18ಕ್ಕೆ 7 ವಿಕೆಟ್: ಟಿ20 ವಿಶ್ವದಾಖಲೆ: ಇಂಗ್ಲಿಷ್ ಕೌಂಟಿಯಲ್ಲಿ ಅಕರ್ಮನ್ ಪರಾಕ್ರಮ
Team Udayavani, Aug 9, 2019, 9:33 AM IST
ಲಂಡನ್: ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕಾಲಿನ್ ಅಕರ್ಮನ್ ಟಿ20 ಕ್ರಿಕೆಟ್‌ನಲ್ಲಿ 7 ವಿಕೆಟ್ ಉಡಾಯಿಸಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಬುಧವಾರ ಗ್ರೇಸ್ ರೋಡ್‌ನಲ್ಲಿ ನಡೆದ ಪಂದ್ಯದ ವೇಳೆ ಅವರು ಈ ಸಾಧನೆಗೈದರು.
ಲೀಸೆಸ್ಟರ್‌ಶೈರ್ ಕೌಂಟಿ ನಾಯಕನೂ ಆಗಿರುವ 28ರ ಹರೆಯದ ಅಕರ್ಮನ್, ವಾರ್ವಿಕ್‌ಶೈರ್ ವಿರುದ್ಧದ ಪಂದ್ಯದಲ್ಲಿ 18 ರನ್ನಿತ್ತು 7 ವಿಕೆಟ್ ಉಡಾಯಿಸಿದರು. ಇದು ಟಿ20 ಪಂದ್ಯದಲ್ಲಿ ದಾಖಲಾದ ಅತ್ಯುತ್ತಮ ಬೌಲಿಂಗ್
ಸಾಧನೆಯಾಗಿದೆ. ಹಿಂದಿನ ದಾಖಲೆ ಮಲೇಶ್ಯದ ಅರುಲ್ ಸುಪಯ್ಯ ಹೆಸರಲ್ಲಿತ್ತು. ಸಾಮರ್ಸೆಟ್ ಪರ ಆಡುತ್ತಿದ್ದ ಅವರು 2011ರ ಗ್ಲಾಮರ್ಗನ್ ಎದುರಿನ ಪಂದ್ಯದಲ್ಲಿ 5 ರನ್ನಿತ್ತು 6 ವಿಕೆಟ್ ಉಡಾಯಿಸಿದ್ದರು.
ಅಕರ್ಮನ್ ಪರಾಕ್ರಮದಿಂದ 190 ರನ್ ಬೆನ್ನಟ್ಟಿ ಹೋಗಿದ್ದ ವಾರ್ವಿಕ್‌ಶೈರ್ 134 ರನ್ನಿಗೆ ಕುಸಿಯಿತು. “ಮೊದಲು ನನಗಿದನ್ನು ನಂಬಲಿಕ್ಕಾಗಲಿಲ್ಲ. 7 ವಿಕೆಟ್ ಸಾಧನೆ ವಿಶ್ವದಾಖಲೆ ಎಂದು ತಿಳಿದಿರಲಿಲ್ಲ. ಆದರೀಗ ಈ ಪಂದ್ಯ ಬಹಳ ದಿನಗಳ ಕಾಲ ನನ್ನ ನೆನಪಿನಲ್ಲಿ ಉಳಿಯಲಿದೆ. ಗ್ರೇಸ್‌ರೋಡ್ ಟ್ರ್ಯಾಕ್ ಯಾವತ್ತೂ ಸ್ಪಿನ್ನಿಗೆ ಇಷ್ಟೊಂದು ನೆರವು ನೀಡಿರಲಿಲ್ಲ’ ಎಂದು ಅಕರ್ಮನ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.