ನೋಡ ಬನ್ನಿ ಭೈರಪ್ಪ ಫಾಲ್ಸ್ ಸೊಬಗು
Team Udayavani, Aug 6, 2019, 9:36 AM IST
ಹುಬ್ಬಳ್ಳಿ: ದೂರದೂರಿನ ಫಾಲ್ಸ್ ನೋಡಲು ಹಂಬಲಿಸುವ ನಾವು, ನಮ್ಮ ಸುತ್ತಲಿನ ಪರಿಸರದಲ್ಲೇ ಇರುವ ಕೆಲವು ನಿಸರ್ಗದತ್ತ ಸುಂದರ ಹಳ್ಳ-ಕೊಳ್ಳ, ಜಲಪಾತಗಳ ಬಗ್ಗೆ ಅರಿವೇ ಇರುವುದಿಲ್ಲ. ಇಂತಹ ರಮಣೀಯ, ಆಕರ್ಷಕವಾದ ಚಿಕ್ಕ, ಚೊಕ್ಕದಾದ ಫಾಲ್ಸ್ವೊಂದು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿದೆ.
ಕಲಘಟಗಿ ತಾಲೂಕಿನ ಬುದನಗುಡ್ಡ ಬೆಟ್ಟದ ಸಾಲಿನಲ್ಲಿರುವ ಭೈರಪ್ಪನ ಫಾಲ್ಸ್ ಅಥವಾ ಭೈರಪ್ಪ ಕೊಳ್ಳ ಎಂದೇ ಕರೆಯಲ್ಪಡುವ ಈ ಫಾಲ್ಸ್ ಬಗ್ಗೆ ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ. ಸುತ್ತಲಿನ ಎರಡ್ಮೂರು ಹಳ್ಳಿಗಳ ಜನರನ್ನು ಬಿಟ್ಟರೆ ಇಂತಹದೊಂದು ಫಾಲ್ಸ್ ಇದೇ ಎಂಬುದು ಕಲಘಟಗಿ ತಾಲೂಕಿಗೆ ಸಂಪೂರ್ಣ ಮಾಹಿತಿಯೇ ಇಲ್ಲ.
ಕುರುವಿನಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಈ ಫಾಲ್ಸ್ ಇದೆ. ಗ್ರಾಮದಿಂದ ಎರಡು ಕಿಮೀ ದೂರದಲ್ಲಿ ಬುದನಗುಡ್ಡ ಹಿಂಭಾಗದಲ್ಲಿದೆ. ಮಳೆಗಾಲದಲ್ಲಿ ಮಾತ್ರ ಈ ಫಾಲ್ಸ್ನ ಸೌಂದರ್ಯ ಸವಿಯಲು ಸಾಧ್ಯ. ಮಳೆ ಕಡಿಮೆ ಆದಂತೆ ಇಲ್ಲಿನ ನೀರಿನ ಹರಿವು ಇಳಿಮುಖವಾಗಿ ಜಲಪಾತದ ಆಕರ್ಷಣೆ ಕ್ಷೀಣಿಸುತ್ತದೆ. ಆದಷ್ಟು ಮಳೆ ಹೆಚ್ಚಿರುವ ಸಂದರ್ಭದಲ್ಲೇ ಇಲ್ಲಿಗೆ ಭೇಟಿ ಕೊಡುವುದು ಉತ್ತಮ.
ಫಾಲ್ಸ್ ಗೆ ‘ಭೈರಪ್ಪ ಫಾಲ್ಸ್’ ಎಂದು ಹೆಸರು ಬರಲು ಹಿನ್ನೆಲೆಯೂ ಇದೆ. ಈ ಪ್ರದೇಶಲ್ಲಿ ಭೈರಪ್ಪ ಗುಹೆ ಹಾಗೂ ಭೈರಪ್ಪ ದೇವರು ಇರುವುದರಿಂದ ಈ ಫಾಲ್ಸ್ ಗೆ ಭೈರಪ್ಪ ಫಾಲ್ಸ್, ಭೈರಪ್ಪ ಕೊಳ್ಳ ಎಂಬ ಹೆಸರಿನಿಂದ ಸ್ಥಳೀಯರು ಇದನ್ನು ಗುರುತಿಸಿದ್ದಾರೆ.
