ಜಲಗಂಡಾಂತರ
Team Udayavani, Aug 9, 2019, 12:23 PM IST
ಹಾವೇರಿ; ಕರ್ಜಗಿ ಬಳಿ ಹೊಲಗಳಿಗೆ ವರದಾ ನದಿ ನೀರು ನುಗ್ಗಿದೆ.
ಹಾವೇರಿ: ಅತ್ತ ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯತ್ತಿರುವುದರಿಂದ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ತುಂಬಿ ಹರಿದು ಜಿಲ್ಲೆಯ 10,000 ಎಕರೆಗೂ ಹೆಚ್ಚು ಹೊಲಗಳಿಗೆ ನೀರು ನುಗಿದೆ. ಹೀಗಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನೀರು ಪಾಲಾಗಿದ್ದು, ರೈತರು ಕಣ್ಣೀರು ಸುರಿಸುವಂತಾಗಿದೆ.
ವರದೆಯ ಪ್ರವಾಹಕ್ಕೆ ಜಿಲ್ಲೆಯ ಹಾನಗಲ್ಲ, ಹಾವೇರಿ, ಸವಣೂರು ತಾಲೂಕುಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಜಲಾವೃತಗೊಂಡಿದ್ದು ರೈತರು ಚಿಂತಾಕ್ರಾಂತರಾಗಿದ್ದಾರೆ. ಮೆಕ್ಕೆಜೋಳ, ಹತ್ತಿ, ಮೆಣಸು, ಸೂರ್ಯಕಾಂತಿ, ಶೇಂಗಾ, ಕಬ್ಬು, ಸವತೆ, ಬೆಂಡಿ ಬೆಳೆಗಳು ನೀರಲ್ಲಿ ಮುಳುಗಿದ್ದು, ಅಂದಾಜು ಶೇ.50 ಬೆಳೆ ಹಾನಿಯಾಗಿದೆ. ನೀರು ಇದೇ ರೀತಿ ಮೂರ್‍ನಾಲ್ಕು ದಿನ ನಿಂತರೆ ಬೆಳೆ ಸಂಪೂರ್ಣ ಹಾನಿಯಾಗುವ ಆತಂಕ ನಿರ್ಮಾಣವಾಗಿದೆ. ಬೆಳೆ ಹಾನಿ ಮಾತ್ರ ಅಪಾರ ಪ್ರಮಾಣದಲ್ಲಾಗಿದ್ದು, ಇಷ್ಟು ದಿನ ನೀರಿಲ್ಲದೇ ಕಂಗಾಲಾಗಿದ್ದ ಜಿಲ್ಲೆಯ ರೈತರು ಈಗ ನೆರೆಯಿಂದ ಬೆಳೆ ನಷ್ಟದ ಕಷ್ಟಕ್ಕೆ ಸಿಲುಕಿದ್ದಾರೆ.
ಜಮೀನು ಆವರಿಸಿದ ನೀರು:
ವರದಾ ನದಿ ತುಂಬಿ ಹರಿಯುತ್ತಿರುವುದರಿಂದ ಹಾವೇರಿ ತಾಲೂಕಿನಲ್ಲಿ ಕೋಣನತಂಬಗಿ, ಕೆಸರಳ್ಳಿ, ಮಣ್ಣೂರು, ಚೆನ್ನೂರು, ಕಿತ್ತೂರ, ಮರಡೂರು, ಅಕ್ಕೂರ, ಹಾಲಗಿ, ಮರೋಳ, ನದಿನೀರಲಗಿ, ಕೊಡಬಾಳ, ಹಿರೆಮಗದೂರ, ಕಲಕೋಟಿ, ಸವಣೂರು ತಾಲೂಕಿನ ಹಲಸೂರ, ಮನ್ನಂಗಿ, ಚಿಕ್ಕಮರಳಿಹಳ್ಳಿ, ಮಂಟಗಣಿ, ತೊಂಡೂರ, ಡೊಂಬರಮತ್ತೂರ, ಮೆಳ್ಳಾಗಟ್ಟಿ ಹಾಗೂ ಹಾನಗಲ್ಲ ತಾಲೂಕಿನ ಮಲಗುಂದ, ಕೂಡಲ ಗ್ರಾಮಗಳಲ್ಲಿ ನದಿ ನೀರು ಕೃಷಿ ಜಮೀನುಗಳನ್ನು ಆವರಿಸಿದೆ.
ಮಳೆ ಜತೆ ಡ್ಯಾಂ ನೀರು: ಮಳೆ ನೀರಿನ ಜತೆಗೆ ಜಲಾಶಯಗಳ ನೀರು ಸಹ ಸೇರಿ ಹೆಚ್ಚಿನ ಪ್ರವಾಹ ಸೃಷ್ಟಿಯಾಗಿದೆ. ಭದ್ರಾ ಹಾಗೂ ತುಂಗಾ ಜಲಾಶಯದಿಂದಲೂ ನೀರು ಬಿಟ್ಟಿರುವುದರಿಂದ ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ಎತ್ತರ ಹೆಚ್ಚಿದ್ದು, ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ.
