ವೆಸ್ಟ್ ಇಂಡೀಸ್ ಗೆಲುವಿಗೆ 280 ರನ್ ಟಾರ್ಗೆಟ್ ನೀಡಿದ ಭಾರತ
Team Udayavani, Aug 11, 2019, 11:18 PM IST
ಪೋರ್ಟ್ ಆಫ್ ಸ್ಪೇನ್:ವೆಸ್ಟ್ ಇಂಡೀಸ್ ಎದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿದೆ.
ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಕ್ರಮವಾಗಿ ವಿರಾಟ್ ಕೊಹ್ಲಿ 120, ಶ್ರೇಯಸ್ ಅಯ್ಯರ್ 71, ರೋಹಿತ್ ಶರ್ಮ 18, ರಿಷಬ್ ಪಂತ್ 20, ಕೇದಾರ್ ಜಾಧವ್ ಹಾಗೂ ರವೀಂದ್ರ ಜಡೇಜ ಸಮನಾಗಿ 16 ರನ್ ಗಳನ್ನು ಕಲೆಹಾಕಿದರು.
ಮೊದಲ ಓವರಿನಲ್ಲೇ ಬ್ಯಾಟ್ ಹಿಡಿದು ಬಂದ ವಿರಾಟ್ ಕೊಹ್ಲಿ ಅತ್ಯಂತ ಜವಾಬ್ದಾರಿಯುತ ಆಟವಾಡಿದರು. ವಿಂಡೀಸ್ ಬೌಲರ್‌ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ ರನ್ ಪೇರಿಸುತ್ತ “ಕ್ವೀನ್ಸ್ ಪಾರ್ಕ್’ನಲ್ಲಿ ಮೆರೆದಾಡಿದರು. ಇದರೊಂದಿಗೆ ಕೊಹ್ಲಿ ಅತ್ಯಧಿಕ 3 ತಂಡಗಳ ವಿರುದ್ಧ 8 ಶತಕ ಬಾರಿಸಿದಂತಾಯಿತು.
ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಲು ನಿರ್ಧರಿಸಿತ್ತು. ಆದರೆ ಶಿಖರ್ ಧವನ್ ಕೇವಲ 2 ರನ್ ಮಾಡಿ ಮೊದಲ ಓವರಿನಲ್ಲೇ ಕಾಟ್ರೆಲ್ ಬಲೆಗೆ ಬಿದ್ದರು. ರೋಹಿತ್ ಶರ್ಮ 16ನೇ ಓವರ್ ತನಕ ಕ್ರೀಸಿನಲ್ಲಿ ಉಳಿದರೂ ಗಳಿಸಿದ್ದು 18 ರನ್ ಮಾತ್ರ (34 ಎಸೆತ, 2 ಬೌಂಡರಿ). 4ನೇ ಕ್ರಮಾಂಕದಲ್ಲಿ ಆಡಲಿಳಿದ ರಿಷಭ್ ಪಂತ್ 35 ಎಸೆತ ಎದುರಿಸಿ 20 ರನ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Bengaluru: ಕೀಪರ್ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
World Test Championship: ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.