ಬಿದ್ದ ನೀರು ಇಲ್ಲಿ ಮಾಯ!: ಮೇಲಿಂದ ಬೀಳುವ ನೀರು ಸುಮಾರು 200 ಮೀಟರ್ ದೂರ ಸಾಗಿ ಗುಂಡಿಯೊಂದಕ್ಕೆ ಸೇರುತ್ತೆ. ಅಲ್ಲಿಂದ ನೀರು ಎಲ್ಲಿ ಹೋಗಿ ಸೇರುತ್ತೆ ಅಂತ ಯಾರಿಗೂ ತಿಳಿದಿಲ್ಲ. ಇದು ಈ ಸ್ಥಳದ ವಿಸ್ಮಯವೂ ಹೌದು. ಕೆಲವರ ಪ್ರಕಾರ ಮುತ್ತಗಿ ಗ್ರಾಮದ ಬಳಿಯ ಹಳ್ಳಕ್ಕೆ ಇಲ್ಲಿನ ನೀರು ಗುಪ್ತಗಾಮಿನಿ ಆಗಿ ಹರಿದು ಸೇರುತ್ತೆ ಎಂಬುದು ಸ್ಥಳೀಯರಾದ ಬಸವಣ್ಣೆಪ್ಪ ಚಂಡುನವರ ಹಾಗೂ ನಾರಾಯಣ ತಿರ್ಲಾಪುರ ಅವರ ಅಭಿಪ್ರಾಯ.
ಧಾರವಾಡದಿಂದ ಮಾರ್ಗ: ಧಾರವಾಡ- ಕಲಘಟಗಿ ಮಾರ್ಗದಲ್ಲಿ ಸಂಚರಿಸಿದರೆ ಸುಮಾರು 25 ಕಿಮೀ ನಂತರ ಗುಡಿಹಾಳ ಕ್ರಾಸ್ ಬರುತ್ತದೆ. ಅಲ್ಲಿಂದ ಎಡಭಾಗಕ್ಕೆ ಚಳಮಟ್ಟಿ ಕ್ರಾಸ್ ರಸ್ತೆ ಮೂಲಕ ಮೂರು ಕಿಮೀ ಸಾಗಿದರೆ ಕುರುವಿನಕೊಪ್ಪ ಗ್ರಾಮದ ಕ್ರಾಸ್ ಸಿಗುತ್ತದೆ. ಅಲ್ಲಿಂದ ಕುರುವಿನಕೊಪ್ಪ ತಲುಪಿ ಎರಡು ಕಿಮೀ ದೂರ ತೆರಳಿದರೆ ಭೈರಪ್ಪ ಫಾಲ್ಸ್ ಕಾಣಸಿಗುತ್ತದೆ.
ಹುಬ್ಬಳ್ಳಿಯಿಂದ ಪ್ರಯಾಣ ಹೇಗೆ?: ಹುಬ್ಬಳ್ಳಿ-ಕಲಘಟಗಿ ರಸ್ತೆ ಮೂಲಕ 12 ಕಿಮೀ ಸಾಗಿದರೆ ಚಳಮಟ್ಟಿ ಕ್ರಾಸ್ ಬರುತ್ತದೆ. ಅಲ್ಲಿಂದ ಬಲಕ್ಕೆ ಹುಲಕೊಪ್ಪ ರಸ್ತೆ ಮೂಲಕ ಕುರುವಿನಕೊಪ್ಪ ಗ್ರಾಮಕ್ಕೆ ತಲುಪಬೇಕು. ಅಲ್ಲಿ ಗ್ರಾಮಸ್ಥರನ್ನು ವಿಚಾರಿಸಿದರೆ ಫಾಲ್ಸ್ ಬಗ್ಗೆ ಮಾಹಿತಿ ಸಿಗುತ್ತದೆ.
ಅಗತ್ಯ-ವಸ್ತುಗಳ ಸಂಗ್ರವಿರಲಿ: ಭೈರಪ್ಪ ಫಾಲ್ಸ್ ನೋಡಲು ಹೋಗುವವರು ಕಡ್ಡಾಯವಾಗಿ ಅಗತ್ಯ ವಸ್ತು ತೆಗೆದುಕೊಂಡು ಹೋಗಲೇಬೇಕು. ಕುಡಿಯುವ ನೀರು, ಆಹಾರ, ಬಟ್ಟೆ ಇತ್ಯಾದಿ ಇದ್ದರೆ ಉತ್ತಮ.
ಕಾರು ಬೇಡ; ಬೈಕ್ ಇರಲಿ: ಇಲ್ಲಿಗೆ ಪ್ರಯಾಣಿಸುವ ಚಾರಣಿಗಳು ಬೈಕ್ ಮೂಲಕ ತೆರಳಿದರೆ ಉತ್ತಮ. ಕುರುವಿನಕೊಪ್ಪ ಗ್ರಾಮದವರೆಗೆ ಕಾರಲ್ಲಿ ತೆರಳಬಹುದು. ಮುಂದೆ ಸಾಗಬೇಕಾದರೆ ಗ್ರಾಮದಿಂದ ಎರಡು ಕಿಮೀ ನಡೆಯುವುದು ಅನಿವಾರ್ಯ. ಬೈಕ್ ಸವಾರರು ಫಾಲ್ಸ್ ಹತ್ತಿರದವರಿಗೂ ತೆರಳಬಹುದು. ಹೀಗಾಗಿ ಇಲ್ಲಿಗೆ ಬೈಕ್ ಸವಾರಿಯೇ ಅತ್ಯುತ್ತಮ ಆಯ್ಕೆ.
