‘ಸಾಹೋ’ : ಆಗಸ್ಟ್ 15ಕ್ಕಲ್ಲ ; 30ಕ್ಕೆ ಬಿಡುಗಡೆ
ಬಾಹುಬಲಿಯ ಪ್ರಭಾಸ್ ರ ಹೊಸ ಥ್ರಿಲ್ಲರ್ ಚಿತ್ರ ಸಾಹೋ ಮೇಲೆ ಹೆಚ್ಚಿದ ನಿರೀಕ್ಷೆ
Team Udayavani, Aug 11, 2019, 8:20 PM IST
ಇಂಥದೊಂದು ಕುತೂಹಲ ಸಿನಿಮಾ ವೀಕ್ಷಕರಲ್ಲಿ ಹುಟ್ಟು ಹಾಕಿರುವುದಂತೂ ಸತ್ಯ. ಅದರಲ್ಲೂ ಪ್ರಭಾಸ್ ನ ಅಭಿಮಾನಿಗಳಲ್ಲಂತೂ ತವಕ ಹೆಚ್ಚಾಗತೊಡಗಿದೆ. ಶನಿವಾರವಷ್ಟೇ ಈ ಬಹುಭಾಷೆಯ ಚಿತ್ರದ ಟ್ರೇಲರ್ ಗಳನ್ನು ಮುಂಬಯಿಯಲ್ಲಿ ಬಿಡುಗಡೆ ಮಾಡಲಾಯಿತು. ಬಿಡುಗಡೆಗೊಂಡ ಒಂದೇ ದಿನದಲ್ಲಿ ‘ಸಾಹೋ’ ಟ್ರೇಲರನ್ನು ಮೂರೂ ಕಾಲು ಲಕ್ಷ ಜನ ವೀಕ್ಷಿಸಿದ್ದಾರೆ.
ಸುಜಿತ್ ನಿರ್ದೇಶಿಸಿರುವ ಈ ಚಿತ್ರ ಬಾಹುಬಲಿಗಿಂತ ಭಿನ್ನ. ಅದನ್ನು ಸ್ವತಃ ಪ್ರಭಾಸ್ ಅವರೇ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಬಾಹುಬಲಿಯ ಬಳಿಕ ಪ್ರಭಾಸ್ ಮತ್ತೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆ ಮುಗಿಲು ಮುಟ್ಟಿದೆ. ಇಷ್ಟು ಮಾತ್ರವಲ್ಲದೇ ಈ ಚಿತ್ರ ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆಗೊಳ್ಳುತ್ತಿದೆ. ಒಟ್ಟೂ ಬಜೆಟ್ ಲೆಕ್ಕಾಚಾರ ಮಾಡಿದರೆ 300 ಕೋಟಿಯ ಆಸುಪಾಸು.
ನನಗೂ ಕುತೂಹಲ
‘ಬಾಹುಬಲಿಯಿಂದ ಹೊರಬರುವುದೆಂದರೆ ಬಹಳ ಕಷ್ಟ. ಅಂದುಕೊಂಡಷ್ಟು ಸುಲಭವಲ್ಲ. ಆದರೂ ಪ್ರಯತ್ನಿಸಿದ್ದೇನೆ. ಸುಜಿತ್ ಈ ಸಿನಿಮಾವನ್ನು ತಮ್ಮ ಚಿತ್ರಕಥೆಯಿಂದಲೇ ಕಟ್ಟಿಕೊಡುತ್ತಿದ್ದಾರೆ. ನಿಜಕ್ಕೂ ಇದು ಚಿತ್ರಕಥೆಯ ಮೇಲೆಯೇ ನಿಂತ ಸಿನಿಮಾ. ಹಲವು ತಿರುವುಗಳನ್ನು ಒಳಗೊಂಡಿರುವ ಕಥೆಯಿದು. ನನ್ನ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲ ನನ್ನಲ್ಲೂ ಇದೆ. ಸಾಹೋ ಚಿತ್ರದಲ್ಲಿ ನನ್ನ ಪಾತ್ರವನ್ನು ಪ್ರೇಕ್ಷಕರು ಸ್ವೀಕರಿಸಬಹುದು ಎಂಬ ನಂಬಿಕೆಯಿದೆ’ ಎಂದವರು ಪ್ರಭಾಸ್.
