ಉಪ್ಪಿನಂಗಡಿ: ನೇತ್ರಾವತಿ-ಕುಮಾರಧಾರಾ ಸಂಗಮ
Team Udayavani, Aug 10, 2019, 12:49 PM IST
ಉಪ್ಪಿನಂಗಡಿ:ನೇತ್ರಾವತಿ- ಕುಮಾರಧಾರಾ ನದಿಗಳು ಉಕ್ಕೇರಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶ ಗಳು ಜಲಾವೃತಗೊಂಡಿವೆ. ನೇತ್ರಾವತಿ ನದಿಯು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿಕೊಂಡು ಮುಂದಕ್ಕೆ ಹೋದರೆ, ದೇವಾಲಯದ ಇನ್ನೊಂದು ಪಾರ್ಶ್ವದಿಂದ ಹರಿದು ಬರುವ ಕುಮಾರಧಾರಾ ನದಿ ನೀರು ಮಾತ್ರ ಈ ಕಡೆ ಬಂದು ನೇತ್ರಾವತಿ ನದಿ ನೀರನ್ನು ಸಂಜೆಯವರೆಗೆ ಕೂಡಿಕೊಳ್ಳಲಿಲ್ಲ.
ಸಂಜೆಯ ಅನಂತರ ನೇತ್ರಾವತಿ -ಕುಮಾರಧಾರ ನದಿಗಳ ಉಭಯ ಸಂಗಮವಾಯಿತು.
ತಗ್ಗಿದ್ದ ಉಭಯ ನದಿಗಳ ನೀರು ಗುರುವಾರ ರಾತ್ರಿಯಾಗುತ್ತಲೇ ಮತ್ತೆ ಏರಿಕೆಯಾಗತೊಡಗಿತು. ಬೆಳಗ್ಗೆ ಮತ್ತಷ್ಟು ನೀರಿನ ಪ್ರಮಾಣ ಏರಿಕೆ ಯಾಗಿದ್ದು, ನೇತ್ರಾವತಿ ನದಿ ನೀರು ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಆವರಣವನ್ನು ಪ್ರವೇಶಿಸಿತು. ನೇತ್ರಾವತಿ ನದಿ ನೀರಿನಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದು, ರಭಸದಿಂದ ಕೂಡಿತ್ತು. ಕುಮಾರಧಾರಾ ನದಿಯಲ್ಲಿ ನೀರಿನ ಪ್ರಮಾಣ ನಿನ್ನೆಗಿಂತ ಕಡಿಮೆಯಾಗಿತ್ತು. ಆದ್ದರಿಂದ ಕುಮಾರಧಾರ ನದಿಯ ನೀರಿಗೆ ಮಧ್ಯಾಹ್ನದ ತನಕ ದೇವಾಲಯದ ಮುಂಭಾಗಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ನೇತ್ರಾವತಿ ನದಿ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಹೋಗಿ ಶ್ರೀ ಮಹಾಕಾಳಿ ದೇವಾಲಯದ ಒಳಗೆ ಪ್ರವೇಶಿಸಿದ ನೀರು ಬಳಿಕವೂ ಏರಿಕೆಯಾಗಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿ ಅಲ್ಲೇ ಇರುವ ನೇತ್ರಾವತಿ ಸಮುದಾಯ ಭವನದ ಸನಿಹವನ್ನು ತಲುಪಿತ್ತು. ನೆರೆ ನೀರಿನಿಂದಾಗಿ ಶ್ರೀ ಮಹಾಕಾಳಿ ದೇವಾಲಯ, ನಾಗನ ಕಟ್ಟೆ, ದೈವದ ಕಟ್ಟೆ, ದೇವಾಲಯದ ಮುಂಭಾಗವೆಲ್ಲ ಜಲಾವೃತಗೊಂಡಿತ್ತು. ದೇವಾಲಯದ ಆವರಣದಲ್ಲಿ ಮೊಣಕಾಲಿಗಿಂತಲೂ ಜಾಸ್ತಿ ನೀರಿತ್ತು.
