ಲಡಾಖ್ ಯುವನಾಯಕನ ಭಾಷಣಕ್ಕೆ ಮೋದಿ ಫಿದಾ
Team Udayavani, Aug 7, 2019, 4:08 AM IST
377ನೇ ವಿಧಿ ರದ್ದುಮಾಡಿದ್ದನ್ನು ಸಮರ್ಥಿಸಿಕೊಂಡ ಅಮಿತ್ ಶಾಗೆ ಬೆಂಬಲವಾಗಿ ನಿಂತು ತಮ್ಮ ಅದ್ಭುತ ಭಾಷಣದ ಮೂಲಕ ಪ್ರಧಾನಿ ಮೋದಿಯಿಂದ ಮೆಚ್ಚುಗೆ ಗಳಿಸಿದ ಈ ವ್ಯಕ್ತಿ ಈಗ ದೇಶದಲ್ಲಿ ಸದ್ದು ಮಾಡಿದ್ದಾರೆ. ಅವರು ಲಡಾಖ್‌ನ ಬಿಜೆಪಿ ಸಂಸದ ಜಮ್ಯಂಗ್ ತ್ಸೆರಿಂಗ್ ನಮ್ಗ್ಯಾಲ್! ಈ ಯುವ ನಾಯಕನನ್ನು ಮೆಚ್ಚಿ ಟ್ವೀಟ್ ಮಾಡಿರುವ ಮೋದಿ, ಲಡಾಖ್ ಜನತೆಯ ಆಶೋತ್ತರಗಳನ್ನು ಜಮ್ಯಂಗ್ ಪ್ರತಿನಿಧಿಸಿದ್ದಾರೆ. ಇದು ನೀವು ಕೇಳಲೇಬೇಕಾದ ಭಾಷಣ ಎಂದು ಹೊಗಳಿದ್ದಾರೆ.
ಜಮ್ಯಂಗ್ ಹೇಳಿದ್ದೇನು?: ಯುವನಾಯಕ ಜಮ್ಯಂಗ್, ತಮ್ಮ ಭಾಷಣದಲ್ಲಿ ಕಾಂಗ್ರೆಸ್, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. “ಕಳೆದ 7 ದಶಕಗಳಿಂದ ಲಡಾಖ್ ಜನತೆ ಕೇಂದ್ರಾಡಳಿತಕ್ಕಾಗಿ ಹೋರಾಟ ಮಾಡುತ್ತಲೇ ಇದ್ದರು. ಅದೀಗ ಸಿಕ್ಕಿದೆ. ವಿಶೇಷ ಸ್ಥಾನಮಾನ ರದ್ದತಿಯಿಂದ ಕಳೆದುಕೊಂಡಿದ್ದಾದರೂ ಏನು? ಕೇವಲ “ಎರಡು ಪರಿವಾರದ’ ಜೀವನ ನಿರ್ವಹಣೆಗೆ ತೊಂದರೆಯಾಗಿದೆಯಷ್ಟೇ.
ಆದರೆ ಕಾಶ್ಮೀರದ ಭವಿಷ್ಯ ಉಜ್ವಲವಾಗುತ್ತದೆ. ಲಡಾಖ್ ಇವತ್ತು ಅಭಿವೃದ್ಧಿವಂಚಿತವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಮತ್ತು 370ನೇ ವಿಧಿ ಕಾರಣ’ ಎಂದು ಕುಟುಕಿದರು. “ಯುಪಿಎ ಸರ್ಕಾರ 2011ರಲ್ಲಿ ಕಾಶ್ಮೀರಕ್ಕೆ ಕೇಂದ್ರೀಯ ವಿಶ್ವವಿದ್ಯಾಲಯ ನೀಡಿತು. ಹೋರಾಟ ಮಾಡಿ ಜಮ್ಮು ಕೂಡ ವಿವಿ ಪಡೆಯಿತು. ನಾವು ಹೋರಾಟ ಮಾಡುತ್ತಲೇ ಇದ್ದರೂ ಸಿಗಲಿಲ್ಲ. ಇದೀಗ ಪ್ರಧಾನಿ ನಮಗೂ ಒಂದು ವಿವಿ ನೀಡಿದ್ದಾರೆ’ ಎಂದು ಜಮ್ಯಂಗ್ ಮೋದಿಯನ್ನು ಮೆಚ್ಚಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.