ಮೈದಾನಗಳು ಮಾಯ!

ಸುದ್ದಿ ಸುತ್ತಾಟ

Team Udayavani, Aug 12, 2019, 3:10 AM IST

maidanagalu

ಶಾಲೆ ಅಂದಮೇಲೆ ಆಟದ ಮೈದಾನ ಇರಲೇಬೇಕು. ಹಿಂದೆಲ್ಲಾ ಸರ್ಕಾರಿ ಶಾಲೆಗೆ ಭೂಮಿ ನೀಡುವಾಗ ಮೈದಾನಕ್ಕೆಂದೇ ನಾಲ್ಕಾರು ಎಕರೆ ಜಾಗ ಮೀಸಲಿಡುತ್ತಿದ್ದರು. ಬೆಂಗಳೂರಲ್ಲೂ ಹಲವು ಶಾಲೆಗಳಿಗೆ ದೊಡ್ಡ ಮೈದಾನಗಳಿದ್ದವು. ಆದರೆ ಇತ್ತೀಚೆಗೆ ಅವೆಲ್ಲವೂ ಮಾಯವಾಗಿವೆ. ನಗರದಲ್ಲಿರುವ 7000 ಶಾಲೆಗಳ ಪೈಕಿ ಅರ್ಧದಷ್ಟು ಮೈದಾನವನ್ನೇ ಹೊಂದಿಲ್ಲ. ಮೈದಾನ ಬಿಡಿ, ಸುಸಜ್ಜಿತ ಕಟ್ಟಡ ಕೂಡ ಈ ಶಾಲೆಗಳಿಗಿಲ್ಲ. ಮನೆಗಳಂತೆ ಶಾಲೆಗಳು ಕೂಡ 30*40 ಸೈಟಿನಲ್ಲಿ ಆರಂಭವಾಗುತ್ತಿವೆ! ಹೀಗಾಗಿ, ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಮರೀಚಿಕೆಯಾಗಿವೆ. ಜತೆಗೆ ಆಟ, ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳಿಗೂ ಬ್ರೇಕ್‌ ಬಿದ್ದಿದೆ. ಈ ನಿಟ್ಟಿನಲ್ಲಿ ನಗರದ ಶಾಲೆ ಮೈದಾನಗಳ ಸ್ಥಿತಿಗತಿ ಕುರಿತ ಒಳನೋಟ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

ಬೆಂಗಳೂರು: ದಶಕಗಳ ಹಿಂದೆ 200 ಚದರ ಕಿ.ಮೀ. ವ್ಯಾಪ್ತಿ ಹೊಂದಿದ್ದ ಬೆಂದಕಾಳೂರು, ಈಗ 800 ಚದರ ಕಿ.ಮೀ.ಗೆ ವಿಸ್ತಾರವಾಗಿದೆ. ಕಾಡುಗಳು ನಾಶವಾಗಿ ಕಾಂಕ್ರೀಟ್‌ ಕಾಡುಗಳು ತಲೆ ಎತ್ತಿವೆ. ಶಾಲಾ ದಿನ, ರಜಾ ದಿನಗಳಲ್ಲಿ ಶಾಲಾ ಕಾಲೇಜುಗಳ ಮಕ್ಕಳು ಸ್ವಚ್ಛಂದವಾಗಿ ಆಟವಾಡುತ್ತಿದ್ದ ಮೈದಾನಗಳು ಕಣ್ಮರೆಯಾಗಿವೆ. ಕೆರೆಗಳು ಮಾಯವಾಗಿವೆ, ರಾಜಕಾಲುವೆಯ ಮೇಲೆ ಕಾಂಕ್ರೀಟ್‌ ಹಾಕಿ ಕಟ್ಟಡ ನಿರ್ಮಾಣ ಕಾರ್ಯ ಎಗ್ಗಿಲ್ಲದೆ ಸಾಗುತ್ತಿದೆ. ಕಟ್ಟಡಗಳಿಂದ ಆವರಿಸಿರುವ ಬೆಂಗಳೂರಿಗೆ ದೇಶದ ಮೂಲೆ ಮೂಲೆಗಳಿಂದ ಜನ ವಲಸೆ ಬರುತಿದ್ದಾರೆ.