ತುಂಗಭದ್ರಾ ನದಿಯ ಪ್ರವಾಹದಿಂದ ಹಾವೇರಿ ತಾಲೂಕಿನ ಗುಯಲಗುಂದಿ, ಕಂಚಾರಗಟ್ಟಿ, ಗಳಗನಾಥ, ಹಾವಂಶ, ಶಾಖಾರ, ಹಾವನೂರು, ಹುರಳಿಹಾಳ, ಹರಳಹಳ್ಳಿ, ರಾಣಿಬೆನ್ನೂರು ತಾಲೂಕಿನ ಚೌಡಯ್ಯದಾನಪುರ, ಹರನಗೇರಿ, ಚಿಕ್ಕಕುರವತ್ತಿ, ಹಳೇಚಂದಾಪುರ ಗ್ರಾಮಗಳು ನೀರು ನುಗ್ಗುವ ಆತಂಕದಲ್ಲಿವೆ. ಕುಮುದ್ವತಿ ನದಿ ನೀರು ಕುಪ್ಪೆಲೂರು, ಮುಷ್ಟೂರ ಗ್ರಾಮಗಳಿಗೆ ನುಗ್ಗಿದೆ.
ಶಿಗ್ಗಾವಿ ಏತ ನೀರಾವರಿ ಯೋಜನೆಗಾಗಿ ವರದಾ-ಧರ್ಮಾ ನದಿ ಸೇರುವ ಪ್ರದೇಶದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಗೇಟ್ ಎರಡ್ಮೂರು ದಿನ ತೆರೆಯದೇ ಇರುವುದರಿಂದ ಉಂಟಾದ ಹಿನ್ನೀರಿನಿಂದ ನೂರಾರು ಎಕರೆ ಪ್ರದೇಶದ ಬೆಳೆಗಳು ಜಲಾವೃತಗೊಂಡು ಅಪಾರ ಹಾನಿಯಾಗಿದೆ.
ಸಮೀಕ್ಷೆಗೆ ಡ್ರೋಣ ಬಳಿಸಿ:
ತೋಟಗಾರಿಕೆ ಹಾಗೂ ಕೃಷಿ ಜಮೀನಿನಲ್ಲಿ ಮಳೆ ಅಥವಾ ಪ್ರವಾಹದ ನೀರು ನುಗ್ಗಿ ಬೆಲೆ ಹಾನಿ ಕುರಿತಂತೆ ಸಮೀಕ್ಷೆ ನಡೆಸಲು ಕೃಷಿ, ತೋಟಗಾರಿಕೆ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸರ್ವೇಯರ್ ತಂಡಗಳನ್ನು ರಚಿಸಿ ಪ್ರತಿ ಗ್ರಾಮದ ಪ್ಲಾಟ್‌ಗಳ ಛಾಯಾಚಿತ್ರ ಸಂಗ್ರಹಿಸಬೇಕು. ಸಾಧ್ಯವಾದರೆ ಡ್ರೋಣ ಕ್ಯಾಮೆರಾ ಬಳಸಿ ಏರಿಯಲ್ ಸರ್ವೇ ಮೂಲಕ ಬೆಳೆಹಾನಿ ವಿಡಿಯೋ ಚಿತ್ರೀಕರಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಹೆದ್ದಾರಿ ಸಂಚಾರ ವ್ಯತ್ಯಯ:
ಮಠ ಸಂಪೂರ್ಣ ಜಲಾವೃತಗೊಂಡಿದ್ದರಿಂದ ರಾಯರ ವಾರ ಎನಿಸಿದ ಗುರುವಾರ ಭಕ್ತರು ಪೂಜೆ ಸಲ್ಲಿಸಲಾಗದೆ ಮರಳಿದರು. ನೆರೆ ಹಿನ್ನೆಲೆಯಲ್ಲಿ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗಿದೆ. 1991ರಲ್ಲಿ ಇದೇ ರೀತಿ ಪ್ರವಾಹ ಬಂದಿತ್ತು. 27 ವರ್ಷಗಳ ಬಳಿಕ ಈ ಸಲ ಮಠ ಜಲಾವೃತಗೊಂಡಿದ್ದು, ನದಿ ನೀರು ಇಳಿದ ಮೇಲೆ ಪೂಜೆ ನೆರವೇರಿಸಲಾಗುವುದು ಎಂದು ಮಠದ ಗೋಪಾಲಾಚಾರ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುಳುಗಿದ ಐಕ್ಯ ಮಂಟಪ: ತಾಲೂಕಿನ ಚೌಡಯ್ಯದಾನಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಸಹ ತುಂಗಭದ್ರಾ ನದಿ ಪ್ರವಾಹದಲ್ಲಿ ಮುಳುಗಿದೆ. ಈ ಮಂಟಪ ನದಿಯಲ್ಲಿಯೇ ಇದ್ದು ತುಂಗಭದ್ರಾ ನದಿ ತುಂಬಿದಾಗಲೊಮ್ಮೆ ಮಂಟಪ ಮುಳುವುದು ಸಾಮಾನ್ಯವಾಗಿದೆ.
ತುಂಗಭದ್ರಾ ಮತ್ತು ವರದಾ ನದಿ ಸಂಗಮ ಪ್ರದೇಶದಲ್ಲಿರುವ ಗಳಗನಾಥ ದೇವಸ್ಥಾನದ ಬಳಿ ಸಹ ದೊಡ್ಡ ಪ್ರಮಾಣದ ನೀರು ಬಂದಿದ್ದು, ದೇವಸ್ಥಾನದಲ್ಲಿ ನೀರು ಸೋರುತ್ತಿದೆ. ಇದರಿಂದ ಒಳಗೆ ಪ್ರವೇಶಿಸಲು ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.