ಫ್ಯಾಮಿಲಿಗೂ ಓಕೆ: ಭೈರಪ್ಪ ಫಾಲ್ಸ್ ಹರಿವು ಶಾಂತ. ಅಷ್ಟೊಂದು ರಭಸವೂ ಇಲ್ಲ. ಗುಂಡಿಗಳೂ ಇಲ್ಲ. ಅಪಾಯಕ್ಕೆ ಇಲ್ಲಿ ಆಸ್ಪದವೂ ಇಲ್ಲ. ಹೀಗಾಗಿ ಕುಟುಂಬ ಸಮೇತರಾಗಿ ಇಲ್ಲಿಗೆ ಭೇಟಿ ಕೊಡಬಹುದು.
ನೋಡ ಬನ್ನಿ ಭೈರಪ್ಪ ಫಾಲ್ಸ್ ಸೊಬಗು:
ಸುಮಾರು 10 ಅಡಿ ಅಗಲ ಹಾಗೂ 20 ಅಡಿ ಮೇಲಿಂದ ಧುಮುಕುವ ಇಲ್ಲಿನ ನೀರು ಶುದ್ಧ ಹಾಲಿನಂತೆ ಕಂಗೊಳಿಸುತ್ತದ್ತೆ. ಮಳೆ ಹೆಚ್ಚಾದರಂತೂ ಇಲ್ಲಿ ರಭಸದಿಂದ ಬೀಳುವ ನೀರನ್ನು ನೋಡುವುದೇ ಒಂದು ಆನಂದ.
ಗೆಳೆಯರೊಂದಿಗೆ ಎರಡು ದಿನದ ಹಿಂದೆ ತೆರಳಿದ್ದೆ. ಫಾಲ್ಸ್ ನೋಡಲು ತುಂಬಾ ದೂರ ಹೋಗಿ ಹಣ ಖರ್ಚು ಮಾಡುವ ಬದಲು ಸ್ಥಳೀಯವಾಗಿಯೇ ಸಿಗುವ ಭೈರಪ್ಪ ಫಾಲ್ಸ್ಗೆ ಭೇಟಿ ನೀಡಬಹುದು. ಕುರುವಿನಕೊಪ್ಪದಿಂದ ಫಾಲ್ಸ್ಗೆ ತೆರಳುವ ರಸ್ತೆ ಅಭಿವೃದ್ಧಿಪಡಿಸಬೇಕು. ಇದನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಬೇಕು.•ಶಂಕರ ದಾಸನಕೊಪ್ಪ, ಹಿರೇಹೊನ್ನಳ್ಳಿ ಗ್ರಾಮದ ನಿವಾಸಿ
•ಪ್ರಹ್ಲಾದಗೌಡ ಗೊಲ್ಲಗೌಡರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Land Issue; ಯಾವ ಕಾರಣಕ್ಕೂ ರೈತರ ಜಮೀನು ಮುಟ್ಟಲ್ಲ: ಜಮೀರ್ ಅಹ್ಮದ್
Waqf Land Issue: ವಕ್ಫ್ ಕಾನೂನು ತೆಗೆದು ಹಾಕುವುದೇ ಸೂಕ್ತ: ಸಚಿವ ಜೋಶಿ
Hubballi: ವಕ್ಫ್ ಗೊಂದಲ ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ: ಶೆಟ್ಟರ್
Waqf: ರೈತರ ಭೂಮಿ ಕಬಳಿಸಲು ವಕ್ಫ್ ಗೆ ಕಾಂಗ್ರೆಸ್ ಕುಮ್ಮಕ್ಕು: ಅರವಿಂದ್ ಬೆಲ್ಲದ
BJP: ಹೈಕಮಾಂಡ್ ಸೂಚಿಸಿರುವ ಅಭ್ಯರ್ಥಿ ಪರ ಕೆಲಸ: ನಿರಾಣಿ
MUST WATCH
ಹೊಸ ಸೇರ್ಪಡೆ
“ಟಾಪ್’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?
Congress Guarantee: 1.25 ಕೋಟಿ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಪಾವತಿ
Madurai Bench: ಷರಿಯತ್ ಕೌನ್ಸಿಲ್ ಕೋರ್ಟ್ ಅಲ್ಲ: ಮದ್ರಾಸ್ ಹೈಕೋರ್ಟ್
Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು
Fake Call: ಹುಸಿ ಬಾಂಬ್ ಕರೆ ಹಿಂದೆ ಭಯೋತ್ಪಾದನೆ ಕುರಿತ ಪುಸ್ತಕ ಬರೆದವನ ಕೈವಾಡ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.