ಇನ್ನು ಸಮಾನ ನಾಗರಿಕ ಸಂಹಿತೆ?
Team Udayavani, Aug 7, 2019, 4:03 AM IST
ತನ್ನ ಮೊದಲ 5 ವರ್ಷದ ಅವಧಿಯಲ್ಲಿ ಜಿಎಸ್ಟಿ ತೆರಿಗೆ ಪದ್ಧತಿ ಜಾರಿ, ರಾತ್ರೋರಾತ್ರಿ 500, 1000 ರೂ. ನೋಟು ಅಮಾನ್ಯ ಮಾಡಿದ್ದ ಮೋದಿ ಸರ್ಕಾರ, 2ನೇ ಅವಧಿ ಆರಂಭದಲ್ಲೇ ತ್ರಿವಳಿ ತಲಾಖ್ ನಿಷೇಧಿಸಿ ಕಾಯ್ದೆ ರಚಿಸಿದೆ. ಅದರ ಬೆನ್ನಲ್ಲೇ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದೆ.
ಆರಂಭದಲ್ಲಿ ಇವೆಲ್ಲ ಅಸಾಧ್ಯ ಸಾಹಸಗಳು ಸಾಧ್ಯವೇ ಇಲ್ಲ ಎಂದು ವರ್ಣಿಸಲಾಗಿತ್ತು. ಮೋದಿ ಸರ್ಕಾರ ಒಂದೊಂದನ್ನೇ ಬಹಳ ಸರಳವಾಗಿ ಜಾರಿ ಮಾಡಿರುವುದನ್ನು ಗಮನಿಸಿದಾಗ, ಸಮಾನ ನಾಗರಿಕ ಸಂಹಿತೆಯೂ ಜಾರಿಯಾಗಬಹುದಾ ಎಂಬ ಅನುಮಾನ ಹುಟ್ಟಿಕೊಂಡಿದೆ.
ರಾಜ್ಯಸಭೆಯಲ್ಲಿ ಬಹುಮತವಿಲ್ಲದಿದ್ದರೂ, ತ್ರಿವಳಿ ತಲಾಖನ್ನು ಬಿಜೆಪಿ ತಂತ್ರಗಾರಿಕೆಯಿಂದ ಜಾರಿ ಮಾಡಿತು! ಯಾವುದೇ ಕಸರತ್ತು ಮಾಡದೇ ಬಹಳ ಸುಲಭವಾಗಿ ರಾಷ್ಟ್ರಪತಿ ಅಂಕಿತದ ಮೂಲಕ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಇಲ್ಲವಾಗಿಸಿದೆ. ಈಗ ಅಸಾಧ್ಯವೆಂದು ಹೇಳಲ್ಪಟ್ಟಿರುವ ಸಮಾನ ನಾಗರಿಕ ಸಂಹಿತೆಯನ್ನೂ ಜಾರಿಮಾಡುವುದು ಅಸಂಭವವೇನಲ್ಲ ಎಂಬ ಚರ್ಚೆ ಶುರುವಾಗಿದೆ!
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹಿಂದೆ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತಾ ಬರುತ್ತಿದೆ. ರಾಮಮಂದಿರ ನಿರ್ಮಾಣದ ಕುರಿತು ಬಹಳ ವೇಗವಾಗಿ ತೀರ್ಮಾನವಾಗುವ ಸಾಧ್ಯತೆಯೊಂದು ಗೋಚರವಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಕುರಿತ ವಿಚಾರಣೆ ಆರಂಭವಾಗಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
MUST WATCH
ಹೊಸ ಸೇರ್ಪಡೆ
Puttur: ಸಜ್ಜಾಗುತ್ತಿದೆ ಆನೆಮಜಲು ಕೋರ್ಟ್ ಸಂಕೀರ್ಣ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Development: ಭಾರತದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪ್ರಾಮುಖ್ಯತೆ
Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ
ಹರಗಾಪುರ ಕೇಸ್ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.