ಬಾಹುಬಲಿಯೇ ಬೇರೆ, ಸಾಹೋವೇ ಬೇರೆ ಎರಡನ್ನೂ ಒಟ್ಟಿಗೆ ಇಟ್ಟು ಹೋಲಿಸಬೇಡಿ. ಬಾಹುಬಲಿ ಇತಿಹಾಸ ನಿರ್ಮಿಸಲೆಂದು ಮಾಡಿದ್ದು. ಸಾಹೋ ಸಂಪೂರ್ಣವಾಗಿ ಸಿನಿ ಪ್ರೇಕ್ಷಕರನ್ನು ಮತ್ತು ಅಭಿಮಾನಿಗಳನ್ನು ರಂಜಿಸಲು, ಖುಷಿಕೊಡಲು ಮಾಡಿದ್ದು ಎಂದು ಹೇಳಿದರು ಪ್ರಭಾಸ್.
ಸುಮಾರು ಎರಡು ವರ್ಷ ಈ ಚಿತ್ರದಲ್ಲಿ ಪ್ರಭಾಸ್ ತೊಡಗಿಸಿಕೊಂಡಿದ್ದಾರೆ. ಆಸ್ಟ್ರಿಯಾ, ದುಬಾಯಿ, ಹೈದರಾಬಾದ್, ಮುಂಬಯಿ, ಅಬುಧಾಬಿ ಮತ್ತಿತರ ಕಡೆ ಚಿತ್ರೀಕರಣ ನಡೆದಿದೆ. ಪ್ರಭಾಸ್ ಜತೆ ಶ್ರದ್ಧಾ ಕಪೂರ್, ಜಾಕಿಶ್ರಾಫ್, ನೀಲ್ ನಿತಿನ್ ಮುಕೇಶ್, ಚುಂಕಿಪಾಂಡೆ, ಪ್ರಕಾಶ್ ಬೆಳವಾಡಿ, ಅರುಣ್ ವಿಜಯ್, ಜಾಕ್ವೆಲಿನ್ ಫೆರ್ನಾಂಡಿಸ್ ಎಲ್ಲರೂ ನಟಿಸಿದ್ದಾರೆ.
ಆಗಸ್ಟ್ 30 ಕ್ಕೆ ಬಿಡುಗಡೆ
ಮೊದಲ ಲೆಕ್ಕಾಚಾರದಂತೆ ಆಗಸ್ಟ್ 15 ರಂದು ಈ ಚಿತ್ರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಅದೇ ದಿನ ಅಕ್ಷಯ್ ಕುಮಾರ್ ರ ‘ಮಿಶನ್ ಮಂಗಲ್’ ಹಾಗೂ ಜಾನ್ ಅಬ್ರಹಾಂರ ‘ಬಾಟ್ಲಾ ಹೌಸ್’ ಬಿಡುಗಡೆಯಾಗುತ್ತಿದೆ. ಇದರ ಮಧ್ಯೆ ತಮ್ಮ ಚಿತ್ರ ಬೇಡ ಎಂದು ‘ಸಾಹೋ’ ನಿರ್ಮಾಪಕರು ಆಗಸ್ಟ್ 30 ಕ್ಕೆ ದಿನಾಂಕ ನಿಗದಿಪಡಿಸಿದ್ದಾರೆ.
ಪ್ರಭಾಸ್ ಅಭಿಮಾನಿಗಳು ಬಾಹುಬಲಿ ಗುಂಗಿನಿಂದ ಹೊರಬಂದು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲ ಎಲ್ಲೆಡೆ ಇದೆ. ಹಾಗೆಯೇ ಪ್ರಭಾಸ್ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ.
– ಅಮೃತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.