ಬಂಟ್ವಾಳ ತಾ|: ತಗ್ಗು ಪ್ರದೇಶ ಜಲಾವೃತ


Team Udayavani, Aug 8, 2019, 5:20 AM IST

p-13

ಬಂಟ್ವಾಳ: ತಾಲೂಕಿನಾದ್ಯಂತ ಬುಧವಾರ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತಗೊಂಡವು.

ಬಂಟ್ವಾಳದಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 8.5 ಮೀ.ಆಗಿದ್ದು, ಬುಧವಾರ ಮುಂಜಾನೆ ನೀರು 8.4 ಮೀ.ಗೆ ತಲುಪಿತ್ತು. ಆದರೆ ಬಳಿಕ ಮಧ್ಯಾಹ್ನ ನೀರಿನ ಮಟ್ಟ ಇಳಿಕೆಯಾಗಿ 8.2 ಮೀ.ಗೆ ತಲುಪಿದ ಹಿನ್ನೆಲೆಯಲ್ಲಿ ಆತಂಕ ಕಡಿಮೆ ಯಾಗಿದ್ದರೂ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆ ಯಾದರೆ ಮತ್ತೆ ಪ್ರವಾಹ ಏರಿಕೆ ಸಾಧ್ಯತೆ ಇದೆ.

ಪಾಣೆಮಂಗಳೂರಿನ ಆಲಡ್ಕದಲ್ಲಿ ಕೆಲವು ಮನೆ ಗಳು ಪ್ರವಾಹದ ನೀರಿಗೆ ಜಲಾವೃತವಾದವು. ನೀರು ಅಪಾಯಕಾರಿ ಸ್ಥಿತಿಗೆ ತಲುಪುವ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಸ್ಥಳೀಯ ನಿವಾಸಿಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಆತಂಕವಿರಲಿಲ್ಲ.

ಬಡ್ಡಕಟ್ಟೆ ಮಾರುಕಟ್ಟೆಗೆ ನೆರೆ ನೀರು
ಬಂಟ್ವಾಳ ಪೇಟೆಯ ಬಡ್ಡಕಟ್ಟೆ ಮಾರುಕಟ್ಟೆಗೆ ನೆರೆ ನೀರು ನುಗ್ಗಿ ಮೀನು ಮಾರುಕಟ್ಟೆ, ಪ್ರಯಾಣಿಕರ ತಂಗುದಾಣ ಕೊಂಚ ಹೊತ್ತು ಜಲಾವೃತವಾದವು. ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ಜಕ್ರಿಬೆಟ್ಟು ಪ್ರದೇಶದಲ್ಲಿ ರಸ್ತೆಗೆ ನೀರು ಬಂದಿತ್ತು. ಅಜಿಲಮೊಗರು ಮಸೀದಿ ಪರಿಸರದ ಸುತ್ತ ನೆರೆ ನೀರು ನುಗ್ಗಿ ಅಜಿಲಮೊಗರು-ಉಪ್ಪಿನಂಗಡಿ ರಸ್ತೆ ಸಂಪರ್ಕ ಕಡಿತಗೊಂಡಿತು.

ಸರಪಾಡಿ ಪೆರ್ಲ ಪ್ರದೇಶದಲ್ಲೂ ರಸ್ತೆಗೆ ನೀರು ನುಗ್ಗಿ ಸಂಚಾರಕ್ಕೆ ತೊಂದರೆಯಾಯಿತು.

ಕಡೇಶಿವಾಲಯ, ಬರಿಮಾರು, ಮಣಿನಾಲ್ಕೂರು, ಸರಪಾಡಿ, ನಾವೂರು, ನರಿಕೊಂಬು, ತುಂಬೆ ಪ್ರದೇಶದಲ್ಲಿ ಅಡಿಕೆ ತೋಟಗಳಿಗೆ ನೆರೆ ನೀರು ನುಗ್ಗಿತು. ನೆರೆಯ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮುಂಜಾಗ್ರತ ಕ್ರಮಕೈಗೊಂಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ.

