ಕಾಶ್ಮೀರ ಸಮಸ್ಯೆ: ಕಾಂಗ್ರೆಸ್ ಗೇಕೆ ಈ ಪರಿಯ ಮರೆವು?


Team Udayavani, Aug 9, 2019, 6:25 AM IST

kashmir-samasye

ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಸಂಸದರಿಬ್ಬರು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೆಯ ವಿಧಿಯ ರದ್ದತಿ ಗೊತ್ತುವಳಿಯ ಪ್ರತಿಗಳನ್ನು ಹರಿದು ಹಾಕಿದ ಘಟನೆ ನಿಜಕ್ಕೂ ಆಶ್ಚರ್ಯಕರವಾಗಿದೆ.

ಸಂಸತ್ತಿನ ಒಳಗಾಗಲಿ, ಹೊರಗಾಗಲಿ ಕಾಶ್ಮೀರ ಸಮಸ್ಯೆ ಕುರಿತಂತೆ ತಮ್ಮ ಪಕ್ಷ ತೆಗೆದುಕೊಂಡಿರುವ ನಿಲುವಿನ ಪ್ರಶ್ನೆ ಎದುರಾದಾಗ ಕಾಂಗ್ರೆಸ್‌ ಸದಸ್ಯರು ಮರೆವಿನ ರೋಗದಿಂದ ಬಳಲುತ್ತಿರುವಂತೆ ಕಂಡು ಬರುತ್ತಿರುವುದು ನಿಜಕ್ಕೂ ಶೋಚನೀಯ. ನೆಹರೂ-ಇಂದಿರಾ ವಂಶದ ವ್ಯಕ್ತಿ ಪಕ್ಷದ ಪರಮೋಚ್ಚ ಸ್ಥಾನದಲ್ಲಿಲ್ಲದಿದ್ದರೆ ಪಕ್ಷ ಅಸ್ತಿತ್ವ ಕಳೆದುಕೊಳ್ಳುವುದೆಂಬ ಸಿದ್ಧಾಂತವನ್ನು ಆಚ್ಛಾದಿಸಿಕೊಂಡಿರುವ ಅವರು, ವಿವಿಧ ಕಾಲಘಟ್ಟಗಳಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸಿದ ಅನೇಕ ಉನ್ನತ ಮಟ್ಟದ ನಾಯಕರನ್ನು ಮರೆತೇ ಬಿಟ್ಟಿದ್ದಾರೆ.

ಕಾಂಗ್ರೆಸಿಗರ ನೆನಪು ಎಷ್ಟೊಂದು ಹೃಸ್ವವೆಂದರೆ, ಅವರು ಸರ್ವಾಂಗಶುದ್ಧ ಕಾಂಗ್ರೆಸಿಗರಾಗಿದ್ದ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರನ್ನು ಎಂದೋ ಮರೆತಾಗಿದೆ. ಭೂತಪೂರ್ವ ಆಂಧ್ರಪ್ರದೇಶದ ಮುಖ್ಯಮಂತ್ರಿ ಹುದ್ದೆಯಿಂದ ತನ್ನನ್ನು ಅನ್ಯಾಯವಾಗಿ ಕಿತ್ತು ಹಾಕಲಾಯಿತಾದರೂ ಪಿ.ವಿ.ಎನ್‌. ಅವರು ಪಕ್ಷನಿಷ್ಠೆಯನ್ನು ಬಿಟ್ಟುಕೊಟ್ಟಿರಲಿಲ್ಲ.

ಜಮ್ಮು – ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ಮೂಲಕ ರಾಜ್ಯದ ಸಮಸ್ಯೆ ಎಂಬ ಪೆಡಂಭೂತದ ಮೇಲೆ ಅತ್ಯಂತ ಪ್ರಬಲವಾದ ಪ್ರಹಾರವನ್ನು ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ನೀಡಿರುವ ಈ ಐತಿಹಾಸಿಕ ಸಂದರ್ಭದಲ್ಲಿ ಪಿ.ವಿ. ನರಸಿಂಹ ರಾವ್‌ ಅವರನ್ನು ನೆನಪು ಮಾಡಿಕೊಳ್ಳುವುದು ಅತ್ಯಂತ ಸಮಂಜಸವಾಗಿದೆ. ಬಿಜೆಪಿ ಸಂಸತ್ತಿನಲ್ಲಿ ಪೂರ್ಣಬಹುಮತ ಪಡೆದುಕೊಂಡ ಬೆನ್ನಿಗೇ ಮೋದಿ – ಶಾ ಜೋಡಿ ಪ್ರಕ್ಷುಬ್ಧ ಜಮ್ಮು – ಕಾಶ್ಮೀರದತ್ತ ತನ್ನ ಆಕ್ರಮಣಕಾರಿ ನಿಲುವನ್ನು ಕಾರ್ಯರೂಪಕ್ಕಿಳಿಸಲು ಮುಂದಾಯಿತು.

