ನಮ್ಮ ವಿಚಾರಕ್ಕೂ ಪಾಕ್ ತರ್ಲೆ
Team Udayavani, Aug 6, 2019, 6:00 AM IST
ಜಮ್ಮು ಕಾಶ್ಮೀರ ಕುರಿತ ಭಾರತದ ಮಹತ್ವದ ನಿರ್ಧಾರವನ್ನು ಪಾಕಿಸ್ತಾನ ಎಂದಿನಂತೆ ತಿರಸ್ಕರಿಸಿದೆ.ಇದೊಂದು ಅಕ್ರಮ ಮತ್ತು ಏಕಪಕ್ಷೀಯ ನಿರ್ಧಾರ ಎಂದು ಕರೆದಿರುವ ಅದು, ಇದರ ವಿರುದಟಛಿ ಹೋರಾಡಲು ಲಭ್ಯವಿರುವ ಎಲ್ಲಾ ಅವಕಾಶಗಳನ್ನೂ ಬಳಸಿಕೊಳ್ಳುವುದಾಗಿ ಹೇಳಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಈ ಬೆಳವಣಿಗೆಯಿಂದಾಗಿ ಕಾಶ್ಮೀರದ ಸ್ಥಿತಿ ಮತ್ತಷ್ಟು ಹದಗೆಡಬಹುದು ಹಾಗೂ ಅಣ್ವಸ್ತ್ರಹೊಂದಿರುವ ಎರಡು ದೇಶಗಳ ಮಧ್ಯೆ ಇನ್ನಷ್ಟು ವೈರತ್ವಕ್ಕೆ ಕಾರಣವಾಗಬಹುದು ಎಂದಿದ್ದಾರೆ. ಪಾಕ್ನ ವಿದೇಶಾಂಗ ಕಾರ್ಯದರ್ಶಿ, ಭಾರತ ಅಂತಾರಾಷ್ಟ್ರೀಯ ಒಪ್ಪಂದ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಬದಿಗೆ ಸರಿಸಿದೆ ಎಂದು ಆರೋಪಿಸಿದ್ದಾರೆ.
ರಾಜ್ಯಸಭೆಯಲ್ಲಿ ಬೆಂಬಲ
ಸಂಖ್ಯಾಬಲದ ಆಧಾರದಲ್ಲಿ ಎನ್ಡಿಎ ಸರ್ಕಾರಕ್ಕೆ, ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳುವುದು ಕಷ್ಟದ ಸ್ಥಿತಿಯೇ ಆಗಿತ್ತು. ಆದರೆ, ಕಳೆದ 10 ದಿನದಲ್ಲಿ
ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್, ಆರ್ಟಿಐ ಮಸೂದೆಗಳ ಪಾಸ್ ಮಾಡಿಸಿಕೊಂಡಿದೆ. ಬಿಜೆಡಿ, ಎಐಎಡಿಎಂಕೆ, ವೈಎಸ್ಆರ್ ಕಾಂಗ್ರೆಸ್,
ಟಿಆರ್ಎಸ್ನಂಥ ಪಕ್ಷಗಳ ಬೆಂಬಲ ಸಿಕ್ಕಿದ್ದರಿಂದ ಕೇಂದ್ರಕ್ಕೆ ಆತ್ಮವಿಶ್ವಾಸ ಬಂದಿತ್ತು. ಹೀಗಾಗಿಯೇ ಜಮ್ಮು ಕಾಶ್ಮೀರದ ಬಗ್ಗೆ ನಿರ್ಧಾರ ತೆಗೆದುಕೊಂಡು ಲೋಕಸಭೆಗೂ ಮುನ್ನವೇ ರಾಜ್ಯಸಭೆಯಲ್ಲಿ ಮಂಡನೆ ಮಾಡಿ ಪಾಸ್ ಮಾಡಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.