ವರುಣನ ಆರ್ಭಟ: ವಿವಿಧೆಡೆ ಅಪಾರ ಹಾನಿ
Team Udayavani, Aug 7, 2019, 6:39 AM IST
ಹೆಬ್ರಿ: ಪೆರ್ಡೂರು ಹಾಗೂ ಹಿರಿಯಡ್ಕ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಭಾರೀ ಗಾಳಿ ಮಳೆಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಹಿರಿಯಡದ ಪ್ರಮುಖ ಬೀದಿಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಹಿರಿಯಡ್ಕ ಠಾಣಾ ಅಂಜಾರು ಗ್ರಾಮದ ಕರಂಬಾಕ್ಯಾರು ಕೃಷ್ಣಪ್ಪ ಪೂಜಾರಿಯವರ ಮನೆ ಮೇಲೆ ಸಿಮೆಂಟ್ ಶೀಟ್ ಹಾರಿ ಹೋಗಿದ್ದು, ಅಡಿಕೆ ಮರಗಳು ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅಲ್ಲದೆ ಅಂಜಾರು ಗ್ರಾಮದ ಸುಜಾತಾ ನಾಯಕ್ ಅವರ ಮನೆ, ಕೊಟ್ಟಿಗೆಯ ಹಂಚು , ಸಿಮೆಂಟ್ ಶೀಟ್ ಗಾಳಿಗೆ ಹಾರಿ ಸಂಪೂರ್ಣ ಹಾನಿಗೊಂಡಿದೆ. ಈ ಪ್ರದೇಶಕ್ಕೆ ಬೊಮ್ಮರಬೆಟ್ಟು ಗ್ರಾಮ ಕರಣಿಕರು, ಹಿರಿಯಡ್ಕ ಠಾಣಾಧಿಕಾರಿ ಸತೀಶ್ ಬಲ್ಲಾಳ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೆರ್ಡೂರು ಸುತ್ತಮುತ್ತಲ ಪ್ರದೇಶದಲ್ಲಿ ಮಳೆಯಿಂದ ನದಿ ನೀರು ತೋಟಗಳಿಗೆ ನುಗ್ಗಿ ಕೃಷಿ ಭೂಮಿಗೆ ಹಾನಿ ಉಂಟಾಗಿದೆ. ಕೃಷಿಗದ್ದೆ ಅಡಿಕೆ ತೋಟ ಜಲಾವೃತಗೊಂಡಿದ್ದು ನಾಯರ್ಕೋಡು ಬಳಿ ಬೀಸಿದ ಗಾಳಿಗೆ ರತಿ ಎಂಬವರ ಮನೆಯ ಹಂಚು ಹಾರಿ ಹೋಗಿದೆ. ಇಲ್ಲಿಯ ಲಲಿತಾ ಪೂಜಾರ್ತಿ, ಬೇಬಿ ಅವರ ಮನೆಯ ಹಂಚು ಕೂಡ ಹಾರಿಹೋಗಿ ಸುಮಾರು 70 ಸಾವಿರ ರೂ. ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಸ್ಥಳೀಯಾಡಳಿತ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.