ಲಡಾಖ್ ಕ್ರಿಕೆಟಿಗರ “ವಿಧಿ ಬರಹ’ವೂ ಬದಲಾಗಲಿದೆ
Team Udayavani, Aug 7, 2019, 6:28 AM IST
ಮುಂಬಯಿ: ಕೇಂದ್ರ ಸರಕಾರ ಜಮ್ಮು- ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿ ಕಾಶ್ಮೀರ ಮತ್ತು ಲಡಾಖ್‌ನ್ನು ಪ್ರತ್ಯೇಕಿಸಿರುವುದರಿಂದ ಲಡಾಖ್‌ನ ಉದಯೋನ್ಮುಖ ಕ್ರಿಕೆಟಿಗರ “ವಿಧಿ ಬರಹ’ವೂ ಬದಲಾಗಲಿದೆ.
ಇನ್ನು ಮುಂದೆ ಹೊಸದಾಗಿ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನ ಕ್ರಿಕೆಟಿಗರು ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ ಅನ್ನು ಪ್ರತಿನಿಧಿಸಬಹುದು ಎಂದು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಹೇಳಿದ್ದಾರೆ.
ಸದ್ಯಕ್ಕೆ ಲಡಾಖ್‌ಗೆ ಪ್ರತ್ಯೇಕ ಕ್ರಿಕೆಟ್ ಮಂಡಳಿ ರಚಿಸುವ ಉದ್ದೇಶವಿಲ್ಲ. ಬಿಸಿಸಿಯ ಎಲ್ಲ ದೇಶೀಯ ಪಂದ್ಯಗಳಲ್ಲಿ ಲಡಾಖ್‌ನ ಕ್ರಿಕೆಟಿಗರು ಜಮ್ಮು-ಕಾಶ್ಮೀರ ತಂಡದಲ್ಲಿ ಆಡಬಹುದು ಎಂದಿದ್ದಾರೆ.
ಇಷ್ಟರ ತನಕ ಜಮ್ಮು-ಕಾಶ್ಮೀರದ ರಣಜಿ ತಂಡದಲ್ಲಿ ಲಡಾಖ್‌ನ ಆಟಗಾರರಿಗೆ ಅವಕಾಶ ಸಿಕ್ಕಿಲ್ಲ. ಈ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ. ರಣಜಿ ಪಂದ್ಯಗಳು ವರ್ಷಾಂತ್ಯದಲ್ಲಿ ಆರಂಭವಾಗಲಿವೆ.
ಪುದುಚೇರಿ ಮಾದರಿಯಲ್ಲಿ ಲಡಾಖ್‌ಗೂ ಬಿಸಿಸಿಐಯಲ್ಲಿ ಮತದಾನ ಹಕ್ಕು ಸಿಗುವುದೇ ಎಂದು ಕೇಳಿದಾಗ ರಾಯ್ ನಾವು ಇನ್ನೂ ಈ ಕುರಿತು ಚಿಂತಿಸಿಲ್ಲ ಎಂದು ಉತ್ತರಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕೈಗೊಂಡಿರುವ ನಿರ್ಧಾರದಿಂದ ಕ್ರಿಕೆಟ್‌ನ ಮೇಲೇನೂ ಪರಿಣಾಮವಾಗುವುದಿಲ್ಲ. ಕಣಿವೆಯಲ್ಲಿ ಕ್ರಿಕೆಟ್ ಎಂದಿನಂತೆ ಇರಲಿದೆ, ಆ ಬಗ್ಗೆ ಚಿಂತೆ ಬೇಡ ಎಂದಿದ್ದಾರೆ.
ಜಮ್ಮು-ಕಾಶ್ಮೀರ ತಂಡ ಮುಂದಿನ ದಿನಗಳಲ್ಲಿ ತವರಿನ ಪಂದ್ಯಗಳನ್ನು ಶ್ರೀನಗರದಲ್ಲಿ ಆಡುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.