ಕೊನೆಗೂ ಸಂಗಮವಾಯ್ತು
ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳು ನದಿಯ ಒಳಹರಿನ ಮೂಲಕ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಸಂಗಮ ವಾಗುವುದು ಮಾಮೂಲಿಯಾದರೆ, ಮಳೆಗಾಲದಲ್ಲಿ ದೇವಾಲಯದ ಎಡಭಾಗದಿಂದ ನೇತ್ರಾವತಿ ನದಿ, ಬಲಭಾಗದಿಂದ ಕುಮಾರಧಾರಾ ನದಿ ಉಕ್ಕೇರಿ ಬಂದು ಸಹಸ್ರಲಿಂಗೇಶ್ವರ ದೇವಾಲಯದ ಪ್ರವೇಶ ದ್ವಾರದವರೆಗೆ ಬಂದರೆ ಸಂಗಮವಾಯಿತೆಂದು ಲೆಕ್ಕ. ಆದರೆ ಶುಕ್ರವಾರ ಮಧ್ಯಾಹ್ನದವರೆಗೆ ನೇತ್ರಾವತಿ ನದಿ ನೀರು ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿ ಮುಂದಕ್ಕೆ ಸಾಗಿತ್ತು. ಆದರೂ ಅದು ಕುಮಾರಧಾರಾ ನದಿಯನ್ನು ಸೇರದೆ ಅಲ್ಲಿಯೇ ತಿರುವು ಪಡೆದುಕೊಂಡು ರಸ್ತೆಯ ಮೂಲಕ ಹೋಗಿ ನಾಜೂಕು ಸೆಲೂನ್ ತನಕ ತಲುಪಿತ್ತು. ಇನ್ನೊಂದೆಡೆ ಕುಮಾರಧಾರಾ ನದಿಯ ನೀರು ಮತ್ತೂಂದು ದಿಕ್ಕಿನಿಂದ ದೇವಾಲಯದ ಆವರಣವನ್ನು ಪ್ರವೇಶಿಸಲೇ ಇಲ್ಲ. ಸಂಗಮವಾಗುವ ಕ್ಷಣವನ್ನು ಎದುರು ನೋಡುತ್ತಿದ್ದ ನೂರಾರು ಜನರು ನಿರಾಶರಾದರು. ಸಂಜೆಯಾದೊಡನೆ ಸಂಗಮವಾಯಿತು. ನೆರೆ ಭೀತಿಯ ಹಿನ್ನೆಲೆಯಲ್ಲಿ ಶುಕ್ರವಾರ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದೊಂದಿಗೆ ಅಗ್ನಿಶಾಮಕ ದಳದವರು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಅಡ್ಡವಾದ ಅಭಿವೃದ್ಧಿ ಕಾಮಗಾರಿ!
ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ರಭಸವಾಗಿದ್ದು ಈ ಬಾರಿ ಸಂಗಮವಾಗದಿರಲು ಒಂದು ಕಾರಣ ವಾದರೆ, ದೇವಾಲಯದ ಬಳಿ ನಡೆದ ಹಲವು ಅಭಿವೃದ್ಧಿ ಕಾಮಗಾರಿಗಳು ಇನ್ನೊಂದು ಪ್ರಮುಖ ಕಾರಣವಾಗಿವೆ. ಕುಮಾರಧಾರಾ ನದಿ ನೀರು ದೇವಸ್ಥಾನ ಪ್ರವೇಶಿಸುವ ಕಡೆಯ ಪ್ರದೇಶ ಈಗ ಮೊದಲಿನಂತಿರದೆ, ಹಲವು ಅಭಿವೃದ್ಧಿ ಕಾಮಗಾರಿ, ಕಟ್ಟಡ ನಿರ್ಮಾಣ ಮತ್ತು ತಡೆಗೋಡೆ ನಿರ್ಮಾಣವಾಗಿರುವುದರಿಂದಾಗಿ ನೀರು ಸರಾಗವಾಗಿ ಮುನ್ನುಗ್ಗಿ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಾಗಿ ಬಲ ಬದಿಯಿಂದ ಕುಮಾರಧಾರಾ ನದಿ ನೀರು ದೇವಾಲಯದ ಆವರಣದೊಳಗೆ ಬಂದಿಲ್ಲ. ಕುಮಾರಧಾರಾ ನದಿ ಬದಿಯ ಪ್ರದೇಶ ದೇವಾಲಯದ ಆವರಣದಿಂದ ಈಗ ಎತ್ತರಿಸಲ್ಪಟ್ಟಿರುವುದರಿಂದ ದೇವಾಲಯದ ಆವರಣದಲ್ಲಿದ್ದ ನೇತ್ರಾವತಿ ನದಿ ನೀರು ಕೂಡಾ ದೇವಾಲಯದ ಬಲ ಬದಿಗೆ ಹೋಗಿ ಕುಮಾರಧಾರಾ ನದಿಯನ್ನು ಸೇರಿಕೊಳ್ಳಲಾಗದೇ, ತಿರುವು ಪಡೆದು ರಸ್ತೆಯತ್ತ ಸಾಗುವಂತಾಯಿತು. ಆದರೂ ಉಭಯ ನದಿಗಳ ಸಂಗಮವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.