ಸಂವಿಧಾನದ 370ನೆಯ ವಿಧಿ ಹಾಗೂ 35 (ಎ) ವಿಧಿಯನ್ನು ರದ್ದು ಪಡಿಸುವ ಬಗ್ಗೆ ಪಕ್ಷ ಬಹು ಹಿಂದಿನಿಂದಲೇ ಮಾತಾಡುತ್ತಿತ್ತಾದರೂ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ)ಯ ಜತೆಗೆ ಸೇರಿಕೊಂಡು ಮೈತ್ರಿ ಸರಕಾರ ರಚನೆಯಾಗುವವರೆಗೆ ಈ ವಿಷಯವನ್ನು ಹಿನ್ನೆಲೆಗೆ ಸೇರಿಸಿಟ್ಟಿತ್ತು.

ಪಿ.ವಿ.ಎನ್‌. ಅವರು ಅಂದಿನ ತಮ್ಮ ವಿತ್ತ ಸಚಿವ ಡಾ| ಮನಮೋಹನ್‌ ಸಿಂಗ್‌ ಅವರೊಂದಿಗೆ ಸೇರಿಕೊಂಡು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಉದಾರೀಕರಣ ನೀತಿಯನ್ನು ಜಾರಿಗೆ ತಂದರೆಂದು ಚೆನ್ನಾಗಿ ನೆನಪಿಸಿಕೊಳ್ಳಲಾಗುತ್ತಿದೆಯಾದರೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಬಲ ನೀತಿಯೊಂದನ್ನು ಜಾರಿಗೊಳಿಸಿದ್ದಕ್ಕಾಗಿಯೂ ಅವರ ಹೆಸರನ್ನು ನೆನೆಯಬೇಕಾಗುತ್ತದೆ. ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ ವಶಕ್ಕೆ ಪಡೆದುಕೊಳ್ಳುವ ಆದ್ಯತೆಯ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. (ಆ ಕೆಲಸ ಆಗಬೇಕಾಗಿದೆ) ಎಂದು ಕೆಂಪುಕೋಟೆಯಿಂದ ಮೊತ್ತ ಮೊದಲಿಗೆ ಘೋಷಿಸಿದ್ದ ಪ್ರಧಾನಮಂತ್ರಿ ಅವರು. “ಪಾಕಿಸ್ಥಾನದ ಪಾಲಿಗೆ ಇನ್ನೂ ಪೂರ್ಣಗೊಳ್ಳದಿರುವ ಆದ್ಯತೆಯ ಕಾರ್ಯವೆಂದರೆ ಕಾಶ್ಮೀರವನ್ನು ಮರಳಿ ಪಡೆಯುವುದು’ ಎಂಬ ಆಗಿನ ಪಾಕ್‌ ಪ್ರಧಾನಿ ಬೆನಝೀರ್‌ ಭುಟ್ಟೋ ಅವರ ಪ್ರಚೋದನಕಾರಿ ಹೇಳಿಕೆಗೆ ರಾವ್‌ ನೀಡಿದ್ದ ಪ್ರತ್ಯುತ್ತರ ಇದಾಗಿತ್ತು. ಈ ಹೇಳಿಕೆಯ ಮೂಲಕ ಆಕೆ (ಭುಟ್ಟೋ) ಸೂಚಿಸುತ್ತಿದ್ದದ್ದು ಪೂರ್ಣರೂಪದ ಜಮ್ಮು-ಕಾಶ್ಮೀರವನ್ನು; ಭಾರತದಲ್ಲಿನ ಅಕ್ರಮ ವಶೀಕೃತ ಕಾಶ್ಮೀರಿ ನೆಲವನ್ನು ಹಾಗೂ 1948ರಲ್ಲಿ ಪಾಕಿಸ್ಥಾನ ಯಾವ ಭಾಗವನ್ನು ಬಿಟ್ಟುಕೊಟ್ಟಿತ್ತೋ, ಆ “ಆಜಾದ್‌ ಕಾಶ್ಮೀರ್‌’ ಎಂಬ ಪ್ರದೇಶವನ್ನು ಕಾಶ್ಮೀರ ರಾಜ್ಯವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವ ಉದ್ದೇಶದ ಯುದ್ಧ ಸಾವಿರ ವರ್ಷಗಳವರೆಗೆ ನಡೆದರೂ ಅದಕ್ಕೆ ಪಾಕಿಸ್ಥಾನ ಸಿದ್ಧವಿದೆ’ ಎಂದು ಆಕೆಯ ತಂದೆ ಜುಲ್ಫಿಕರ್‌ ಅಲಿ ಭುಟ್ಟೋ ಹೇಳಿಕೊಳ್ಳುತ್ತಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಇನ್ನೊಂದು ಮಾತು ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಘಟಕಗಳಲ್ಲಿ ಪಾಕಿಸ್ಥಾನದ ಮೇಲೆ ಭಾರೀ ವಿಜಯ ಸಾಧಿಸಿದ್ದ ಸರಕಾರವೆಂದರೆ ಪಿ.ವಿ. ನರಸಿಂಹರಾಯರದೇ. ಅನೇಕ ವರ್ಷಗಳ ಕಾಲ ಅಪ್ರತಿಮ ಬುದ್ಧಿವಂತ ಎನ್‌. ಗೋಪಾಲಸ್ವಾಮಿ ಅಯ್ಯಂಗಾರ್‌ ಅಥವಾ ಅದ್ಭುತ ವಾಗ್ಮಿ ವಿ.ಕೆ. ಕೃಷ್ಣ ಮೆನೋನ್‌ರಂಥ (ವಿಶ್ವಸಂಸ್ಥೆಯಲ್ಲಿನ) ಭಾರತೀಯ ವಕ್ತಾರರು ಅಮೆರಿಕ ಹಾಗೂ ಇತರ ಪಾಶ್ಚಾತ್ಯ ಮುಂಚೂಣಿ ರಾಷ್ಟ್ರಗಳ ಮನವೊಲಿಸಲು ಸಾಧ್ಯವಾಗಿರಲಿಲ್ಲ. ಪಾಕ್‌ ವಕ್ತಾರರಾಗಿದ್ದ ಮೊಹಮ್ಮದ್‌ ಜಾಫ‌ರುಲ್ಲಾ ಖಾನ್‌ (ಭಾರತದ ಫೆಡರಲ್‌ ಕೋರ್ಟ್‌ ನ ಭೂತಪೂರ್ವ ನ್ಯಾಯಾಧೀಶ) ಹಾಗೂ ಸರ್‌ ಫಿರೋಜ್‌ ಖಾನ್‌ ನೂನ್‌ರಂಥವರ ಮಾತುಗಳೆದುರು ಮೇಲೆ ಹೇಳಿದ ನಮ್ಮ ವಕ್ತಾರರುಗಳ ಮಾತುಗಳು ಕಾಂತಿಕಳೆದುಕೊಂಡವು. ಇಂದಿನ ಕಾಂಗ್ರೆಸಿಗರು ಅಂದಿನ ತಮ್ಮ ಪಕ್ಷೀಯರೇ ಆಗಿದ್ದ ಪಿ. ವಿ. ನರಸಿಂಹ ರಾವ್‌ ಅವರು 1994ರಲ್ಲಿ ಏನು ಮಾಡಿದರೆಂದು ಒಮ್ಮೆ ನೆನಪಿಸಿಕೊಳ್ಳಲಿ. ಜಿನೇವಾದಲ್ಲಿ ಕಾಶ್ಮೀರ ಸಮಸ್ಯೆ ಕುರಿತಂತೆ ಚರ್ಚಿಸಲು ತೆರಳಿದ್ದ ಭಾರತೀಯ ನಿಯೋಗದ ಮುಖ್ಯಸ್ಥನನ್ನಾಗಿ ಅಂದಿನ ಪ್ರಚಂಡ ವಿಪಕ್ಷೀಯ ನಾಯಕರಾಗಿದ್ದ ಅಟಲ್‌ಬಿಹಾರಿ ವಾಜಪೇಯಿಯವರನ್ನು ನೇಮಿಸಿ ಕಳಿಸಿಕೊಟ್ಟಿದ್ದರು ನರಸಿಂಹರಾವ್‌! ಈ ನಿಯೋಗದಲ್ಲಿ ಮುಸ್ಲಿಂ ಸದಸ್ಯರೂ ಇದ್ದರು. ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ಡಾ| ಫಾರೂಕ್‌ ಅಬ್ದುಲ್ಲಾ, ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್‌ ಖುರ್ಷಿದ್‌ ಮುಂತಾದವರು. ಅಂದು ನರಸಿಂಹ ರಾವ್‌ ಪಾಕಿಸ್ಥಾನದ ಮೇಲೆ ಗಣನೀಯವಾದ ರಾಜತಾಂತ್ರಿಕ ವಿಜಯವನ್ನು ಸಾಧಿಸಿದ್ದರು.

