ಗಂಭೀರ ಸ್ವರೂಪಕ್ಕೆ ಪಚ್ಚನಾಡಿ ‘ತ್ಯಾಜ್ಯ ಕುಸಿತ’
ಮನೆ ಖಾಲಿ ಮಾಡಿದ ನಿವಾಸಿಗಳು; ತೋಟ, ಗುಡಿಗಳು ನೆಲಸಮ
Team Udayavani, Aug 8, 2019, 5:26 AM IST
ಮುಂದುವರಿಯುತ್ತಿರುವ ತ್ಯಾಜ್ಯ ರಾಶಿ ಗುಡಿಯನ್ನು ಆಪೋಷನ ತೆಗೆದುಕೊಳ್ಳುವ ಸ್ಥಿತಿಯಲ್ಲಿರುವ ಚಿತ್ರ.
ಮಂಗಳೂರು: ನಗರದ ಹೊರವಲಯದ ಪಚ್ಚನಾಡಿಯ ತ್ಯಾಜ್ಯ ಡಂಪಿಂಗ್ ಯಾರ್ಡ್‌ನಲ್ಲಿ ಮಳೆಯಿಂದಾಗಿ ಬೃಹತ್ ಕಸದ ರಾಶಿ ಕೆಳಭಾಗಕ್ಕೆ ಜಾರುತ್ತಿದ್ದು, ಆಸುಪಾಸಿನ ಜನರ ಬದುಕು ಅಕ್ಷರಶಃ ಕಸದ ರಾಶಿ ಯೊಳಗೆ ಸಮಾಧಿಯಾಗುವಂತಿದೆ.
ಕುಸಿದಿರುವ ತ್ಯಾಜ್ಯವು ಸಮೀಪದ ಮಂದಾರ ಪರಿಸರದ ಒಂದು ಕಿ.ಮೀ.ನಷ್ಟು ವಿಸ್ತಾರದಲ್ಲಿ ವ್ಯಾಪಿಸಿದ್ದು, ಸುಮಾರು 4 ಎಕರೆಯಷ್ಟು ಕೃಷಿಭೂಮಿಯನ್ನು ಆಪೋಷನ ತೆಗೆದುಕೊಂಡಿದೆ. ಎರಡು ನಾಗಬನ, ಎರಡು ದೈವಸ್ಥಾನ ಮತ್ತು ಒಂದು ಹಳೆಯ ಮನೆ ತ್ಯಾಜ್ಯ ರಾಶಿಯಲ್ಲಿ ಸಂಪೂರ್ಣ ಮುಳುಗಿದ್ದು, 10ರಷ್ಟು ಮನೆಗಳು, ದೈವಸ್ಥಾನಗಳು ಅಪಾಯದಲ್ಲಿವೆ.
ಬೃಹತ್ ಬೆಟ್ಟದಂತಿರುವ ತ್ಯಾಜ್ಯ ರಾಶಿಯ ಅವಾಂತರದಿಂದ ಐದಾರು ದಶಕದಿಂದ ಇಲ್ಲಿ ನೆಲೆಸಿರುವ ಕೆಲವುಕುಟುಂಬಗಳು ಊರು ತ್ಯಜಿಸಬೇಕಾದ ಸ್ಥಿತಿಯಲ್ಲಿದ್ದಾರೆ. ಮಳೆ ಜೋರಾದರೆ ತ್ಯಾಜ್ಯದ ರಾಶಿ ಮತ್ತಷ್ಟು ಮನೆ-ತೋಟಗಳನ್ನು ಆಪೋಷನ ಪಡೆಯುವ ಸಾಧ್ಯತೆಯಿದ್ದು, ಜನತೆ ಆತಂಕದಲ್ಲಿದ್ದಾರೆ.
