ಉಡುಪಿಯಲ್ಲಿ ಕನ್ನಡದ ಕಂಪು ಪಸರಿಸಿದ್ದ ಸುಷ್ಮಾ


Team Udayavani, Aug 8, 2019, 6:35 AM IST

kannada-kampu

ಉಡುಪಿ: ಸುಷ್ಮಾ ಸ್ವರಾಜ್‌ ಉಡುಪಿ ಜಿಲ್ಲೆಗೆ ಆಗಮಿಸಿದ್ದಾಗ ಕನ್ನಡದ ಕಂಪನ್ನು ಪಸರಿಸಿದ್ದು ಇಲ್ಲಿನವರಿಗೆ ಸದಾ ಹಸುರು ನೆನಪು.

1999ರಲ್ಲಿ ಸುಷ್ಮಾ ಅವರು ಸೋನಿಯಾ ಗಾಂಧಿ ವಿರುದ್ಧ
ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವೇಳೆ ಕಲಿತ ಕನ್ನಡ ಕೆಲವೇ ದಿನಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಪ್ರಯೋಜನಕ್ಕೆ ಬಂತು. ಆಗ ಉಡುಪಿಯ ಚಿತ್ತರಂಜನ್‌ ಸರ್ಕಲ್‌ ಮತ್ತು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಸಭೆಗಳಲ್ಲಿ ಅವರು ಕನ್ನಡದಲ್ಲಿ ಮಾತನಾಡಿದ್ದರು.

“ಕುಂದಾಪುರದಲ್ಲಿ 25 ನಿಮಿಷ ನಿರರ್ಗಳವಾಗಿ ಮಾತನಾಡಿದ್ದು ಇನ್ನೂ ನೆನಪಿನಲ್ಲಿದೆ’ ಎನ್ನುತ್ತಾರೆ ಕೋಟ ಶ್ರೀನಿವಾಸ ಪೂಜಾರಿ.

ಶ್ರೀಕೃಷ್ಣ ಮಠದಲ್ಲಿ 2009ರ ಸೆ. 11ರಂದು ಶ್ರೀಕೃಷ್ಣಜನ್ಮಾಷ್ಟಮಿ ಉದ್ಘಾಟಿಸಲು ಬಂದಾಗಲೂ ಸುಷ್ಮಾ ಕನ್ನಡದಲ್ಲಿ ಮಾತನಾಡಿದ್ದರು. 1999ರಲ್ಲಿ ಆಗ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದ ಶೀಲಾ ಕೆ. ಶೆಟ್ಟಿ, 2009ರಲ್ಲಿ ಸೋಮಶೇಖರ ಭಟ್ಟರ ಪತ್ನಿ ಶಾರದಾ ಭಟ್‌ ಮೊದ ಲಾದವರು ಬಾಗಿನ ನೀಡಿದ್ದರು.

1992ರ ಬಳಿಕ ಪೇಜಾವರ ಶ್ರೀಗಳ ಸಂಪರ್ಕಕ್ಕೆ ಬಂದ ಸುಷ್ಮಾ ಅವರು ಶ್ರೀಪಾದರು ದಿಲ್ಲಿಗೆ ಬಂದದ್ದು ಗೊತ್ತಾದಾಗ ಭೇಟಿ ಮಾಡುತ್ತಿದ್ದರು. ಉಮಾಶ್ರೀ ಭಾರತಿ ಆಯೋಜಿಸುತ್ತಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.

ಅಷ್ಟಮಿ ಉಂಡೆ, ಪತ್ರೊಡೆ ಇಷ್ಟ
ಸುಷ್ಮಾ ಅವರಿಗೆ ಅಷ್ಟಮಿ ಉಂಡೆ, ಪತ್ರೊಡೆ ಇಷ್ಟವಾಗಿತ್ತು. ಉಡುಪಿ ಯಿಂದ ದಿಲ್ಲಿಗೆ ಮರಳು ವಾಗ ಅವು ಗಳನ್ನು ಕಳುಹಿಸಿಕೊಟ್ಟಿದ್ದೆ. ಹಾಗೆಯೇ ಇಡ್ಲಿ ಸಾಂಬಾರ್‌, ಮಸಾಲೆ ದೋಸೆ, ಮಲ್ಲಿಗೆ ಹೂವು, ಉಡುಪಿ ಕೈಮಗ್ಗದ ಸೀರೆಗಳೂ ಪ್ರಿಯವಾಗಿದ್ದವು ಎಂದು ಸ್ಮರಿಸಿಕೊಳ್ಳುತ್ತಾರೆ ಉಡುಪಿಯ ಹಿರಿಯ ಬಿಜೆಪಿ ಕಾರ್ಯಕರ್ತೆ ಕಿರಣ ಕಾಮತ್‌.

