ಬಾಯಾರಿದ ಗ್ಲಾಸ್ ನೀರೇ ಮಾಯ!
Team Udayavani, Aug 8, 2019, 5:10 AM IST
ಈ ಮ್ಯಾಜಿಕನ್ನು ಸ್ಟೇಜಿನ ಮೇಲೆ ಮಾಡಿದರೆ ಪರಿಣಾಮ ಅದ್ಭುತ. ಜಾದೂಗಾರ ಒಂದು ಪೇಪರ್ ಗ್ಲಾಸ್ಗೆ ಪೂರ್ತಿ ನೀರು ತುಂಬುತ್ತಾನೆ. ಅದನ್ನು ಒಂದು ಸಾಸರ್ ಮೇಲೆ ಇಟ್ಟು ಮಂತ್ರ ಹಾಕುತ್ತಾನೆ. ಗ್ಲಾಸಿನ ನೀರನ್ನು ಪ್ರೇಕ್ಷಕರ ಮೇಲೆ ಎರಚಲು ಹೋದರೆ ನೀರೇ ಮಾಯ!
ಇದರ ರಹಸ್ಯ ಇಷ್ಟೇ. ಪೇಪರ್ ಗ್ಲಾಸಿನ ಹೊರಮೈಯ ಕೆಳಭಾಗದಲ್ಲಿ ಒಂದು ಚಿಕ್ಕ ತೂತನ್ನು ಮಾಡಿ ಮೊದಲೇ ಸಿದ್ಧಪಡಿಸಿಟ್ಟುಕೊಳ್ಳಿ. ನಿಮ್ಮ ಹೆಬ್ಬೆರಳಿನಿಂದ ಈ ತೂತನ್ನು ಮುಚ್ಚಿರಿ. ಈ ಗ್ಲಾಸಿಗೆ ಇನ್ನೊಂದು ಗ್ಲಾಸಿನಲ್ಲಿ ಅಥವಾ ಬಾಟಲಿಯಲ್ಲಿ ಇಟ್ಟಿರುವ ನೀರನ್ನು ಸುರಿಯಿರಿ. ಪೂರ್ತಿ ನೀರು ತುಂಬಿದ ಮೇಲೆ ಗ್ಲಾಸನ್ನು ಸಾಸರ್ ಮೇಲೆ ಇಟ್ಟು ಮಂತ್ರ ಹಾಕುವವರಂತೆ ನಟಿಸಿ. ಈಗ ಗ್ಲಾಸಿನ ನೀರೆಲ್ಲ ಸಾಸರಿಗೆ ಸೇರಿ ಗ್ಲಾಸು ಖಾಲಿಯಾಗಿರುತ್ತದೆ. ಗ್ಲಾಸನ್ನು ಮೇಲೆ ಎತ್ತಿ ಪ್ರೇಕ್ಷಕರ ಮೇಲೆ ನೀರನ್ನು ಎರಚುವಂತೆ ನಟಿಸಿ. ನೀರು ಮಾಯವಾಗಿರುವುದನ್ನು ನೋಡಿ ಪ್ರೇಕ್ಷಕರು ಆಶ್ಚರ್ಯ ಪಡುತ್ತಾರೆ.
ಉದಯ್ ಜಾದೂಗಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.