ಅವೈಜ್ಞಾನಿಕ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಕಸದ ನಿರ್ವಹಣೆಯೂ ಸಮರ್ಪಕವಾಗಿ ನಡೆಯದೆ ತ್ಯಾಜ್ಯ ರಾಶಿ ಮಿತಿಮೀರಿದ ಎತ್ತರಕ್ಕೆ ಬೆಳೆದಿದೆ. ಭಾರೀ ಮಳೆಯಿಂದಾಗಿ ಒದ್ದೆಯಾಗಿ ತನ್ನ ಭಾರಕ್ಕೆ ತಾನೇ ಕುಸಿದು ಜಾರುತ್ತಿದೆ. ಸುಮಾರು 5-6 ಮನೆಗಳ ಜನರು ಸ್ಥಳಾಂತರಗೊಂಡಿದ್ದಾರೆ. 10ರಷ್ಟು ವಿದ್ಯುತ್ ಕಂಬಗಳು ತ್ಯಾಜ್ಯರಾಶಿ ಯೊಳಗೆ ಹುದುಗಿದ್ದು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಅಪಾಯದಲ್ಲಿ ಮನೆಗಳು
ತ್ಯಾಜ್ಯ ರಾಶಿ ಸುಮಾರು 50 ಮೀ. ಅಗಲದಲ್ಲಿ ತೋಟಗಳನ್ನು ನೆಲಸಮ ಮಾಡಿ ಮುನ್ನುಗ್ಗಿದ್ದು, ಹಲವು ಮನೆಗಳು ಅಪಾಯದಲ್ಲಿವೆ.
ಸಾವಿರಾರು ಅಡಿಕೆ ಮರಗಳ ಕುರುಹಿಲ್ಲ!
ಮಂಗಳವಾರ ರಾತ್ರಿಯಿಂದಲೇ ತ್ಯಾಜ್ಯ ರಾಶಿ ಹರಡಿದ ಪರಿಣಾಮ 2,000ಕ್ಕೂ ಅಧಿಕ ಅಡಿಕೆ ಮರಗಳುತ್ಯಾಜ್ಯ ರಾಶಿಯೊಂದಿಗೆ ನೆಲಸಮವಾಗಿವೆ. ಜತೆಗೆ ಸುಮಾರು 150ಕ್ಕೂ ಅಧಿಕ ತೆಂಗು, 70ಕ್ಕೂ ಅಧಿಕ ಹಲಸು, ಮಾವು ಸಹಿತ ಹಲವು ಮರಗಳು ನೆಲಕ್ಕುರುಳಿವೆ. ತ್ಯಾಜ್ಯ ರಾಶಿ ನುಗ್ಗುತ್ತಿರುವ ಕಾರಣಮರಗಳು ಅರ್ಧ ನಿಮಿಷಕ್ಕೊಂದರಂತೆ ನೆಲಕ್ಕುರುಳುತ್ತಿವೆ.
ಮಂದಾರ-ಕಂಜಿರಾಡಿ ರಸ್ತೆ ಬಂದ್
ಸ್ಥಳೀಯ ಸುಮಾರು 50ರಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಂದಾರ-ಕಂಜಿರಾಡಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ರಸ್ತೆಯ ಸುಮಾರು 50 ಮೀ. ಭಾಗದಲ್ಲಿ ತ್ಯಾಜ್ಯವೇ ಹರಡಿದೆ.
ಮಡಿಕೇರಿ ಘಟನೆಯ ನೆನಪು!
ಉದಯ್ ಕುಮಾರ್ ಕುಡುಪು ‘ಉದಯವಾಣಿ’ ಜತೆಗೆ ಮಾತನಾಡಿ, ಇಂತಹ ಘಟನೆಯನ್ನು ಹಿಂದೆಂದೂ ನೋಡಿರಲಿಲ್ಲ. ಕಳೆದ ವರ್ಷ ಮಡಿಕೇರಿಯಲ್ಲಿ ಗುಡ್ಡ ಕುಸಿದದೃಶ್ಯಗಳನ್ನು ನೆನಪಿಸುವ ರೀತಿ ಪಚ್ಚನಾಡಿ ತ್ಯಾಜ್ಯ ಗುಡ್ಡೆ ಕುಸಿದಿದೆ ಎಂದರು. ಮಾಜಿ ಮೇಯರ್‌ಭಾಸ್ಕರ್, ಆಯುಕ್ತ ಮೊಹಮ್ಮದ್ ನಝೀರ್ ಸಹಿತ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.