ಬಣ್ಣದ ಲೋಕಕ್ಕೆ ಬಂದ ನಾನೇ ಧನ್ಯಾ…
Team Udayavani, Aug 9, 2019, 5:24 AM IST
ಕನ್ನಡ ಚಿತ್ರರಂಗ ಅಂದಾಕ್ಷಣ ಮೊದಲು ನೆನಪಾಗೋದೇ ಡಾ.ರಾಜಕುಮಾರ್. ಈಗಾಗಲೇ ರಾಜಕುಮಾರ್ ಅವರ ಪುತ್ರರು, ಮೊಮ್ಮಕ್ಕಳು, ಹಾಗೆಯೇ ಅವರ ಸಂಬಂಧಿಗಳು ಸಿನಿಮಾ ರಂಗಕ್ಕೆ ಎಂಟ್ರಿಯಾಗಿ ಜನಮನದಲ್ಲಿರುವುದು ಗೊತ್ತೇ ಇದೆ. ಇದುವರೆಗೆ ಡಾ.ರಾಜಕುಮಾರ್ ಅವರ ಕುಟುಂಬದಿಂದ ಹೆಣ್ಣು ಮಕ್ಕಳು ಈ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದರೂ, ತೆರೆ ಹಿಂದೆ ನಿಂತು ಕೆಲಸ ಮಾಡಿದ್ದೇ ಹೆಚ್ಚು ಹೊರತು, ತೆರೆಯ ಮುಂದೆ ಬಂದವರಲ್ಲ. ಈಗ ಇದೇ ಮೊದಲ ಬಾರಿಗೆ ಡಾ.ರಾಜಕುಮಾರ್ ಮೊಮ್ಮಗಳು ನಾಯಕಿಯಾಗಿ ಎಂಟ್ರಿಯಾಗಿದ್ದಾರೆ. ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮ್ ಕುಮಾರ್ ಅವರ ಮಗಳು ಧನ್ಯಾ ರಾಮ್‌ಕುಮಾರ್ ಸಿನಿಮಾ ಸನಿಹಕೆ ಬಂದವರು. ಮನೆಯವರೆಲ್ಲರ ಪ್ರೀತಿಯ ಪ್ರೋತ್ಸಾಹ, ಸಹಕಾರದಿಂದಾಗಿ ಧನ್ಯಾ ರಾಮ್ ಕುಮಾರ್ ಮೊದಲ ಬಾರಿಗೆ ಬಣ್ಣ ಹಚ್ಚುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಂದಹಾಗೆ, ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಅಭಿನಯಿಸುತ್ತಿರುವ ಚಿತ್ರದ ಹೆಸರು “ನಿನ್ನ ಸಹನಿಕೆ’. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಕೂಡ ಹೊರಬಂದಿದೆ. ತಮ್ಮ ಮೊದಲ ಚಿತ್ರದ ಬಗ್ಗೆ ಧನ್ಯಾ ರಾಮ್‌ಕುಮಾರ್ ಹೇಳುವುದಿಷ್ಟು…
