ಸಮಾಜಮುಖೀ ಚಟುವಟಿಕೆಯ ಒಲವಿರಲಿ: ವಿದ್ಯಾರ್ಥಿಗಳಿಗೆಡಾ| ಎಡಪಡಿತ್ತಾಯ
Team Udayavani, Aug 11, 2019, 5:05 AM IST
ಮಂಗಳೂರು: ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜತೆಗೆ ಸಮಾಜಮುಖೀ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ| ಪಿ.ಎಸ್. ಎಡಪಡಿತ್ತಾಯ ಹೇಳಿದರು.
ಅವರು ಶನಿವಾರ ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ಸ್ವಾಮಿ ವಿವೇಕಾನಂದರ ಶಿಕಾಗೊ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ನಡೆದ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮೊಳಗಿರುವ ಶಕ್ತಿಯನ್ನು ಕಂಡುಕೊಳ್ಳಲು ಅಧ್ಯಾತ್ಮದ ಸಹಾಯ ಪಡೆದು ಕೊಳ್ಳಬೇಕು. ಅಧ್ಯಾತ್ಮದ ಮುಖಾಂತರ ಒಳ್ಳೆಯನಡವಳಿಕೆಯೊಂದಿಗೆ ಸಮಾಜಮುಖೀ ಚಟುವಟಿಕೆ ಗಳಲ್ಲಿ ಭಾಗಿಯಾಗಬೇಕು ಎಂದರು.
ಏಕಾಗ್ರತೆ ಕೀಲಿಕೈ
ಮುಖ್ಯ ಅತಿಥಿಯಾಗಿದ್ದ ಬೇಲೂರು ಮಠದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸತ್ಯೇಶಾನಂದಜಿ ಮಹಾರಾಜ್ ಮಾತನಾಡಿ, ಆತ್ಮ ವಿಶ್ವಾಸ ಹಾಗೂ ಸ್ವಾವಲಂಬನೆಯ ಪ್ರತೀಕವಾಗಿ ಸ್ವಾಮಿ ವಿವೇಕಾನಂದರ ಜೀವನ ಎಲ್ಲರಿಗೂ ಮಾದರಿ. ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಸಂತೋಷವನ್ನು ಕಾಣಬೇಕಾದರೆ ಮೊದಲು ಏಕಾಗ್ರತೆ ಬೇಕು. ಅದುವೆ ಜ್ಞಾನಭಂಡಾರದ ಕೀಲಿಕೈ ಎಂದು ಹೇಳಿದರು.
ದಾವಣಗೆರೆ ರಾಮಕೃಷ್ಣ ಮಠದ ಕಾರ್ಯ
ದರ್ಶಿ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಮಾನಸ ತರಬೇತಿ ಮತ್ತು ಅಭಿವೃದ್ಧಿ ಕೇಂದ್ರ ಬೆಂಗಳೂರು ಇದರ ನಿರ್ದೇಶಕ ಪ್ರೊ| ಕೆ. ರಘೋತ್ತಮ ರಾವ್, ಕಾರ್ಪೊರೇಟ್ ತರಬೇತುದಾರ ಪ್ರೊ| ವಿಜಯ್ ಮೆನನ್ ಹಾಗೂ ಯೂತ್ ಫಾರ್ ಸೇವ ಬೆಂಗಳೂರಿನ ರಾಷ್ಟ್ರೀಯ ಸಂಘಟಕಿ ಸ್ವಾತಿ ರಾಮ್ ಉಪಸ್ಥಿತರಿದ್ದರು.ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ರಜೀನ ದಿನೇಶ್ ಅವರು ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.