ಜನಸಂಖ್ಯೆ ಕೂಡ ಶರವೇಗದಲ್ಲಿ ಬೆಳೆಯುತ್ತಿದೆ. ಸರ್ಕಾರಿ ಶಾಲೆಗಳ ಜತೆ ಜತೆಗೆ ಖಾಸಗಿ, ಅನುದಾನಿತ ಶಾಲೆಗಳು ಬೆಳೆಯುತ್ತಲೇ ಇವೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದರೆ, ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳಿಗೆ ಪ್ರಶಾಂತವಾಗಿ ಆಟವಾಡಲು ಮೈದಾನವೇ ಇಲ್ಲ! ಶಾಲಾ ಮೈದಾನದ ಬದಲಿಗೆ ಸಾರ್ವಜನಿಕ ಮೈದಾನಗಳು, ಬಿಬಿಎಂಪಿ ಮೈದಾನಗಳನ್ನು ಮಕ್ಕಳು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಉಪಯೋಗಿಸಬೇಕಾದ ದುಸ್ಥಿತಿಗೆ ಬೆಂಗಳೂರಿನ ಶಾಲಾ ಮಕ್ಕಳು ತಲುಪಿದ್ದಾರೆ.

ಅರ್ಧ ಶಾಲೆಗಳಿಗಿಲ್ಲ ಮೈದಾನ: ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 7000 ಶಾಲೆಗಳಿದ್ದು, ಶೇ.50ರಷ್ಟು ಶಾಲೆಗಳಲ್ಲಿ ಮಕ್ಕಳ ಆಟಕ್ಕೆ ಬೇಕಾದ ಸುಸಜ್ಜಿತ ಮೈದಾನಗಳೇ ಇಲ್ಲ. ಇನ್ನು ಕೆಲವು ಶಾಲೆಗಳು ಮಾರುಕಟ್ಟೆಯ ಶಾಪಿಂಗ್‌ ಕಾಂಪ್ಲೆಕ್ಸ್‌ಗಳ ರೀತಿಯ ಕಟ್ಟಡದಲ್ಲಿವೆ. ಮತ್ತೆ ಕೆಲವು ಶಾಲೆಗಳಲ್ಲಿ ಮಕ್ಕಳು ಸಲೀಸಾಗಿ ಆಚಿಂದೀಚೆ ಓಡಾಡಲು ಬೇಕಾದ ಕಾರಿಡಾರ್‌ ಕೂಡ ಇಲ್ಲ. ಮಕ್ಕಳಿಗೆ ಪಾಠ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಕೂಡ ಅಷ್ಟೇ ಮುಖ್ಯ. ರಾಜಧಾನಿಯ ಶಾಲೆಗಳಲ್ಲಿ ಪಠ್ಯ ಚೆನ್ನಾಗಿ ನಡೆಯುತ್ತಿದೆ. ಅದರೆ, ಪಠ್ಯೇತರ ಚಟುವಟಿಕೆ, ಕ್ರೀಡಾ ಚುಟುವಟಿಕೆಗೆ ಬೇಕಾದ ಮೈದಾನಗಳಿಲ್ಲದೆ. ಎರಡು ಮೂರು ಶಾಲೆಯ ಮಕ್ಕಳು ಒಂದೇ ಮೈದಾನದಲ್ಲಿ ಆಟವಾಡಬೇಕಾದ ಅನಿವಾರ್ಯತೆ ಇದೆ.

ಇದೇ ಕಾರಣದಿಂದಾಗಿ ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣಕ್ಕೆ (ಪಿ.ಟಿ) ಸಂಬಂಧಿಸಿದಂತೆ ವಾರಕ್ಕೆ ಒಂದು ಅಥವಾ ