮಾಚಲ ಪ್ರದೇಶಕ್ಕೂ ಅನ್ವಯಿಸಬೇಕಾಗುತ್ತದೆ. ಕಾನೂನು ರೀತಿ ಏನೇ ತೀರ್ಮಾನ ಮಾಡಿದರೂ ಅದು ಕಷ್ಟವೇ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬಹುದು. ಆದರೆ, ಅದಕ್ಕಾಗಿ ಯಾರಾದರೂ ಮಸೂದೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಬೇಕಾಗುತ್ತದೆ.

ವಿಶೇಷ ಸ್ಥಾನಮಾನ ರದ್ದು ಸ್ವಾಗತಾರ್ಹ
ವಿಜಯಪುರ: ಜಮ್ಮು-ಕಾಶ್ಮೀರ ರಾಜ್ಯಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನದ ಸಂವಿಧಾನದ 370 ಹಾಗೂ 35(ಎ) ರದ್ದು ಮಾಡಿರುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ. ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅಭಿನಂದನಾರ್ಹರು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಘದ ಕಾಲದಿಂದಲೂ ಶ್ಯಾಮಪ್ರಸಾದ್‌ ಮುಖರ್ಜಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಕನಸು ಈಗ ಕೈಗೂಡಿದ್ದು, ಈ ಮಹಾತ್ಮರ ಆಶಯ ಈಡೇರಿದೆ. ದೇಶದೆಲ್ಲೆಡೆ ಸಂಭ್ರಮ ಮೂಡಿಸಿದೆ. ಪಾಕ್‌ ಆಕ್ರಮಿತ ಕಾಶ್ಮೀರವೂ ಭಾರತಕ್ಕೆ ಸೇರಿ ಶೀಘ್ರದಲ್ಲಿ ಅಖಂಡ ಭಾರತ ಕಲ್ಪನೆ ಸಾಕಾರಗೊಂಡು, ಕಾಶ್ಮೀರದಲ್ಲಿ ಇನ್ನು ಶಾಶ್ವತ ಶಾಂತಿ ನೆಲೆಸಲಿದೆ ಎಂದರು.

“ಸಮಸ್ಯೆಗೆ ಪರಿಹಾರ ಸಿಕ್ಕರೆ ಒಳ್ಳೆಯದು’
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದು ಕ್ರಮದಿಂದ ಮುಂದಿನ ದಿನಗಳಲ್ಲಿ ಆ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ತುಂಬಾ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಜಮ್ಮು -ಕಾಶ್ಮೀರಕ್ಕೆ ವಿಶೇಷಾಧಿಕಾರದ ಸಂವಿಧಾನದ ಕಲಂ 370 ಹಾಗೂ 35 ಎ ರದ್ದು ವಿಚಾರವಾಗಿ ಪರ ಹಾಗೂ ವಿರೋಧ ಎರಡೂ ಇದೆ. ಹೆಚ್ಚಿನ ರೀತಿಯಲ್ಲಿ ಇದು ಆಗಬೇಕು ಎಂಬ ಭಾವನೆ ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ಇದರಿಂದ ಮುಂದಿನ ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ತುಂಬಾ ಒಳ್ಳೆಯದು ಎಂದು ತಿಳಿಸಿದರು.

ನರೇಂದ್ರ ಮೋದಿ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಗೃಹಮಂತ್ರಿ ಮತ್ತು ಪ್ರಧಾನಮಂತ್ರಿಯವರ ದೃಢ ನಿರ್ಧಾರವನ್ನು ಪ್ರಪಂಚವೇ ಸ್ವಾಗತ ಮಾಡುತ್ತದೆ. ಜಮ್ಮು-ಕಾಶ್ಮೀರದಲ್ಲಿ ಲಕ್ಷಾಂತರ ಸಾರ್ವಜನಿಕರ ಸಾವು ನೋವುಗಳಿಗೂ ಇದು ಉತ್ತರವಾಗಿದೆ.
-ಕೆ.ಎಸ್‌.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ಸಂವಿಧಾನ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಲು ಮುಂದಾಗಿರುವ ನಿರ್ಧಾರದ ಕುರಿತು ಪೂರ್ಣ ಮಾಹಿತಿ ಇಲ್ಲ. ಹೀಗಾಗಿ ಆತುರವಾಗಿ ಈ ವಿಷಯದಲ್ಲಿ ಪ್ರತಿಕ್ರಿಯಿಸಲಾರೆ. ಕೇಂದ್ರದ ಈ ನಿರ್ಧಾರದ ಬಗ್ಗೆ ಮನಮೋಹನ ಸಿಂಗ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಕೂಲಂಕಷವಾಗಿ ಚರ್ಚಿಸಲಿದ್ದಾರೆ.
-ಎಂ.ಬಿ. ಪಾಟೀಲ, ಮಾಜಿ ಸಚಿವ

ಕೇಂದ್ರದಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದರೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಈಗ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ನುಡಿದಂತೆ ನಡೆದಿದ್ದಾರೆ. ಕೋಟ್ಯಂತರ ದೇಶಪ್ರೇಮಿಗಳ ದಶಕಗಳ ಬೇಡಿಕೆ ಇಂದು ಈಡೇರಿದೆ. ಮೋದಿ ಅವರ ನಾಯಕತ್ವದಲ್ಲಿ ಅಖಂಡ ಭಾರತ ಕಲ್ಪನೆ ಸಾಕಾರಗೊಳ್ಳುತ್ತಿದೆ.
-ನಳಿನ್‌ಕುಮಾರ್‌ ಕಟೀಲು, ಸಂಸದ

ಟಾಪ್ ನ್ಯೂಸ್

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.