ಪುಂಜಾಲಕಟ್ಟೆ: ಸುಂಟರಗಾಳಿ
ಪುಂಜಾಲಕಟ್ಟೆ ಪರಿಸರದಲ್ಲಿ ಬುಧವಾರ ಮಧ್ಯಾಹ್ನ ಸುಂಟರಗಾಳಿ ಬೀಸಿ ಹಲವೆಡೆ ಹಾನಿ ಸಂಭವಿಸಿದೆ. ಇರ್ವತ್ತೂರು, ನೇರಳಕಟ್ಟೆ, ಪೆಲತ್ತಕಟ್ಟೆ, ನಯನಾಡು, ಮೂರ್ಜೆ, ಪುಂಜಾಲಕಟ್ಟೆ, ಗಂಪದಡ್ಡ, ಪುರಿಯ ಮೊದಲಾದೆಡೆ ಸುಂಟರಗಾಳಿಗೆ ಅಡಿಕೆ ಮರಗಳ ಸಹಿತ ಮರಗಳು ಧರಾಶಾಯಿಯಾಗಿವೆ. ಇರ್ವತ್ತೂರು, ನೇರಳಕಟ್ಟೆ ಗಳಲ್ಲಿ ಮರಗಳು ರಸ್ತೆಗೆ ಬಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ಟಾಪ್ ನ್ಯೂಸ್

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

apple

Apple New Shop; ಬೆಂಗಳೂರು ಸೇರಿ 4 ನಗರದಲ್ಲಿ ಮಳಿಗೆ: ಆ್ಯಪಲ್‌ ಘೋಷಣೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Supreme Court

Supreme Court;ಒಳ ಮೀಸಲಾತಿ ಸರಿ, ಆ. 1ರ ತೀರ್ಪು ಪುನರ್‌ಪರಿಶೀಲನೆ ಮಾಡುವುದಿಲ್ಲ

Exam

Journalism; ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಅರ್ಜಿ ಅಹ್ವಾನ

muniratna

Munirathna ಡಿಎನ್‌ಎ, ಜಾಮೀನು ಅರ್ಜಿ ವಿಚಾರಣೆ ಅ. 8ಕ್ಕೆ

supreme-Court

Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric

Uppinangady: ವಿದ್ಯುತ್‌ ಆಘಾತ: ಕೊಯಿಲ ಗ್ರಾಮದ ವ್ಯಕ್ತಿ ಸಾವು

dw

Belthangady: ಮರದಿಂದ ಬಿದ್ದು ವ್ಯಕ್ತಿ ಸಾವು

arest

BC Road: ಕಳವಾದ ಸ್ಕೂಟರ್‌ ಪತ್ತೆ; ಆರೋಪಿ ಬಂಧನ

Vitla: ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಗಾಯ

Vitla: ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಗಾಯ

12-bantwala

Sand Mining: ಬಂಟ್ವಾಳ ಅಕ್ರಮ ಮರಳು ಅಡ್ಡೆಗೆ ದಾಳಿ; 20 ದೋಣಿ ವಶ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

apple

Apple New Shop; ಬೆಂಗಳೂರು ಸೇರಿ 4 ನಗರದಲ್ಲಿ ಮಳಿಗೆ: ಆ್ಯಪಲ್‌ ಘೋಷಣೆ

mob

Social Media: ಇನ್‌ಸ್ಟಾದಂತೆ ವಾಟ್ಸ್‌ಆ್ಯಪ್‌ನಲ್ಲಿ ಇನ್ನು ಲೈಕ್‌, ಮೆನ್ಷನ್‌ ಆಯ್ಕೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Supreme Court

Supreme Court;ಒಳ ಮೀಸಲಾತಿ ಸರಿ, ಆ. 1ರ ತೀರ್ಪು ಪುನರ್‌ಪರಿಶೀಲನೆ ಮಾಡುವುದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.