ಪಾಕಿಸ್ಥಾನ ಪ್ರವಾಸಕ್ಕೆ ಬಲಿಷ್ಠ ಪಡೆ
ಡೇವಿಸ್ ಕಪ್ ಟೆನಿಸ್
Team Udayavani, Aug 6, 2019, 5:55 AM IST
ಹೊಸದಿಲ್ಲಿ: ಮುಂದಿನ ತಿಂಗಳು ಪಾಕಿಸ್ಥಾನದಲ್ಲಿ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿ ಆಡಲಿರುವ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಎಲ್ಲ ಅಗ್ರ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಪ್ರಜ್ಞೆàಶ್ ಗುಣೇಶ್ವರನ್ ಮತ್ತು ರಾಮ್‌ಕುಮಾರ್ ರಾಮನಾಥನ್ ಸಿಂಗಲ್ಸ್ ಸವಾಲು ಎದುರಿಸಲಿದ್ದು, ರೋಹನ್ ಬೋಪಣ್ಣ-ದಿವಿಜ್ ಶರಣ್ ಜೋಡಿ ಡಬಲ್ಸ್ ನಲ್ಲಿ ಸೆಣಸಲಿದೆ.
ಸಾಕೇತ್ ಮೈನೆನಿ ವಾಪಸ್
ಸುಮಿತ್ ನಗಲ್ ಗಾಯಾಳಾಗಿ ಹಿಂದೆ ಸರಿಯಲು ನಿರ್ಧರಿಸಿದ್ದರಿಂದ ಸಾಕೇತ್ ಮೈನೆನಿ ಭಾರತ ತಂಡಕ್ಕೆ ವಾಪಸಾದರು. ಮೈನೆನಿ ಸಿಂಗಲ್ಸ್ ಹಾಗೂ ಡಬಲ್ಸ್ ಗಳೆರಡರಲ್ಲೂ ಆಡುವ ಛಾತಿ ಹೊಂದಿದ್ದಾರೆ. ಅವರು ಒಂದು ವರ್ಷದ ಬಳಿಕ ತಂಡಕ್ಕೆ ಕರೆ ಪಡೆದಿದ್ದಾರೆ.
ಕಳೆದ ಸೆಪ್ಟಂಬರ್‌ನಲ್ಲಿ ಕೋಲ್ಕತಾದಲ್ಲಿ ನಡೆದ ಇಟೆಲಿ ವಿರುದ್ಧದ ಪಂದ್ಯಾವಳಿ ವೇಳೆ ಮೈನೆನಿ ತಂಡದಲ್ಲಿದ್ದರು. ಆದರೆ ಆಡುವ ಅವಕಾಶ ಲಭಿಸಿರಲಿಲ್ಲ. ಇದಕ್ಕೂ ಮುನ್ನ ಸರ್ಬಿಯಾ ಪ್ರವಾಸದ ವೇಳೆ “ವರ್ಲ್ಡ್ ಗ್ರೂಪ್ ಪ್ಲೇ ಆಫ್’ ಕೂಟದಲ್ಲಿ ರೋಹನ್ ಬೋಪಣ್ಣ ಜತೆ ಡಬಲ್ಸ್ ಆಡಿದ್ದರು. ಕಳೆದ ವಾರವಷ್ಟೇ ಅರ್ಜುನ್ ಖಾಢೆ ಜತೆ “ಚೆಂಗುx ಚಾಲೆಂಜರ್’ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಇವರ ಪಾಲಿಗಿದೆ.ಪಾಕಿಸ್ಥಾನ ವಿರುದ್ಧ ಈವರೆಗೆ 6 ಸಲ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಭಾರತ ಎಲ್ಲದರಲ್ಲೂ ಗೆದ್ದು ಅಜೇಯ ದಾಖಲೆ ಕಾಯ್ದುಕೊಂಡಿದೆ.
ಭಾರತ ತಂಡ: ಪ್ರಜ್ಞೇಶ್ ಗುಣೇಶ್ವರನ್, ರಾಮ್‌ಕುಮಾರ್ ರಾಮನಾಥನ್, ಸಾಕೇತ್ ಮೈನೆನಿ, ರೋಹನ್ ಬೋಪಣ್ಣ, ದಿವಿಜ್ ಶರಣ್.
ಮೀಸಲು ಆಟಗಾರ: ಶಶಿಕುಮಾರ್ ಮುಕುಂದ್.
ನಾಯಕ: ಮಹೇಶ್ ಭೂಪತಿ.
ಕೋಚ್: ಜೀಶನ್ ಅಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.