ತಮ್ಮ ಮೊದಲ ಚಿತ್ರ ‘ನಿನ್ನ ಸನಿಹಕೆ’ ಕುರಿತು ಹೇಳಿಕೊಳ್ಳುವ ಧನ್ಯಾ, ‘ಒಳ್ಳೆಯ ಸಿನಿಮಾ ಮೂಲಕವೇ ನಾನು ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದೇನೆ ಎಂಬ ಖುಷಿ ಇದೆ. ನಿರ್ದೇಶಕ ಸುಮನ್ ಜಾದೂಗರ್ ಬಗ್ಗೆ ಹೇಳಲೇಬೇಕು. ಅವರು ನನ್ನ ಫೋಟೋ ನೋಡಿದಾಕ್ಷಣ, ಈ ಚಿತ್ರದ ಪಾತ್ರಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಾರೆ ಅಂತ ನಿರ್ಧರಿಸಿ, ಆಯ್ಕೆ ಮಾಡಿದ್ದಾರೆ. ಇನ್ನು, ಇಡೀ ಚಿತ್ರತಂಡ ನನ್ನ ಮೇಲೆ ನಂಬಿಕೆ ಇಟ್ಟು, ಪಾತ್ರ ನಿರ್ವಹಿಸಬಲ್ಲಳು ಎಂದು ಅವಕಾಶ ಕೊಟ್ಟಿದೆ. ಇದು ನನ್ನ ಮೊದಲ ಸಿನಿಮಾ. ನನ್ನ ಕನಸು ಕೂಡ. ಹಾಗೆಯೇ, ಇಲ್ಲಿ ಡ್ರೀಮ್ ಟೀಮ್ ಕೂಡ ಇದೆ. ಹಾಗಾಗಿ ಹೊಸತನಕ್ಕೆ ಇಲ್ಲಿ ಕೊರತೆ ಇರಲ್ಲ. ಸೂರಜ್ ಗೌಡ ಬಗ್ಗೆ ಹೇಳಲೇಬೇಕು. ಅವರು ನನ್ನ ಮೊದಲ ಕೋ ಸ್ಟಾರ್. ತುಂಬಾನೇ ಕಂಫರ್ಟ್ ಫೀಲ್ ಮಾಡಿಸಿದ್ದಾರೆ. ಸಾಕಷ್ಟು ಸಲಹೆ ಕೊಟ್ಟಿದ್ದಾರೆ. ನಾನು ಹೊಸಬಳು ಎಂಬ ಫೀಲ್ ಮಾಡಿಸಿಲ್ಲ. ಈಗಷ್ಟೇ ನನ್ನ ಹೊಸ ಜರ್ನಿ ಶುರುವಾಗುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಈ ಧನ್ಯಾ ಮೇಲಿರಲಿ’ ಎಂಬುದು ಧನ್ಯಾ ಮಾತು.
ಇದಕ್ಕಿಂತ ಒಳ್ಳೇ ತಂಡ ಸಿಗಲ್ಲ
‘ನಿನ್ನ ಸನಿಹಕೆ’ ಚಿತ್ರದ ಫಸ್ಟ್‌ಲುಕ್ ಹಾಗು ಶೀರ್ಷಿಕೆಯನ್ನು ಹಿರಿಯ ನಿರ್ಮಾಪಕ ಎಸ್.ಎ.ಗೋವಿಂದರಾಜು, ಪೂರ್ಣಿಮಾ ರಾಮ್‌ಕುಮಾರ್ ಅವರು ಜೊತೆಗೂಡಿ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭಕೋರಿದರು. ನಿರ್ದೇಶಕ ಸುಮನ್ ಜಾದೂಗರ್ ಅವರಿಗೆ ಇದು ಮೊದಲ ಚಿತ್ರ. ಕಳೆದ ಹದಿನೆಂಟು ವರ್ಷಗಳಿಂದಲೂ ಸಿನಿಮಾರಂಗದಲ್ಲಿ ಬರಹಗಾರರಾಗಿ, ಕೋ- ಡೈರೆಕ್ಟರ್ ಆಗಿ ಆ್ಯಕ್ಟೀವ್ ಆಗಿದ್ದಾರೆ ಸುಮನ್. ಅಂದು ತುಂಬಾ ಖುಷಿಯ ಮೂಡ್‌ನಲ್ಲಿದ್ದ ಸುಮನ್, ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಹೇಳಿದ್ದು ಹೀಗೆ. ‘ಒಬ್ಬ ಹೊಸ ನಿರ್ದೇಶಕ ಲಾಂಚ್ ಆಗೋಕೆ ಇದಕ್ಕಿಂತ ಒಳ್ಳೆಯ ತಂಡ ಸಿಗೋದಿಲ್ಲ. ಮೊದಲ ಚಿತ್ರಕ್ಕೇ, ನಿರೀಕ್ಷೆ ಮಾಡದಷ್ಟು ಬೆಂಬಲ, ಪ್ರೋತ್ಸಾಹ ಸಿಕ್ಕಿದೆ. ‘ಸಿಲಿಕಾನ್ ಸಿಟಿ’ ಸಮಯದಲ್ಲೇ ನಾನು ಸೂರಜ್‌ಗೌಡ ಜೊತೆ ಚಿತ್ರ ಮಾಡುವ ಕುರಿತು ಚರ್ಚಿಸುತ್ತಿದ್ದೆ. ಕಳೆದ ಮೂರು ವರ್ಷಗಳಿಂದಲೂ, ಸುಮಾರು ಐದಾರು ಕಥೆಗಳ ಬಗ್ಗೆ ಚರ್ಚಿಸಿದ್ದು ಉಂಟು. ಕೊನೆಗೆ, ಸೂರಜ್‌ಗೌಡ ಒಮ್ಮೆ ಭೇಟಿ ಮಾಡಿ, ಈ ಕಥೆ ಹೇಳಿದರು. ತುಂಬಾ ಚೆನ್ನಾಗಿತ್ತು. ನೀವೇ ನಿರ್ದೇಶನ ಮಾಡಬೇಕು ಅಂತಾನೂ ಹೇಳಿಬಿಟ್ಟರು. ಕೊನೆಗೆ ನಿರ್ಮಾಪಕರನ್ನೂ ಭೇಟಿ ಮಾಡಿಸಿದರು. ಈಗ ನಾನು ನಿಮ್ಮ ಸನಿಹಕೆ ಬಂದಿದ್ದೇನೆ. ಇದು ಮೊದಲ ಹೆಜ್ಜೆ. ನಿರ್ಮಾಪಕರ ಕೊಡುತ್ತಿರುವ ಧೈರ್ಯ, ಸಹಕಾರದಿಂದ ಒಳ್ಳೆಯ ಚಿತ್ರ ಮಾಡ್ತೀನಿ ಎಂಬ ವಿಶ್ವಾಸವಿದೆ. ಇದೊಂದು ಲವ್‌ಸ್ಟೋರಿಯಾಗಿದ್ದು, ಈಗಿನ ಜಾನರ್‌ನ ಕಥೆ ಇಲ್ಲಿದೆ.’ ಎನ್ನುತ್ತಾರೆ ಸುಮನ್ ಜಾದೂಗರ್.
ನಾಯಕ ಸೂರಜ್‌ಗೌಡ ಅವರಿಗೆ ಮೊದಲ ಸಲ ಗೆಳೆಯರ ಜೊತೆ ಚಿತ್ರ ಮಾಡುತ್ತಿರುವ ಖುಷಿ. ನಿರ್ಮಾಪಕರು ಅವರ ಮೈಸೂರಿನ ಕಾಲೇಜು ಗೆಳೆಯರು. ಕಾಲೇಜು ದಿನಗಳ ಸಂದರ್ಭದಲ್ಲಿ ಗೆಳೆಯರ ಮಧ್ಯೆ ಸ್ಪರ್ಧೆಯೇ ಹೆಚ್ಚಾಗಿದ್ದನ್ನು ನೆನಪಿಸಿಕೊಳ್ಳುವ ಸೂರಜ್‌ಗೌಡ, ‘ಹದಿನೈದು ವರ್ಷಗಳ ಗೆಳೆತನ ಇಂದಿಗೂ ಹಾಗೆಯೇ ಇದೆ. ಈಗ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಒಂದೊಳ್ಳೆಯ ತಂಡ ಕಟ್ಟುವುದು ಸುಲಭವಲ್ಲ. ಇದು ಅಂತಹ ಅದ್ಭುತ ತಂಡ. ಎರಡು ವರ್ಷಗಳ ಕನಸು ಇದು. ಕಥೆ ಬಳಿಕ ನಿರ್ಮಾಪಕರು ಸಿಕ್ಕರು. ನಾಯಕಿಯ ಹುಡುಕಾಟಕ್ಕೆ ಹೊರಟಾಗ, ಕನ್ನಡದ ಹುಡುಗಿಯೇ ಬೇಕು ಎಂಬ ನಿರ್ಧಾರ ನಮ್ಮದ್ದಾಗಿತ್ತು. ಬಂದ ಅದೆಷ್ಟೋ ಫೋಟೋಗಳ ಪೈಕಿ ಧನ್ಯಾ ರಾಮ್‌ಕುಮಾರ್ ಫೋಟೋ ಎಲ್ಲರಿಗೂ ಇಷ್ಟವಾಯ್ತು. ದೊಡ್ಡಮನೆ ಹುಡುಗಿಯ ಆಯ್ಕೆ ಆಯ್ತು. ನಿಜಕ್ಕೂ ಧನ್ಯಾ ತುಂಬಾ ಹಾರ್ಡ್‌ವರ್ಕ್ ಮಾಡ್ತಾರೆ. ಇದಕ್ಕಾಗಿ ವರ್ಕ್‌ಶಾಪ್ ಮಾಡಲಾಗಿದೆ. ಅವರ ಬದ್ಧತೆ ಏನೆಂಬುದನ್ನು ನಾನು ನೋಡಿದ್ದೇನೆ. ಇನ್ನು, ನಾನಿಲ್ಲಿ ಆಗಷ್ಟೇ ಕಾಲೇಜು ಮುಗಿಸಿ, ಕೆಲಸ ಮಾಡುತ್ತಿರುವ ಹುಡುಗನ ಪಾತ್ರ ಮಾಡುತ್ತಿದ್ದೇನೆ. 26 ವರ್ಷದ ಹುಡುಗನಂತೆ ಕಾಣಬೇಕಿರುವುದರಿಂದ ಕೇವಲ 20 ದಿನದಲ್ಲೇ ನಾನು 8 ಕೆಜಿ ತೂಕ ಇಳಿಸಿಕೊಂಡಿದ್ದೇನೆ’ ಎಂಬುದು ಸೂರಜ್‌ಗೌಡ ಕೊಡುವ ವಿವರ.
ನಿರ್ಮಾಪಕ ಅಕ್ಷಯ್ ರಾಜಶೇಖರ್‌ಗೆ ಇದು ಮೊದಲ ಚಿತ್ರ. ಅವರ ಹತ್ತು ವರ್ಷಗಳ ಕನಸು ‘ನಿನ್ನ ಸನಿಹಕೆ’ ಮೂಲಕ ಈಡೇರುತ್ತಿದೆಯಂತೆ. ಮೊದಲಿನಿಂದಲೂ ಸಿನಿಮಾ ಕ್ರೇಜ್ ಇದ್ದ ಅಕ್ಷಯ್‌ಗೆ, ಈ ಕಥೆ ಇಷ್ಟವಾಗಿ ನಿರ್ಮಾಣಕ್ಕಿಳಿದಿದ್ದಾರೆ. ಇದೊಂದು ಹೊಸತನ ಇರುವ ಚಿತ್ರವಾಗಲಿದೆ ಎಂಬುದು ಅಕ್ಷಯ್ ಮಾತು.
ಮತ್ತೂಬ್ಬ ನಿರ್ಮಾಪಕ ರಂಗನಾಥ್ ಕುಡ್ಲಿ ಕೂಡಾ ತಮ್ಮ ಸಿನಿಮಾ ಅನುಭವ ಹಂಚಿಕೊಂಡರು. ಚಿತ್ರಕ್ಕೆ ರಘುದೀಕ್ಷಿತ್ ಸಂಗೀತ ನೀಡುತ್ತಿದ್ದಾರೆ. ಅವರಿಗಿಲ್ಲಿ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಜಾಗವಿದೆಯಂತೆ. ಅಭಿಲಾಶ್ ಕಳತ್ತಿ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸುರೇಶ್ ಅರ್ಮುಗಂ ಸಂಕಲನವಿದೆ. ಪ್ರವೀಣ್‌ಕುಮಾರ್ ಸಂಭಾಷಣೆ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.