ಕಾಂಕ್ರೀಟ್ ರಸ್ತೆಗೆ ಮಣ್ಣು, ಡಾಮರು ರಸ್ತೆಗೆ ಕಲ್ಲು!
Team Udayavani, Aug 8, 2019, 5:00 AM IST
ಡಾಮರು ರಸ್ತೆಯ ಹೊಂಡ ಮುಚ್ಚುತ್ತಿರುವುದು.
ಕುಂದಾಪುರ: ಇಲ್ಲಿನ ಚರ್ಚ್ ರೋಡ್‌ನ ಕೊನೆ ಭಾಗದಲ್ಲಿ ರಸ್ತೆಗೆ ಇತ್ತೀಚೆಗೆ ಕಾಂಕ್ರೀಟ್ ಹಾಕಲಾಗಿದೆ. ಆದರೆ ತಡೆಗೋಡೆ ಮಾಡದ್ದರಿಂದ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಇನ್ನೊಂದೆಡೆ ಮುಖ್ಯರಸ್ತೆಯ ಬದಿ ಹೊಂಡ ಮುಚ್ಚಲು ಪುರಸಭೆ ಕಲ್ಲು ಹಾಕುವ ಕಾಯಕದಲ್ಲಿ ತೊಡಗಿದೆ. ಇವೆರಡೂ ಪುರಸಭೆ ವ್ಯಾಪ್ತಿಯಲ್ಲಿ ಇದ್ದರೂ ಲೋಕೋಪಯೋಗಿ ಮತ್ತು ರಾ.ಹೆ. ಇಲಾಖೆ ವ್ಯಾಪ್ತಿ ಯಲ್ಲಿರುವುದರಿಂದ ಸಮಸ್ಯೆಯಾಗುವುದು ಗೊತ್ತಿದ್ದರೂ ಏನೂ ಮಾಡದಂತಾಗಿದೆ.
ಕುಸಿತ ಆರಂಭ
ಮಂಗಳೂರು ಟೈಲ್ ಫ್ಯಾಕ್ಟರಿ ಹತ್ತಿರ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಈ ಮೂಲಕ ಚರ್ಚ್ ರೋಡ್‌ನಿಂದ ಕೋಡಿ ಭಾಗಕ್ಕೆ ಹೋಗಬಹುದು. ರಿಂಗ್ ರೋಡ್ ಮೂಲಕ ಮುಖ್ಯ ರಸ್ತೆಗೆ ಸಂಗಮ್‌ಗೆ ತಲುಪಬಹುದು. ಕಾಂಕ್ರಿಟ್ ಪಕ್ಕವಿರುವ ತೋಡಿಗೆ ಸ್ವಲ್ಪ ದೂರ ತಡೆಗೋಡೆ ಹಾಕಲಾಗಿದೆ. ಅನಂತರ ತಡೆ ಬೇಲಿ ಹಾಕಲಾಗಿದೆ. ತಡೆ ಬೇಲಿ ಬುಡದಲ್ಲಿ ಹಾಕಿದ ಮಣ್ಣು ಈಗ ಕುಸಿಯ ಲಾರಂಭಿಸಿದೆ. ತಡೆಬೇಲಿ ಅಪಾಯದಲ್ಲಿದೆ. ಕಾಂಕ್ರೀಟ್ ರಸ್ತೆಯೂ ಅಪಾಯದಲ್ಲಿದೆ.
ಉದಯವಾಣಿ ವರದಿ
ಇಲ್ಲಿ ಕಾಮಗಾರಿ ಬಳಿಕ ತೋಡಿಗೆ ಮಣ್ಣು ಹಾಕಲಾಗಿತ್ತು. ಮಣ್ಣಿನ ತೆರವು ಕಾರ್ಯ ನಡೆಯದೇ ಇದ್ದರೆ ದಿಢೀರ್ ಮಳೆ ಬಂತೆಂದರೆ ಈ ಭಾಗ ಮುಳುಗುವ ಸಾಧ್ಯತೆ ಇದೆ. ಎಲ್ಲಾ ಕಡೆಯ ನೀರು ಈ ಮೂಲಕ ಹೊಳೆ ಸೇರುತ್ತದೆ. ವಡೇರ ಹೋಬಳಿಯಿಂದ ಕುಂದಾಪುರ ಪೇಟೆ ಭಾಗಕ್ಕೆ, ಗಾಂಧಿ ಮೈದಾನ ಕಡೆಯಿಂದ, ಪೇಟೆಯ ಭಾಗದಿಂದ ಹರಿದು ಬರುವ ನೀರು ಸೇರುವುದು ಈ ವಾರ್ಡಿನ ಮೂಲಕ ಹರಿಯುವ ತೋಡಿನಲ್ಲಿ. ಇದಕ್ಕೊಂದು ಸಮರ್ಥವಾದ ತಡೆಗೋಡೆ ಕಟ್ಟಿ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಲು ಪುರಸಭೆಗೆ ಅನುದಾನದ ಕೊರತೆ ಉಂಟಾಗಿದೆ. ಕೇವಲ ಸಣ್ಣ ತಡೆಗೋಡೆಯನ್ನಷ್ಟೇ ಕಟ್ಟಲಾಗಿದ್ದು, ಇದರಿಂದ ರಸ್ತೆ ಕೊರೆತದ ಭೀತಿ ಜನರಲ್ಲಿ ಆವರಿಸಿದೆ. ಈ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಒದಗಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ ಎಂದು ಉದಯವಾಣಿ ಮೇ 29ರಂದು ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಮಣ್ಣು ತೆರವು ಮಾಡಿತ್ತು.
ಬಿದ್ದ ಕಲ್ಲುಗಳು
ಕಾಂಕ್ರೀಟ್ ತಡೆಗೋಡೆ ಪಕ್ಕದಲ್ಲಿ ಕಲ್ಲಿನ ತಡೆಗೋಡೆ ಯೊಂದರ ರಚನೆ ಮಾಡಲಾಗಿದ್ದು ಅದು ಕಳಪೆಯಾಗಿದೆ ಎಂಬ ಆರೋಪವಿದೆ. ಅದರ ಕಲ್ಲುಗಳು ಈಗಲೇ ಕಿತ್ತು ಹೋಗುತ್ತಿವೆ. ಗೋಡೆಗೆ ಅಂಟಿಕೊಂಡಿರಬೇಕಿದ್ದ ಕಲ್ಲು ಗಳು ಈಗಾಗಲೇ ಬಿದ್ದು ತೋಡಿನಲ್ಲಿವೆ ಎಂದು ಆಗಲೇ ಪತ್ರಿಕೆ ಎಚ್ಚರಿಸಿತ್ತು. ಇದೀಗ ಅದರ ಪಕ್ಕದಲ್ಲೇ ಮಣ್ಣು ಕುಸಿತವಾಗಲಾರಂಭಿಸಿದೆ.
ರಸ್ತೆ ಹೊಂಡಕ್ಕೆ ಕಲ್ಲು
ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೆ$çಓವರ್ ಬಳಿ, ಶಾಸಿŒ ಸರ್ಕಲ್ ಬಳಿ ಭಾರೀ ಗಾತ್ರದ ಹೊಂಡಗಳಾಗಿವೆ. ಇವನ್ನು ಶುಕ್ರವಾರ ಪುರಸಭೆ ವತಿಯಿಂದ ಮುಚ್ಚುವ ಕಾರ್ಯ ನಡೆಯಿತು. ಇಲ್ಲಿ ಭಂಡಾರ್‌ಕಾರ್ಸ್ ಕಾಲೇಜಿಗೆ ಹೋಗುವ ಸಾವಿರಾರು ಮಕ್ಕಳು ಹಾದು ಹೋಗುತ್ತಾರೆ. ಮಳೆ ನೀರು ನಿಂತರೆ ವಾಹನಗಳ ಓಡಾಟದಿಂದ ಕೆಸರು ನೀರು ಎರಚುತ್ತದೆ. ಈ ಕುರಿತು ಗಮನ ಹರಿಸಿದ ಪುರಸಭೆ ಆಡಳಿತ ಗುಂಡಿ ಮುಚ್ಚಲು ಕ್ರಮ ಕೈಗೊಂಡಿದೆ. ಪುರಸಭೆ ಸದಸ್ಯ ಪ್ರಭಾಕರ್ ಮಾರ್ಗದರ್ಶನ ನೀಡಿದರು.
ಗಮನಕ್ಕೆ ತರಲಾಗಿದೆ
ಮಣ್ಣು ಕುಸಿತವಾಗುತ್ತಿರುವ ಕುರಿತು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗಮನಕ್ಕೆ ತರಲಾಗಿದೆ. ಸರಿಪಡಿಸುವ ಭರವಸೆ ನೀಡಿದ್ದಾರೆ.
-ವಿಜಯ್ ಎಸ್. ಪೂಜಾರಿ,
ಪುರಸಭೆ ಮಾಜಿ ಸದಸ್ಯರು
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.