ನಮ್ಮ ಸಂಸತ್ತು 1994ರ ಫೆ. 22ರಂದು ಒಂದು ಬಹುಮುಖ್ಯ ನಿರ್ಣಯವನ್ನು ಒಕ್ಕೊರಲಿನಿಂದ ತೆಗೆದುಕೊಂಡಿತು. ಜಮ್ಮು ಹಾಗೂ ಕಾಶ್ಮೀರದ ಸರಹದ್ದಿನೊಳಗೆ ಪಾಕಿಸ್ಥಾನ ಅತಿಕ್ರಮಿಸಿಕೊಂಡಿರುವ ಭಾಗವನ್ನು ತೆರವುಗೊಳಿಸುವಂತೆ ಆ ರಾಷ್ಟ್ರವನ್ನು ಆಗ್ರಹಿಸುವ ನಿರ್ಣಯವಾಗಿತ್ತು ಇದು. ಈ ವಿದ್ಯಮಾನ ನಡೆದಿರುವುದು ಪಿ.ವಿ.ಎನ್‌. ಸರಕಾರವಿದ್ದಾಗಲೇ. ಈ ನಿರ್ಣಯದ ಧ್ವನಿತಾರ್ಥ, ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಹೋರಾಟದಲ್ಲಿ ನಾವೆಲ್ಲರೂ ಕಟು ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬುದಾಗಿತ್ತು. ಸದ್ಯ ಪಾಕ್‌ ಮಿಲಿಟರಿ ಬಲವಿರುವ ಪರಮಾಣು ರಾಷ್ಟ್ರವಾಗಿ ರುವುದರಿಂದ ಇಂಥ ಕಾರ್ಯ ಇಂದು ಭಾರೀ ದುರ್ಗಮ ಸಾಹಸವೆಂದೇ ತೋರಬಹುದಾದರೂ, ಮೋದಿ ಸರಕಾರದ ಮುಂದಿನ ನಡೆ ಇದೇ ಆಗಬೇಕಾಗುತ್ತದೆ.

ಇಷ್ಟಕ್ಕೂ ಆಜಾದ್‌ ಜಮ್ಮು ಮತ್ತು ಕಾಶ್ಮೀರ ಎಂದರೇನೆಂಬ ಪ್ರಶ್ನೆ ಕೆಲವರಲ್ಲಿ ಮೂಡಿರಲೂಬಹುದು. ಪಾಕಿಸ್ಥಾನದಲ್ಲಿ ಇದನ್ನು ಅಧಿಕೃತವಾಗಿ “ಎಜೆಕೆ ಮತ್ತು ಗಿಲಿYಟ್‌ – ಬಾಲ್ತಿಸ್ತಾನ್‌’ ಎಂದು ಕರೆಯಲಾಗುತ್ತದೆ. ದಾಖಲೆಗಳಲ್ಲಿ ಇದು “1974ರ ತಾತ್ಕಾಲಿಕ ಸಂವಿಧಾನದ ರೀತ್ಯಾ ಪಾಕಿಸ್ಥಾನದಿಂದ ಆಳಲ್ಪಡುತ್ತಿರುವ ಅಖಂಡ ಕಾಶ್ಮೀರದ ಸ್ವಯಂ ಆಡಳಿತದ ಒಂದು ಅಂಗ’.

ಇದಕ್ಕೊಂದು ಏಕಸಭಾ ಶಾಸನ ಸಭೆಯಿದೆ. ಈ ಶಾಸನ ಸಭೆ ಈ ಸರಹದ್ದಿನ ಆಡಳಿತಕ್ಕಾಗಿ ಅಧ್ಯಕ್ಷ ಹಾಗೂ ಪ್ರಧಾನಿಯನ್ನು ಆಯ್ಕೆ ಮಾಡುತ್ತದೆ. ನಮ್ಮ ಸಂಸತ್ತಿನ ಎರಡೂ ಸದನಗಳಿಗೆ ಪ್ರತಿನಿಧಿಗಳನ್ನು ಚುನಾಯಿಸುವ ಜಮ್ಮು ಮತ್ತು ಕಾಶ್ಮೀರದ ಜನರಂತಲ್ಲದೆ, ಪಾಕ್‌ ಆಜಾದ್‌ ಕಾಶ್ಮೀರದಲ್ಲಿನ ಜನರಿಗೆ ರಾಷ್ಟ್ರೀಯ ಶಾಸನ ಸಭೆ ಹಾಗೂ ಸೆನೆಟ್‌ನಲ್ಲಿ ಪ್ರಾತಿನಿಧ್ಯವಿರುವುದಿಲ್ಲ. ಆದರೆ ವಾಸ್ತವವಾಗಿ, ಆಜಾದ್‌ ಕಾಶ್ಮೀರ್‌ ಇಸ್ಲಾಮಾಬಾದ್‌ ಆಡಳಿತ ವ್ಯವಸ್ಥೆಯ ಭದ್ರಮುಷ್ಟಿಯಲ್ಲಿದೆ. ಈ ಆಜಾದ್‌ ಕಾಶ್ಮೀರಿಗಳಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿದೆ. ಸುಮಾರು 45 ಲಕ್ಷ ಜನಸಂಖ್ಯೆ ಹೊಂದಿದೆಯೆಂದು ಹೇಳಲಾಗುತ್ತಿರುವ ಆಜಾದ್‌ ಕಾಶ್ಮೀರ್‌ 1970ರ ದಶಕದ ಆದಿಭಾಗದಲ್ಲಿ ಸ್ವಲ್ಪಕಾಲ ಮಾತ್ರ ಸ್ವಯಮಾಡಳಿತ ವ್ಯವಸ್ಥೆಯನ್ನು ಕಂಡಿತ್ತು.

ಕೇಂದ್ರದ ಕಾಂಗ್ರೆಸ್‌ ಮಂತ್ರಿಗಳೇ (1949ರಲ್ಲಿ ಎನ್‌. ಗೋಪಾಲಸ್ವಾಮಿ ಅಯ್ಯಂಗಾರ್‌, 1969ರಲ್ಲಿ ಕಾನೂನು ಸಚಿವರಾಗಿದ್ದ ಪನ್ನಂಪಳ್ಳಿ ಗೋವಿಂದ ಮೆನೋನ್‌) 370ನೆಯ ವಿಧಿ ತಾತ್ಕಾಲಿಕ ನೆಲೆಯದಾಗಿದ್ದು, ಮುಂದೆ ಅದನ್ನು ರದ್ದು ಪಡಿಸಬಹುದೆಂದು ಸಂಸತ್ತಿನಲ್ಲಿ ಹೇಳಿದ್ದುಂಟು. ಇಂದಿನ ಅನೇಕ ಕಾಂಗ್ರೆಸಿಗರಿಗೆ ಈ ವಿಷಯ ತಿಳಿದಿರಲಾರದು. ಗೋಪಾಲಸ್ವಾಮಿ ಅಯ್ಯಂಗಾರ್‌ ಭಾರತೀಯ ಸಂವಿಧಾನದ ಕರಡು ರಚನಾ ಸಮಿತಿಯ ಸದಸ್ಯರಾಗಿದ್ದವರು; 370ನೆಯ ವಿಧಿಯ ವಿವರಗಳನ್ನು ಬರೆದವರು ಅವರೇ. ಇಂಥ ಒಂದು ವಿಧಿಯನ್ನು ಸಂವಿಧಾನದಲ್ಲಿ ಸೇರ್ಪಡೆಗೊಳಿಸಲು ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್‌ ಅವರೇ ನಿರಾಕರಿಸಿದ್ದರಂತೆ. ಅಂದು ಅವರು ಹೇಳಿದ್ದರೆನ್ನಲಾಗಿರುವ ಮಾತು ಇದು “ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಕಾಯ್ದೆ – ಕಾನೂನುಗಳನ್ನು ಸೀಮಿತ ಅನ್ವಯಿಕೆಯ ಷರತ್ತಿನೊಂದಿಗೆ ನಿಗದಿಪಡಿಸಿದರೆ ಸಮಸ್ಯೆಗಳು ಪರಿಹಾರಗೊಳ್ಳುವ ಬದಲಿಗೆ ಅವು ಹೆಚ್ಚೇ ಆದಾವು’. ಅವರ ಮಾತು ನಿಜ. ಅಂದು ಶೇಖ್‌ ಅಬ್ದುಲ್ಲಾ ಅವರ ಮೇಲೆ ಪೂರ್ಣ ವಿಶ್ವಾಸ ಹೊಂದಿದ್ದ ಜವಾಹರಲಾಲ ನೆಹರೂ ಈ ವಿಧಿಯ ಕರಡನ್ನು ಸಿದ್ಧ ಪಡಿಸುವಂತೆ ಗೋಪಾಲಸ್ವಾಮಿ ಅಯ್ಯಂಗಾರರನ್ನು ವಿನಂತಿಸಿದ್ದರು.