ಮೃತದೇಹ ಹಸ್ತಾಂತರಕ್ಕೆ ನೆರವು
ಬಾರ್ಸಿಲೋನಾ ಪ್ರವಾಸಕ್ಕೆ ತೆರಳಿದ್ದ ಕುಂದಾಪುರ ಮೂಲದ ಮೀರಾ ಪ್ರವಾಸಿ ಹಡಗಿನಲ್ಲಿ ಮೃತಪಟ್ಟಿದ್ದರು. ಆಗ ಅವರ ಪಾರ್ಥಿವ ಶರೀರವನ್ನು ಕ್ಷಿಪ್ರವಾಗಿ ಸ್ವದೇಶಕ್ಕೆ ತರುವುದಕ್ಕೂ ಸುಷ್ಮಾ ಸ್ವರಾಜ್‌ ನೆರವಾಗಿದ್ದರು.

ತ್ವರಿತ ಸ್ಪಂದನೆ
ಸುಷ್ಮಾರನ್ನು ಎಲ್ಲರೂ ನೆನಪು ಮಾಡಿಕೊಳ್ಳುವುದು ವಿದೇಶ
ದಲ್ಲಿ ಭಾರತೀಯ ಮೂಲದ ವರು ತೊಂದರೆಗೊಳಗಾದರೆ ತತ್‌ಕ್ಷಣ ಸ್ಪಂದಿಸುತ್ತಿದ್ದುದಕ್ಕೆ. ಕಳೆದ ಮಾರ್ಚ್‌ನಲ್ಲಿ ಬಸೂÅರು ಮೂಲದ ಪ್ರಶಾಂತ್‌ ಹತ್ಯೆ ಪ್ರಕರಣದಲ್ಲಿಯೂ ಸರಣಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಲ್ಲದೆ, ಕುಟುಂಬಿಕರಿಗೆ ವಿದೇಶಕ್ಕೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದರು.

“ಕಾಕಡಿ’ ಕೇಳಿ ಪಡೆದರು
2009ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಬರುವಾಗ ಕಟೀಲು ಪೇಟೆಯಲ್ಲಿ ಸುಷ್ಮಾ ಸ್ವರಾಜ್‌ ಒಮ್ಮೆಲೆ ವಾಹನ ನಿಲ್ಲಿಸಿ “ಕಾಕಡಿ ಬೇಕು’ ಎಂದರು. ಅದೇನೆಂದು ಗೊತ್ತಾಗದೆ ಕಾರ್ಯಕರ್ತರು ಗಲಿಬಿಲಿಯಾಗಿ ಸೌತೆ, ಹೀರೆ, ಬೆಂಡೆ ತಂದಾಗ ಮುಳ್ಳುಸೌತೆ ತೋರಿಸಿ ಅದು ಬೇಕು ಎಂದರು. ಆ ದೃಶ್ಯವನ್ನು ನಾವೆಂದೂ ಮರೆಯುವಂತಿಲ್ಲ ಎನ್ನುತ್ತಾರೆ ಆಗ ಜತೆಗಿದ್ದ ಶಾಸಕ ರಘುಪತಿ ಭಟ್‌ ಮತ್ತು ಸುವರ್ಧನ ನಾಯಕ್‌.

ಸದಾ ಸ್ಮರಣಾರ್ಹ ತ್ವರಿತ ಸ್ಪಂದನೆ
ಕುಂದಾಪುರ: ಬಸೂÅರು ಮೂಲದ ಪ್ರಶಾಂತ್‌ ಜರ್ಮನಿಯಲ್ಲಿ ಹತ್ಯೆ ಯಾದಾಗ ಸುಷ್ಮಾ ಸ್ವರಾಜ್‌ ತತ್‌ಕ್ಷಣ ಸ್ಪಂದಿಸಿದ್ದನ್ನು ಮರೆಯಲಾಗದು.

ಪರಿಣಾಮಕಾರಿ ರಾಜಕಾರಣಿ
ಸುಷ್ಮಾ ಸ್ವರಾಜ್‌ ಕಾರ್ಯ ತತ್ಪರ ರಾಜಕಾರಣಿ. ಹಲವು ಬಾರಿ ನಾನು ನೆರವಿಗಾಗಿ ಸಂಪರ್ಕಿಸಿದ್ದಾಗಲೂ ತ್ವರಿತವಾಗಿ ಸ್ಪಂದಿಸಿದ್ದರು. ರಾಜ್ಯದಲ್ಲಿ ಪ್ರೊಟೆಕ್ಟ್ ಫ್ಯಾಮಿಲಿಯನ್‌ ಕಚೇರಿ ತೆರೆಯಬೇಕು ಎಂದು ನಾನು ಸಂಸದನಾಗಿದ್ದಾಗ ಕೇಳಿದ್ದೆ. ಅವರು ಕೂಡಲೇ ಕಚೇರಿ ಮಂಜೂರು ಮಾಡಿ ಪತ್ರ ಬರೆದಿದ್ದರು.
– ಕೆ. ಜಯಪ್ರಕಾಶ್‌ ಹೆಗ್ಡೆ ಮಾಜಿ ಸಂಸದರು

ಟಾಪ್ ನ್ಯೂಸ್

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.