ಮನೆಗಳು ನೀರು ಪಾಲು: ಜನರ ಕಣ್ಣೀರು
•ಪ್ರವಾಹ ಇಳಿಮುಖ•ಮನೆಗೆ ಹೋಗುವ ದಾರಿಗಳು ಮಾಯ•ಮನೆಯೊಳಗೆ ಹೆಚ್ಚಿದ ಕೊಳಚೆ-ರಾಡಿ ನೀರು
Team Udayavani, Aug 11, 2019, 1:24 PM IST
ಅಂಕೋಲಾ: ನೆರೆಗೆ ಮುಳುಗಿದ ಮನೆಯ ಗೋಡೆ ಮೇಲೆ ನೀರಿನ ಗುರುತು ಕಂಡು ಬಂದಿರುವುದು.
ಅಂಕೋಲಾ: ತಾಲೂಕಿನಲ್ಲಿ ಗಂಗಾವಳಿ ನದಿ ಪ್ರವಾಹವೂ ಇಳಿಮುಖವಾಗುತ್ತಿದೆ. ತಮ್ಮ ಮನೆ ಮಠವನ್ನು ಕಳೆದುಕೊಂಡ ಜನರ ಸ್ಥಿತಿ ಚಿಂತಾಜನಕ. ಕೆರೆಗಳಂತಾದ ಹೊಲ ಗದ್ದೆಗಳು, ನೀರಿನಲ್ಲಿ ಮುಳುಗಿದ ಮನೆಗಳು, ಎಲ್ಲವನ್ನೂ ನೆನೆದರೆ ಎದೆ ಒಂದು ಕ್ಷಣ ಝಲ್ ಎನಿಸುತ್ತದೆ.
ಹೌದು ಗಂಗಾವಳಿ ನದಿ ಹಿಂದೆಂದು ಕಂಡರೀಯದ ರೌದ್ರಾವತಾರಕ್ಕೆ ಅಂಕೋಲಾ ತಾಲೂಕಿನ ಭಾಗಶಃ ನಲುಗಿ ಹೋಗಿದೆ. ಕಳೆದ ಆರು ದಿನಗಳಿಂದ ಸಂಭವಿಸಿದ ಪ್ರವಾಹದಿಂದ ಎಲ್ಲೆಡೆ ತುಂಬಿಕೊಂಡಿರುವ ನೀರು ನಿಧಾನಗತಿಯಲ್ಲಿ ಸಾಗರದೊಡಲಿಗೆ ಸೇರುತ್ತಿದೆ. ಇತ್ತ ಮನೆ ತೊರೆದು ಬಂದ ಜನ ಮನೆಯತ್ತ ಮುಖ ಮಾಡಿ ಹೊರಟರೆ ಕೆಲವೆಡೆ ಮನೆಯ ಅವಶೇಷ ಮಾತ್ರ ಕಂಡು ಜನ ಕಣ್ಣೀರಿಡುತ್ತಿದ್ದಾರೆ.
ನೋಡ ನೋಡುತ್ತಿದ್ದಂತೆ ಬದುಕು ಬಾಳಿದ ಮನೆಗಳು ಕುಸಿಯಲಾರಂಭಿಸಿದೆ. ಗೋಡೆಯು ಬಿರುಕು ಬಿಡುತ್ತಿವೆ. ಮನೆಗೆ ಹೊಗಲು ಇದ್ದ ದಾರಿ ಮಾಯವಾಗಿದೆ. ಕೆಲವಡೆ ಭೂಕುಸಿತ. ಇಂತಹ ದಯನೀಯ ಘಟನೆಗಳು ನೆರೆ ಬಂದು ಹೊದ ಮೇಲೆ ಆಗುತ್ತಿದೆ. ನೆರೆ ಇಳಿಯಿತು ಎಂದು ಜನ ಮನೆಗೆ ಹೊರಟರೆ ಮನೆಯೊಳಗೆ ಕಾಲಿರಿಸಲಾಗದಷ್ಟು ಕೊಳಚೆ ಮಣ್ಣು. ಮನೆಯೊಳಗಿದ್ದ ದಿನ ಬಳಕೆ ವಸ್ತು, ಆಹಾರ ಧಾನ್ಯ ಟಿವಿ. ಪ್ರೀಜ್ ಎಲ್ಲವು ಉಪಯೋಗಕ್ಕೆ ಬಾರದಾಗಿದೆ. ದನ ಕರುಗಳು, ನಾಯಿಗಳು, ಕೋಳಿಗಳು ಪ್ರಾಣ ಕಳೆದು ಕೊಂಡಿವೆ. ಜನರ ಬದುಕು ಹತೋಟಿಗೆ ಬರಲು ಸರಕಾರ ಮತ್ತು ಸಂಘ ಸಂಸ್ಥೆಗಳು ಕೈ ಜೊಡಿಸಬೇಕಿದೆ.
•ಅರುಣ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.