ಕುಪ್ಪೆಟ್ಟಿ: ಬಿಎಸ್ಸೆನ್ನೆಲ್ ಸಿಬಂದಿಗೆ ದಿಗ್ಬಂಧನ
Team Udayavani, Aug 9, 2019, 5:00 AM IST
ಉಪ್ಪಿನಂಗಡಿ: ಬಿಎಸ್ಸೆನ್ನೆಲ್ನ ಅಸಮರ್ಪಕ ಸೇವೆಯಿಂದಾಗಿ ಸ್ಥಿರ ದೂರವಾಣಿ ಹಾಗೂ ಮೊಬೈಲ್ ಸೌಲಭ್ಯ ತಟಸ್ಥವಾಗಿದೆ ಎಂದು ಕೋಪಗೊಂಡ ಗ್ರಾಹಕರೊಬ್ಬರು ಬಿಎಸ್ಸೆನ್ನೆಲ್ ಕಚೇರಿಗೆ ಚಿಲಕ ಹಾಕಿ ಸಿಬಂದಿಗೆ ದಿಗ್ಬಂಧನ ವಿಧಿಸಿದ ಘಟನೆ ಗುರುವಾರ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಎಂಬಲ್ಲಿ ನಡೆದಿದೆ.
ಸತತ ದೂರು ನೀಡಿದರೂ ದೂರವಾಣಿ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸದ ಬಿಎಸ್ಸೆನ್ನೆಲ್ ಸಿಬಂದಿ ವಿರುದ್ಧ ಕೆಂಡಾಮಂಡಲರಾದ ಹಲೇಜಿ ಮೂಲದ ಗ್ರಾಹಕರೊಬ್ಬರು ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಿಎಸ್ಸೆನ್ನೆಲ್ ಲೈನ್ಮ್ಯಾನ್ ಬೊಮ್ಮಣ್ಣ ಗೌಡ ಕಚೇರಿಯಲ್ಲಿದ್ದ ಸಂದರ್ಭದಲ್ಲಿ ಅವರನ್ನು ಕಚೇರಿಯೊಳಗಿಟ್ಟು, ಬಾಗಿಲಿಗೆ ಚಿಲಕ ಜಡಿದರು.
ಗ್ರಾಹಕರ ಈ ವರ್ತನೆಯಿಂದ ಕಂಗೆಟ್ಟ ಬಿಎಸ್ಸೆನ್ನೆಲ್ ಸಿಬಂದಿ ತನ್ನ ಮೇಲಧಿಕಾರಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದರು. ಅಧಿಕಾರಿಗಳು ಚಿಲಕ ಹಾಕಿದ ಗ್ರಾಹಕನನ್ನು ಸಂಪರ್ಕಿಸಿ, ಚಿಲಕ ತೆಗೆದು ಸಿಬಂದಿಯನ್ನು ಬಿಡದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದರು. ಬಳಿಕ ಆ ಗ್ರಾಹಕ ಸಿಬಂದಿಯನ್ನು ಮುಕ್ತಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.