ಕಾರ್ಯಾಗಾರದಿಂದ ಸ್ಫೂರ್ತಿ ಪಡೆದು ಮನೆಯಲ್ಲಿ ಮಳೆಕೊಯ್ಲು ಅಳವಡಿಕೆ

"ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು

Team Udayavani, Aug 7, 2019, 5:37 AM IST

s-25

ಸರಳ ವಿಧಾನದಲ್ಲಿ ಅಳವಡಿಕೆ
“ಉದಯವಾಣಿ’ ಮನೆಮನೆಗೆ ಮಳೆಕೊಯ್ಲು ಅಭಿಯಾನದಿಂದ ಸಿಕ್ಕ ಮಾಹಿತಿ, ಮಾರ್ಗದರ್ಶನ ಪಡೆದುಕೊಂಡು ಕಟೀಲು ಮಲ್ಲಿಗೆಯಂಗಡಿಯ ನಾರಾಯಣ ಬಂಗೇರ ಅವರು ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಛಾವಣಿಯ ನೀರು ವ್ಯರ್ಥವಾಗದಂತೆ ತಡೆದು ಬಾವಿಗೆ ಸರಳ ವಿಧಾನದಲ್ಲಿ ಬಿಡುತ್ತಿದ್ದಾರೆ. ನೀರು ಶುದ್ಧಗೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸುಮಾರು 2 ಸಾವಿರ ರೂ. ಖರ್ಚು ತಗುಲಿದೆ. ಎಂಆರ್‌ಪಿಎಲ್‌ನ ಸುಂದರ್‌ ಬಂಗೇರ ಅವರ ಸಲಹೆ ಪಡೆದು ಮಳೆಕೊಯ್ಲು ಅಳವಡಿಸಲಾಗಿದೆ.

ಕಾರ್ಯಾಗಾರವೇ ನಮಗೆ ಸ್ಫೂರ್ತಿ
ಜಿಪಂನಲ್ಲಿ “ಉದಯವಾಣಿ’ ನಡೆಸಿದ ಮಳೆಕೊಯ್ಲು ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸತೀಶ್‌ಕುಮಾರ್‌ ಕುಂಪಲ ಅವರು ಅಲ್ಲಿ ದೊರಕಿದ ಮಾಹಿತಿಯನುಸಾರ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಸಿಕೊಂಡಿದ್ದಾರೆ.

ಛಾವಣಿ ನೀರನ್ನು ಪೈಪ್‌ ಮುಖಾಂತರ ಬಾವಿಗೆ ಬಿಡಲಾಗಿದೆ. ನೀರು ಶುದ್ಧಗೊಂಡ ಬಾವಿಗೆ ಬೀಳುವಂತಾಗಲು ಫಿಲ್ಟರ್‌ ವ್ಯವಸ್ಥೆ ಅಳವಡಿಸಿದ್ದಾರೆ. ಇದಕ್ಕಾಗಿ ಅವರಿಗೆ ಸುಮಾರು 6 ಸಾವಿರ ರೂ. ಖರ್ಚಾಗಿದೆ. “ಉದಯವಾಣಿ ನಡೆಸಿದ ಮಳೆಕೊಯ್ಲು ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಪತ್ರಿಕೆಯಲ್ಲೂ ಮಾಹಿತಿ ಓದುತ್ತಿದ್ದೆ. ಕಳೆದ ಎರಡು ವಾರಗಳ ಹಿಂದೆ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದೇನೆ’ ಎನ್ನುತ್ತಾರೆ ಸತೀಶ್‌ ಕುಮಾರ್‌.

ಮನೆ ಬಾವಿಗೆ ಮಳೆಕೊಯ್ಲು
ಮಹಾನಗರ: ಬೋಂದೆಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ವಾಸವಾಗಿರುವ ಮೆಸ್ಕಾಂ ನಿವೃತ್ತ ಎಂಜಿನಿಯರ್‌ ಆಲ್ವಿನ್‌ ಮಿರಾಂದ ಮತ್ತು ನಿವೃತ್ತ ಶಿಕ್ಷಕಿ ರೀಟಾ ಮಿರಾಂದ ಅವರ ಮನೆಯ ಬಾವಿಗೆ ಇತ್ತೀಚೆಗಷ್ಟೇ ಮಳೆಕೊಯ್ಲು ಅಳವಡಿಸಲಾಗಿದೆ.

ಛಾವಣಿ ನೀರನ್ನು ಪೈಪಲ್ಲಿ ಟ್ಯಾಂಕ್‌ಗೆ ಬಿಟ್ಟು, ಅಲ್ಲಿನ ಬಾವಿಗೆ ಸಂಪರ್ಕ ನೀಡಲಾಗಿದೆ. ನೀರನ್ನು ಶುದ್ಧೀಕರಿಸಿ ಬಿಡಲು ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಲಕ್ಷಾಮ ಉಂಟಾಗಿ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಮಳೆಕೊಯ್ಲು ಅಳವಡಿಸಲಾಗಿದೆ. ಈ ವ್ಯವಸ್ಥೆ ಮಾಡಿಕೊಳ್ಳಲು “ಉದಯವಾಣಿ’ ಅಭಿಯಾನವೇ ಪ್ರೇರಣೆ ಎಂದು ಆಲ್ವಿನ್‌ ದಂಪತಿ ತಿಳಿಸಿದ್ದಾರೆ.

ಮಾದರಿ ಕೆಲಸ
“ಮನೆಮನೆಗೆ ಮಳೆಕೊಯ್ಲು’ ಅಭಿಯಾನದ ಮೂಲಕ ಉದಯವಾಣಿಯು ಮಾದರಿ ಕೆಲಸ ಮಾಡಿದೆ. ಕಳೆದ ಬೇಸಗೆಯಲ್ಲಿ ಹನಿ ನೀರಿಗೂ ಹಾಹಾಕಾರ ಎದುರಿಸಿದ್ದೆವು. ಮಳೆಕೊಯ್ಲು ಅಳವಡಿಕೆಯ ಅಗತ್ಯ ಪ್ರಸ್ತುತ ನಮಗೆ ತೀರಾ ಅವಶ್ಯವಾಗಿದೆ. ಅಂತರ್ಜಲ ವೃದ್ಧಿಸಲು ಮಳೆಕೊಯ್ಲು ಪರಿಹಾರ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪತ್ರಿಕೆಯ ಕೆಲಸ ಶ್ಲಾಘನೀಯ.
-ಶಶಿಕಾಂತ್‌ ಶೆಟ್ಟಿ, ಕಟ್ಲ ಸುರತ್ಕಲ್‌

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳ ಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

ಟಾಪ್ ನ್ಯೂಸ್

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.