ಕಡಬ: ಹೊಸಮಠ ಹೊಸ ಸೇತುವೆಯ ಮಟ್ಟಕ್ಕೆ ಏರಿದ ನೆರೆ
Team Udayavani, Aug 9, 2019, 5:00 AM IST
ಕಡಬ: ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಕಡಬ ಪರಿಸರದಲ್ಲಿ ಗದ್ದೆ, ತೋಟಗಳಿಗೂ ನೆರೆನೀರು ನುಗ್ಗಿದೆ. ಬುಧವಾರ ರಾತ್ರಿ ಹಾಗೂ ಗುರುವಾರ ಹಗಲು ಬಿರುಸಾಗಿ ಮಳೆ ಸುರಿದು ಗುಂಡ್ಯ ಹೊಳೆ ಹಾಗೂ ಕುಮಾರಧಾರೆಯಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ.
ಕುಟ್ರಾಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ನಾಡೋಳಿ, ಉಳಿಪ್ಪು ಹಾಗೂ ಬೈತನೆ ಕಾಲನಿಯ ಕೆಲವು ಮನೆಗಳ ಅಂಗಳದ ವರೆಗೂ ನೀರು ಬಂದಿದೆ. ಕುಟ್ರಾಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಕಿರಣ್ ಗೋಗಟೆ, ಉಪಾಧ್ಯಕ್ಷ ಆನಂದ ಪೂಜಾರಿ ಅಲಾರ್ಮೆ, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಸ ಸೇತುವೆ ಮಟ್ಟಕ್ಕೆ ನೀರು: ಆತಂಕ
ಹೊಸಮಠದ ನೂತನ ಸೇತುವೆಯ ಮೇಲೆಯೂ ನೆರೆನೀರು ಹರಿಯುವ ಹಂತಕ್ಕೆ ನೀರು ಉಕ್ಕಿ ಹರಿಯುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷವೂ ಹೊಸ ಸೇತುವೆಯ ಮಟ್ಟಕ್ಕೆ ನೆರೆ ನೀರು ತಲುಪಿತ್ತು. ಹೊಸಮಠದಲ್ಲಿ ಸೇತುವೆಯ ಕಾಮಗಾರಿ ನಡೆಯುತ್ತಿದ್ದ ವೇಳೆ ಪಿಲ್ಲರ್ ನಿರ್ಮಾಣದ ಹಂತದಲ್ಲಿ ಸೇತುವೆಯನ್ನು ಇನ್ನಷ್ಟು ಎತ್ತರಿಸಬೇಕೆಂಬ ಸಲಹೆ ಕಡಬದ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಸಹಿತ ಸಾರ್ವ ಜನಿಕ ವಲಯದಿಂದ ಕೇಳಿ ಬಂದಿತ್ತು. ಪ್ರತಿಭಟನೆಗೂ ಮುಂದಾಗಿದ್ದರು. ಮನವಿಯ ಹಿನ್ನೆಲೆಯಲ್ಲಿ ಸೇತುವೆಯ ಎತ್ತರದ ಕುರಿತು ಮರು ಪರಿಶೀಲನೆ ಮಾಡುವಂತೆ ಶಾಸಕ ಎಸ್. ಅಂಗಾರ ಸೇತುವೆ ಕಾಮಗಾರಿಯ ಉಸ್ತವಾರಿ ವಹಿಸಿಕೊಂಡಿದ್ದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗಳಿಗೆ ಸೂಚಿಸಿದ್ದರು.
ಸಂಚಾರಕ್ಕೆ ತೊಡಕು
ಗುಂಡ್ಯ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಹೊಸಮಠದಲ್ಲಿನ ಹಳೆಯ ಮುಳುಗು ಸೇತುವೆ ಎಂದಿನಂತೆ ಮುಳುಗಡೆಯಾಗಿದೆ. ಹೊಸದಾಗಿ ಎತ್ತರಿಸಿ ನಿರ್ಮಿಸಲಾಗಿರುವ ಹೊಸಮಠದ ನೂತನ ಸೇತುವೆಯ ಸ್ಲ್ಯಾಬ್‌ಗ ನದಿಯ ನೀರು ತಾಗುತ್ತಿದ್ದು, ನದಿಯ ಇಕ್ಕೆಲಗಳಲ್ಲಿರುವ ತೋಟಗಳಿಗೆ ಹಾಗೂ ಗದ್ದೆಗಳಿಗೆ ನೀರು ನುಗ್ಗಿದೆ. ಪುಳಿಕುಕ್ಕು ಬಳಿ ಕೋಂಟೇಲು ತೊರೆಯಲ್ಲಿ ನೀರು ಉಕ್ಕಿ ರಸ್ತೆಗೆ ಬಂದ ಪರಿಣಾಮ ಕಡಬ-ಪಂಜ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.