“ಹುದುಗಿರುವ ವ್ಯಕ್ತಿಗೆ ಧ್ವನಿ ನೀಡುವುದು’
ಲಿಂಗತ್ವ ಅಲ್ಪಸಂಖ್ಯಾಕರಿಗೆ ಧ್ವನಿಭಾಷಿಕ ಚಿಕಿತ್ಸೆಯ ಪಾತ್ರ
Team Udayavani, Aug 11, 2019, 5:00 AM IST
ಮನುಷ್ಯರಿಗಷ್ಟೇ ವಿಶಿಷ್ಟವಾದ ಭಾಷಿಕ ಸಂವಹನದ ಮಾಧ್ಯಮ ಧ್ವನಿ. ನಮ್ಮ ಧ್ವನಿಯು ನಮ್ಮ ಬದುಕಿನಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ. ಆದರೆ ಅದರ ಮಹತ್ವವನ್ನು ನಾವು ತಿಳಿದುಕೊಳ್ಳಲು ವಿಫಲರಾಗುತ್ತೇವೆ. ನಮ್ಮ ಧ್ವನಿಯು ಬಹಳ ಸಂಕೀರ್ಣವಾದ ಆದರೆ ಅಷ್ಟೇ ಸುಂದರವಾದ ಸಾಧನ; ಅದು ನಮ್ಮ ಭಾವನೆಗಳ ಸ್ಥಿತಿಗತಿ ಮತ್ತು ಸೌಖ್ಯಗಳನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಕೆಲಸ ಮಾಡುತ್ತದೆ. ವ್ಯಕ್ತಿಯೊಬ್ಬನ ಧ್ವನಿಯು ಆತನ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನಗಳನ್ನು ಪ್ರತಿಬಿಂಬಿಸುತ್ತದೆಯಲ್ಲದೆ, ಸಾಮಾಜಿಕ ಸ್ವೀಕೃತಿಗೆ ಮೂಲವಾಗಿಯೂ ಕೆಲಸ ಮಾಡುತ್ತದೆ.
ಜನ್ಮಜಾತ ಲಿಂಗಕ್ಕಿಂತ ಭಿನ್ನವಾದ ಲಿಂಗತ್ವ ಅಭಿವ್ಯಕ್ತಿ ಅಥವಾ ಗುರುತಿಸಿಕೊಳ್ಳುವಿಕೆಯನ್ನು ಹೊಂದಿರುವ ವ್ಯಕ್ತಿಗಳನ್ನು ಲಿಂಗತ್ವ ಅಲ್ಪಸಂಖ್ಯಾಕರು ಎಂಬುದಾಗಿ ಗುರುತಿಸಲಾಗುತ್ತದೆ. ಈ ಸಮುದಾಯವು ಸಮಾಜದಿಂದ ಗಮನಾರ್ಹ ಪ್ರಮಾಣದ ತಾರತಮ್ಯವನ್ನು ಅನುಭವಿಸುತ್ತದೆ. ದೇಹಕ್ಕೆ ಸಂಬಂಧಿಸಿದ, ಮನಃಶಾಸ್ತ್ರೀಯವಾದ (ಖನ್ನತೆ, ಆತ್ಮವಿಶ್ವಾಸದ ಕೊರತೆ, ಆತಂಕ), ಸಾಮಾಜಿಕವಾದ (ಸಮಾನ ಅವಕಾಶಗಳ ಕೊರತೆ, ಭೇದ), ಕಾನೂನು ಸಂಬಂಧಿ (ಸಮಾನ ಹಕ್ಕುಗಳ ಕೊರತೆ) ಮತ್ತು ಸಾಂಸ್ಕೃತಿಕವಾದ (ಮೂಢನಂಬಿಕೆಗಳು, ನಿಕೃಷ್ಟ ಭಾವನೆ) ಹಲವು ಸವಾಲುಗಳನ್ನು ಅವರು ಎದುರಿಸಬೇಕಾಗಿರುತ್ತದೆ. ಈ ವಿಚಾರಗಳು ಜೀವನ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ. ಜನ್ಮತಃ ಬಂದಿರುವ ಲಿಂಗಕ್ಕೂ ಮತ್ತು ಆ ಬಳಿಕದ ಲಿಂಗೀಯ ಗುರುತಿಸಿಕೊಳ್ಳುವಿಕೆಗೂ ಇರುವ ವ್ಯತ್ಯಾಸವು ಅಪಾರವಾದ ಒತ್ತಡವನ್ನು ಉಂಟು ಮಾಡುತ್ತದೆ. ಲಿಂಗತ್ವ ಅಲ್ಪಸಂಖ್ಯಾಕರಲ್ಲಿ ಎರಡು ಪ್ರಧಾನವಾದ ವರ್ಗಗಳೆಂದರೆ ಹೆಣ್ಣಿನಿಂದ ಗಂಡು ಮತ್ತು ಗಂಡಿನಿಂದ ಹೆಣ್ಣು.
