ವಿಟ್ಲ-ಮಂಗಳೂರು ರಸ್ತೆಯಲ್ಲಿ ಕೃತಕ ನೆರೆ
Team Udayavani, Aug 8, 2019, 5:00 AM IST
ವಿಟ್ಲ : ಭಾರೀ ಮಳೆಗೆ ವಿಟ್ಲ- ಮಂಗಳೂರು ರಸ್ತೆಯಲ್ಲಿ ವಿಟ್ಲ ಪಂಚಲಿಂಗೇಶ್ವರದ ದೇವಸ್ಥಾನದ ಪೂರ್ವ ದ್ವಾರದ ಮುಂಭಾಗ ಕೃತಕ ಪ್ರವಾಹ ಸೃಷ್ಟಿಯಾಗಿದೆ.
ವಿಟ್ಲ ಶಾಲಾ ರಸ್ತೆ, ವಿಟ್ಲ ಪುತ್ತೂರು ರಸ್ತೆಯ, ವಿಟ್ಲ ದೂರವಾಣಿ ವಿನಿಮಯ ಕೇಂದ್ರ ರಸ್ತೆಯ ನೀರು ಎಲ್ಲವೂ ವಿಟ್ಲ ಪಂಚಲಿಂಗೇಶ್ವರ ದೇಗುಲದ ಚರಂಡಿಯಲ್ಲಿ ಬಂದು ಈ ಮಂಗಳೂರು ರಸ್ತೆಯ ಮೋರಿ ಯೊಳಗೆ ಸಾಗಿ ದೇವಸ್ಯ ಮೂಲಕ ಹೊರಗೆ ಹೋಗುತ್ತದೆ. ಮಂಗಳೂರು ರಸ್ತೆಯಡಿಯ ಪೈಪ್ ಕೇವಲ 2.5 ಅಡಿಯದ್ದು. ಈ ಹಿಂದೆ ಕಾಮಗಾರಿ ನಡೆಸುವ ಸಂದರ್ಭ ಸ್ಥಳೀಯರು, ಅನುಭವಿಗಳು ವಿಟ್ಲ ಪ.ಪಂ. ಅಧಿಕಾರಿಗಳಲ್ಲಿ ಈ ಪೈಪ್ ದೊಡ್ಡದಾಗಿರ ಬೇಕೆಂದಿದ್ದರು. ಅದನ್ನು ಧಿಕ್ಕರಿಸಿದ ಎಂಜಿನಿ ಯರ್ 2.5 ಅಡಿಯ ಪೈಪ್ ಸಾಕು ಎಂದು ಅಳವಡಿಸಿದ್ದರು. ಭಾರೀ ಮಳೆಗೆ ವಿಟ್ಲ ಪೇಟೆಯ ನೀರು ಈ ಪೈಪಿನಲ್ಲಿ ದಾಟದೇ ರಸ್ತೆಯಲ್ಲಿ ತುಂಬಿಕೊಳ್ಳುವಂತಾಗಿದೆ.
ಇದೇ ಭಾಗದಲ್ಲಿ ರಸ್ತೆಯ ಒಂದು ಬದಿ ಯಲ್ಲಿದ್ದ ಚರಂಡಿ ಮಾಯವಾಗಿದೆ. ಈ ಸಮಸ್ಯೆ ಕೆಲವು ಸಮಯಗಳಿಂದ ಪರಿಹಾರ ವಾಗಿಲ್ಲ. ಇಲ್ಲಿ ವಾಹನ ಸಂಚಾರ ಸಂದರ್ಭ ದ್ವಿಚಕ್ರ ವಾಹನ ಸವಾರರ ಮೇಲೆ, ಪಾದಚಾರಿ ಗಳ ಮೇಲೆ ಕೆಸರು ರಾಚುತ್ತದೆ. ಪಾದಚಾರಿ ಗಳಿಗೆ ಸುರಕ್ಷಿತವಾಗಿ ಸಂಚರಿಸಲು ಬೇರೆ ಜಾಗವೂ ಇಲ್ಲಿಲ್ಲ. ನಿತ್ಯ ಸಂಚಾರಿಗಳು ಈ ಸಮಸ್ಯೆ ಪರಿಹರಿಸಲು ಆಗ್ರಹಿಸಿದ್ದಾರೆ.
