ಗುಂಡಿನ ಸದ್ದಿನ ನಡುವೆ ತ್ರಿವರ್ಣ ಧ್ವಜ ಹಾರಿಸಿದ್ದ ಮುರಳಿ ಮನೋಹರ್ ಜೋಷಿ
Team Udayavani, Aug 6, 2019, 5:53 AM IST
1992ರಲ್ಲಿ ಭಾರತೀಯ ಜನತಾ ಪಕ್ಷದ ಮುಖ್ಯಸ್ಥರಾಗಿದ್ದದ್ದು ಮುರಳಿ ಮನೋಹರ್ ಜೋಷಿ. ಅವರು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ತೀವ್ರ ವಿರೋಧಿಗಳಾಗಿದ್ದರು. 1992ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರು ಬಿಗಿ ಹಿಡಿತ ಹೊಂದಿದ್ದರು.
ಅಲ್ಲಿನ ಬೀದಿಗಳು ಅವರ ನಿಯಂತ್ರಣದಲ್ಲಿದ್ದವು. ಅದೇ ವೇಳೆ ಜಮ್ಮುವಿನಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ, ಜೋಷಿ ಶ್ರೀನಗರದ ಲಾಲ್ಚೌಕದಲ್ಲಿ ಜ.26ರಂದು ರಾಷ್ಟ್ರಧ್ವಜ ಹಾರಿಸಿಯೇ ಹಾರಿಸುತ್ತೇವೆ ಎಂದು ಘೋಷಿಸಿದರು. ತಕ್ಷಣ ಅಲ್ಲಿ ಉಗ್ರಗಾಮಿ ಚಟುವಟಿಕೆಗಳು ತೀವ್ರಗೊಂಡಿದ್ದವು. ಜೋಷಿಯನ್ನು ತಡೆಯಲು ಹಿಂಸಾತ್ಮಕ ಚಟುವಟಿಕೆ ಜೋರಾಯಿತು. ಇದನ್ನು ಸವಾಲಾಗಿ ಸ್ವೀಕರಿಸಿದ ಜೋಷಿಯವರು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಏಕತಾಯಾತ್ರೆ ನಡೆಸಿದರು. ಸೇನೆ ಹರಸಾಹಸಪಟ್ಟರೂ ಪರಿಸ್ಥಿತಿ ಕೈಮೀರಿ ಹೋಗಿತ್ತು.
ಜ.24ರಂದು ಬಾಂಬ್ ಸ್ಫೋಟಿಸಿ ಹಲವು ಗಾಯಗೊಂಡಿದ್ದರು. ಆ ವೇಳೆ ಅಲ್ಲಿ ಕರ್ಫ್ಯೂ ಜಾರಿಯಾಗಿತ್ತು. ಆ ಹಂತದಲ್ಲಿ ಜೋಷಿಯನ್ನು ವಿಮಾನದ ಮೂಲಕ ಲಾಲ್ಚೌಕದಲ್ಲಿ ಇಳಿಸಲಾಯಿತು. ಉಗ್ರಗಾಮಿಗಳು ಮತ್ತು ಸೇನೆಯ ನಡುವೆ ಸಂಪೂರ್ಣ ಯುದ್ಧ ನಡೆಯುತ್ತಿತ್ತು. ಬರೀ ಗುಂಡಿನ ಸದ್ದಿನ ನಡುವೆ ಜೋಷಿ, ಮಧ್ಯಾಹ್ನ ನಂತರ ಲಾಲ್ಚೌಕದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.