ಈ ವ್ಯತ್ಯಾಸಗಳ ನಡುವೆ ಸೇತುಬಂಧ ಸಾಧಿಸುವುದಕ್ಕಾಗಿ ಇಂತಹ ವ್ಯಕ್ತಿಗಳು ಹಲವು ಸಾಮಾಜಿಕ ಮತ್ತು ವೈದ್ಯಕೀಯ ಪರಿವರ್ತನೆಗಳಿಗೆ ಒಳಪಡುತ್ತಾರೆ. ಬದಲಾವಣೆಗೆ ಒಳಪಡಬೇಕಾದ ಅಂತಹ ಒಂದು ಕ್ಷೇತ್ರವೆಂದರೆ, ಅವರ ಧ್ವನಿಯನ್ನು ಅವರ ಬದಲಾದ ಲಿಂಗತ್ವ ಗುರುತಿಗೆ ಸರಿಹೊಂದಿಸುವುದು.
ಲಿಂಗತ್ವ ಅಲ್ಪಸಂಖ್ಯಾಕರಿಗೆ ತಮ್ಮ ಪುರುಷ ಧ್ವನಿಯನ್ನು ಸ್ತ್ರೀ ಧ್ವನಿಯಾಗಿ ಅಥವಾ ಸ್ತ್ರೀ ಧ್ವನಿಯನ್ನು ಪುರುಷ ಧ್ವನಿಯಾಗಿ ಮಾರ್ಪಡಿಸಲು ಸಹಾಯ ಬೇಕಾಗಿರುತ್ತದೆ. ಧ್ವನಿ/ ಭಾಷಿಕ ಚಿಕಿತ್ಸೆಯು ಧ್ವನಿ ಮತ್ತು ಭಾಷೆಯನ್ನು ಪುರುಷ/ ಸ್ತ್ರೀಯನ್ನಾಗಿ ಮಾರ್ಪಡಿಸಲು ಮತ್ತು ಭಾಷೇತರ ಸಂವಹನದಲ್ಲಿ ಸಹಾಯ ಮಾಡುತ್ತದೆ. ಧ್ವನಿ ಸ್ತ್ರೀಕರಣ ಚಿಕಿತ್ಸೆಯು ಪುರುಷನದರಂತೆ ಇರುವ ಧ್ವನಿಯನ್ನು ಸ್ತ್ರೀಯದರಂತೆ ಮಾರ್ಪಡಿಸುವ ಗುರಿ ಹೊಂದಿರುತ್ತದೆ. ಇದೇವೇಳೆ ಧ್ವನಿ ಪುರುಷೀಕರಣವು ಸ್ತ್ರೀ ಧ್ವನಿಯನ್ನು ಪುರುಷನದರಂತೆ ಮಾಡುವ ಗುರಿ ಹೊಂದಿರುತ್ತದೆ.
-ಡಾ| ದನುಶ್ರೀ ಆರ್. ಗುಂಜಾವಠೆ
ಆಡಿಯಾಲಜಿ ಮತ್ತು
ಸ್ಪೀಚ್ ಥೆರಪಿ ಪೆಥಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು
ಮುಂದುವರಿಯುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.