ರಸ್ತೆಗೆ ಹಾನಿ
ವೀರಕಂಭ ಗ್ರಾಮದ ಅರೆಬೆಟ್ಟು – ಗೋಳಿಮಾರು ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಮತ್ತು ತೋಡಿಗೆ ಮಣ್ಣು ತುಂಬಿ ಮಳೆ ನೀರು ಪಕ್ಕದ ತೋಟಕ್ಕೆ ನುಗ್ಗಿ ತೋಟಕ್ಕೆ ಹಾನಿಯಾಗಿದೆ. ಸಂಚಾರಕ್ಕೆ ತೊಂದರೆ ಯಾಗದಂತೆ ಜೆಸಿಬಿ ಮೂಲಕ ರಸ್ತೆಗೆ ಬಿದ್ದ ಮಣ್ಣು ತೆಗೆಯಲಾಗಿದೆ. ಗ್ರಾಮ ಕರಣಿಕ ಕರಿಬಸಪ್ಪ ಭೇಟಿ ನೀಡಿದ್ದಾರೆ.
ಪೆರುವಾಯಿ ಗ್ರಾ.ಪಂ.ವ್ಯಾಪ್ತಿಯ ಅಡ್ವಾಯಿಯಲ್ಲಿ ಶಾಸಕರ ಗ್ರಾಮ ವಿಕಾಸ ಯೋಜನೆಯಲ್ಲಿ ಬಿಡುಗಡೆ ಯಾದ 2 ಲಕ್ಷ ರೂ. ಅನುದಾನ ದಲ್ಲಿ ಗುಡ್ಡ ಸಮತಟ್ಟುಗೊಳಿಸಿ ಮೈದಾನ ನಿರ್ಮಿಸಲಾಗಿತ್ತು. ಸೋಮವಾರದ ಮಳೆಗೆ ಮೈದಾನ, ರಸ್ತೆ ಕೊಚ್ಚಿ ಹೋಗಿ ಕೆಸರಿನಿಂದ ಪರಿಸರದಲ್ಲಿ ನಡೆದಾಡಲೂ ಆಗದಂತಹ ಪರಿಸ್ಥಿತಿಯಿದೆ. ಕೆಳಗಿನ ನಾಲ್ಕು ಮನೆಗಳು, ಹಟ್ಟಿಗಳು ಅಪಾಯದಲ್ಲಿವೆ. ಕೆಲವು ಮನೆಯ ಅಂಗಳದಲ್ಲಿ ಕೆಸರು ತುಂಬಿಕೊಂಡಿದೆ. ಸ್ಥಳಕ್ಕೆ ಪೆರುವಾಯಿ ಗ್ರಾ.ಪಂ.ಅಧ್ಯಕ್ಷ ರಾಲ್ಫ್ ಡಿಸೋಜಾ, ಗ್ರಾಮಕರಣಿಕರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಕೊಚ್ಚಿಹೋದ ಮೈದಾನ
ಪೆರುವಾಯಿ ಗ್ರಾ.ಪಂ.ವ್ಯಾಪ್ತಿಯ ಅಡ್ವಾಯಿಯಲ್ಲಿ ಶಾಸಕರ ಗ್ರಾಮ ವಿಕಾಸ ಯೋಜನೆಯಲ್ಲಿ ಬಿಡುಗಡೆ ಯಾದ 2 ಲಕ್ಷ ರೂ. ಅನುದಾನ ದಲ್ಲಿ ಗುಡ್ಡ ಸಮತಟ್ಟುಗೊಳಿಸಿ ಮೈದಾನ ನಿರ್ಮಿಸಲಾಗಿತ್ತು. ಸೋಮವಾರದ ಮಳೆಗೆ ಮೈದಾನ, ರಸ್ತೆ ಕೊಚ್ಚಿ ಹೋಗಿ ಕೆಸರಿನಿಂದ ಪರಿಸರದಲ್ಲಿ ನಡೆದಾಡಲೂ ಆಗದಂತಹ ಪರಿಸ್ಥಿತಿಯಿದೆ. ಕೆಳಗಿನ ನಾಲ್ಕು ಮನೆಗಳು, ಹಟ್ಟಿಗಳು ಅಪಾಯದಲ್ಲಿವೆ. ಕೆಲವು ಮನೆಯ ಅಂಗಳದಲ್ಲಿ ಕೆಸರು ತುಂಬಿಕೊಂಡಿದೆ. ಸ್ಥಳಕ್ಕೆ ಪೆರುವಾಯಿ ಗ್ರಾ.ಪಂ.ಅಧ್ಯಕ್ಷ ರಾಲ್ಫ್ ಡಿಸೋಜಾ, ಗ್ರಾಮಕರಣಿಕರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.