ಅಯ್ಯಂಗಾರ್‌ ಅವರ ಪುತ್ರ ಜಿ. ಪಾರ್ಥಸಾರಥಿ ಮುಂದೆ ಒಬ್ಬ ರಾಜತಾಂತ್ರಿಕರಾಗಿ ಹೆಸರು ಮಾಡಿದರು; ಇಂದಿರಾ ಗಾಂಧಿಗೆ ನಿಕಟರಾದರು.

ಅಯ್ಯಂಗಾರ್‌ ಅವರು ಮದ್ರಾಸ್‌ ಪ್ರಾಂತ್ಯದ ನಾಗರಿಕ ಸೇವಾ ಅಧಿಕಾರಿಯಾಗಿದ್ದವರು; 1943ರಿಂದ 1947ರವರೆಗೆ ಆಡಳಿತ ನಡೆಸಿದ ಕಾಶ್ಮೀರದ ಮಹಾರಾಜ ಹರಿಸಿಂಗ್‌ಗೆ ದಿವಾನರಾಗಿ ಸೇವೆ ಸಲ್ಲಿಸಿದವರು.

ಕೇಂದ್ರ ಸರಕಾರ 370ನೆಯ ವಿಧಿಯನ್ನು ರದ್ದು ಪಡಿಸಿದ್ದರೆ, ಇದಕ್ಕಾಗಿ ತಮ್ಮನ್ನೇ ದೂರಿಕೊಳ್ಳಬೇಕಾದವರು ಬೇರಾರೂ ಅಲ್ಲ, ಕಾಶ್ಮೀರ ಕಣಿವೆಯ ರಾಜಕೀಯ ನಾಯಕರೇ. ಇವರಲ್ಲಿ ಹೆಚ್ಚಿನವರು ತಾವು “ಕಾಶ್ಮೀರಿಯತ್‌’ನ ಪರವಾಗಿದ್ದೇವೆಂದು, ರಾಜ್ಯಕ್ಕೆ ಸ್ವಾಯತ್ತೆ ಬೇಕೆಂದು ವಾದಿಸುತ್ತಲೇ ಪಾಕಿಸ್ತಾನದೊಂದಿಗೆ ಕಾಶ್ಮೀರದ ವಿಲಯನವಾಗಬೇಕೆಂದು ಬಯಸುತ್ತಿದ್ದವರು. ಧಾರ್ಮಿಕ ಒಲವಿನಿಂದಾಗಿ ತಾವು ಪಾಕಿಸ್ಥಾನದ ಅಂಗವಾಗಿರಬೇಕೆಂದು ಆಶಿಸುತ್ತಿದ್ದವರು. ರಾಜ್ಯದ ದೊಡ್ಡ ಪಕ್ಷಗಳಾದ ನ್ಯಾಶನಲ್‌ ಕಾನ್ಫರೆನ್ಸ್‌ ಹಾಗೂ ಪೀಪಲ್ಸ್‌ ಡೆಮಾಕ್ರಟಿಕ್‌ಗಳೆರಡೂ ಪಾಕ್‌ ಪರ “ನಿಗೂಢ ಉದ್ದೇಶ’ ಹೊಂದಿರುವ ಪಕ್ಷಗಳೆಂದೇ ಹೆಸರು ಪಡೆದಿವೆ. ಈ ಹಿಂದೆ ವಿಶ್ವಸಂಸ್ಥೆಯ ನಿರ್ದೇಶದನುಸಾರ ಜನಾಭಿಪ್ರಾಯ ಸಂಗ್ರಹದ ಮೂಲಕ ರಾಜ್ಯದ ಭವಿಷ್ಯ ರೂಪಿಸಬೇಕೆಂದು ಬಯಸಿದ್ದ ಪಕ್ಷವಾದ “ಫ್ಲೆಬಿಸೈಟ್‌ ಫ್ರಂಟ್‌’ನಿಂದ ಬೇರ್ಪಟ್ಟು ರೂಪುಗೊಂಡ ಪಕ್ಷವೇ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ.

ಪಾಕಿಸ್ಥಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶವನ್ನು ತೆರವುಗೊಳಿಸಿದ ಬಳಿಕವಷ್ಟೇ ಇಂಥ ಜನಾಭಿಪ್ರಾಯ ಸಂಗ್ರಹ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದೆಂದು ಭಾರತ ಸರಕಾರ ಸ್ಪಷ್ಟವಾಗಿಯೇ ಹೇಳಿತ್ತು. ಭಾರತದ ಈ ನಿಲುವು ಸರಿಯಾಗಿಯೇ ಇತ್ತು. ಒಂದು ವೇಳೆ ಇಂಥ ಜನಾಭಿಪ್ರಾಯ ಸಂಗ್ರಹಕಾರ್ಯ ನಡೆದಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಹುಸಂಖ್ಯೆಯಲ್ಲಿರುವ ಮುಸ್ಲಿಮರು ನಿಶ್ಚಿತವಾಗಿಯೂ ಪಾಕಿಸ್ಥಾನದೊಂದಿಗಿನ ಸೇರ್ಪಡೆ ಪ್ರಸ್ತಾವವನ್ನೇ ಎತ್ತಿ ಹಿಡಿಯುತ್ತಿದ್ದರು.

“ದಕ್ಷಿಣ ಕಾಶ್ಮೀರದಲ್ಲಿನ ಪ್ರತಿ ಮನೆಯೂ ಭಯೋತ್ಪಾದಕರ ಅಥವಾ ಭಯೋತ್ಪಾದಕರ ಬಗ್ಗೆ ಸಹಾನುಕಂಪವಿರುವವರ ತಾಣವಾಗಿದೆ’ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಕೆಲ ತಿಂಗಳ ಹಿಂದೆ ಹೇಳಿಲ್ಲವೆ? ಅವರು ಸರಿಯಾಗಿಯೇ ಹೇಳಿದ್ದರು; ಈ ಹೇಳಿಕೆ ನೀಡಿದ್ದಕ್ಕಾಗಿ ಜಾತ್ಯತೀತ ನಿಲುವಿನ ವ್ಯಕ್ತಿಗಳಿಂದ ಟೀಕೆಗೊಳಗಾದರು.

ಕಾಶ್ಮೀರದ ವಿಷಯದಲ್ಲಿ ನರೇಂದ್ರ ಮೋದಿ ಸರಕಾರ ಸರಿಯಾಗಿಯೇ ನಡೆದುಕೊಂಡಿದೆ. ಪ್ರತ್ಯೇಕತಾವಾದಿಗಳೊಂದಿಗೆ ನಿಷ#ಲ ಮಾತುಕತೆ ನಡೆಸುವ ಮೂಲಕ ರಾಷ್ಟ್ರವು ಹಲವಾರು ವರ್ಷಗಳಷ್ಟು ಸಮಯವನ್ನು ವ್ಯರ್ಥಗೊಳಿಸಿದೆ; ಈ ಮೂಲಕ ಭಯೋತ್ಪಾದಕರಿಗೆ ಅಥವಾ ಪಾಕಿಸ್ಥಾನಿ ಸೇನೆಗೆ ಸಾವಿರಾರು ಜನರನ್ನು ಬಲಿಗೊಟ್ಟಿದೆ.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.