ಜಿಲ್ಲೆಯಲ್ಲಿ ನಿಲ್ಲದ ಜಿಟಿಜಿಟಿ ಮಳೆ

•ಬೆಣ್ಣೆತೋರಾ-ಅಮರ್ಜಾ-ಗಂಡೋರಿನಾಲಾ-ಚಂದ್ರಂಪಳ್ಳಿ ಜಲಾಶಯಕ್ಕೆ ಇನ್ನೂ ಬಂದಿಲ್ಲ ನೀರು

Team Udayavani, Aug 6, 2019, 12:01 PM IST

gb-tdy-3

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ವಾರದಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆಯಾದರೂ ಎಲ್ಲೂ ಹಳ್ಳ-ಕೊಳ್ಳಗಳು ಭರ್ತಿಯಾಗಿಲ್ಲ.

ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಮಹಾರಾಷ್ಟ್ರದ ಪುಣೆ ಹತ್ತಿರದ ವೀರ ಜಲಾಶಯದಿಂದ ಹರಿಬಿಟ್ಟ ನೀರು ಜಿಲ್ಲೆಯ ಜೀವನಾಡಿ ಭೀಮಾ ನದಿಗೆ ಬಂದು ಭೀಮಾ ಏತ ಜಲಾಶಯದಲ್ಲಿ ಸಂಗ್ರಹವಾಗುತ್ತಿದೆ. ಹಾಗಾಗಿ ಜಲಾಶಯ ಈಗ ಅರ್ಧದಷ್ಟು ಭರ್ತಿಯಾಗಿದೆ.

ಸೊನ್ನ ಬಳಿಯ ಭೀಮಾ ಏತ ನೀರಾವರಿ ಜಲಾಶಯ ಭರ್ತಿಯಾದ ನಂತರ ಕೆಳಗಡೆ ಘತ್ತರಗಾ, ಗಾಣಗಾಪುರ, ಕಲ್ಲೂರ ಸೇತುವೆ ಮೂಲಕ ಕಲಬುರಗಿ ನಗರಕ್ಕೆ ಪೂರೈಕೆಯಾಗಿರುವ ಸರಡಗಿ ಸೇತುವೆಗೆ ಬರುತ್ತದೆ.

ಜಿಲ್ಲೆಯ ಬೆಣ್ಣೆತೋರಾ, ಅಮರ್ಜಾ, ಗಂಡೋರಿನಾಲಾ ಚಂದ್ರಂಪಳ್ಳಿ ಜಲಾಶಯಗಳಲ್ಲಿ ಇನ್ನೂ ನೀರು ಬಂದಿಲ್ಲ. ಈ ಎಲ್ಲ ಜಲಾಶಯಗಳು ಖಾಲಿಯಾಗಿಯೇ ಇವೆ. ವಾರದಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ಒಂದನಿ ನೀರಿನ ಪ್ರಮಾಣ ಹೆಚ್ಚಳವಾಗಿಲ್ಲ.

ಬೆಳೆಗಳಿಗೆ ಹೆಚ್ಚಿನ ಅನುಕೂಲ: ವಾರದಿಂದ ಸಣ್ಣ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಬೆಳೆಗಳಿಗೆ ಉತ್ತಮವಾಗಿದೆ. ಅದರಲ್ಲೂ ತೊಗರಿಗೆ ಹೇಳಿ ಮಾಡಿಸಿದಂತಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಹತ್ತಿ ಎರಡು ಲಕ್ಷ ಸಮೀಪ ಎಕರೆ ಭೂಮಿಯಲ್ಲಿ ಬಿತ್ತನೆಯಾಗಿದೆ. ಇದಕ್ಕೂ ಸಹ ಅನುಕೂಲವಾಗಿದೆ. ಆದರೆ ಸತತ ಮಳೆಯಿಂದ ಅಲ್ಪಾವಧಿ ಬೆಳೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಧಕ್ಕೆಯಾಗುವ ಸಾಧ್ಯತೆಗಳಿವೆ.

ಸತತ ಮಳೆಯಿಂದ ಕಳೆ ಸಹ ಬೆಳೆಗಳಿಗಿಂತ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಬೆಳೆಗಳ ಬೆಳವಣಿಗೆಗೆ ಹೊಡೆತ ಬೀಳಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕಳೆ ತೆಗೆಯುವುದು ರೈತನಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ದನಕರುಗಳಿಗೆ ಇನ್ನೂ ಪರಿಪೂರ್ಣ ಮೇವು ತಿನ್ನುವಷ್ಟು ಕಳೆ ಬೆಳೆದಿಲ್ಲ. ಹೀಗಾಗಿ ಜಿಟಿಜಿಟಿ ಮಳೆ ನಡುವೆ ದನಕರುಗಳಿಗೆ ಮೇವು ಹಾಕುವುದು ಕಷ್ಟವಾಗುತ್ತಿದೆ.

ಮಳೆ ವಿವರ: ಕಳೆದ ಆಗಸ್ಟ್‌ 1ರಿಂದ ಕಳೆದ ಐದು ದಿನಗಳಲ್ಲಿ ಜಿಲ್ಲಾದ್ಯಂತ 59 ಮಿಮೀ ಮಳೆಯಾಗಿದೆ. ಸರಾಸರಿ 26 ಮಿಮೀ ಮಳೆ ಪೈಕಿ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಫ‌ಜಲಪುರ ತಾಲೂಕಿನಲ್ಲಿ ಕಳೆದ ಐದು ದಿನಗಳ ಕಾಲ ಒಟ್ಟಾರೆ 34 ಮಿಮೀ, ಆಳಂದ ತಾಲೂಕಿನಲ್ಲಿ 58 ಮಿಮೀ, ಚಿಂಚೋಳಿ ತಾಲೂಕಿನಲ್ಲಿ 105 ಮಿಮೀ, ಚಿತ್ತಾಪುರ ತಾಲೂಕಿನಲ್ಲಿ 62 ಮಿಮೀ, ಕಲಬುರಗಿ ತಾಲೂಕಿನಲ್ಲಿ 66 ಮಿಮೀ, ಜೇವರ್ಗಿ ತಾಲೂಕಿನಲ್ಲಿ ಕೇವಲ 30 ಮಿಮೀ ಮಳೆಯಾಗಿದೆ. ಸೇಡಂ ತಾಲೂಕಿನಲ್ಲಿ 62 ಮಿಮೀ ಮಳೆಯಾಗಿದೆ.

ಜೇವರ್ಗಿ ತಾಲೂಕಿನಲ್ಲಿ ಜೂನ್‌ 7ರ ಮೃಗಶಿರ ಮಳೆ ಆರಂಭದಿಂದಲೂ ಕೊರತೆವಿದೆ. ಜೂನ್‌ ತಿಂಗಳಲ್ಲಿ ಶೇ. 23ರಷ್ಟು ಹಾಗೂ ಜುಲೈ ತಿಂಗಳಲ್ಲಿ ಶೇ. 38ರಷ್ಟು ಮಳೆ ಕೊರತೆಯಾಗಿತ್ತು. ಈಗಲೂ ಜೇವರ್ಗಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಮಳೆ ಬೆಳೆಗೆ ತಕ್ಕ ಬಂದಿಲ್ಲ.

ಟಾಪ್ ನ್ಯೂಸ್

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.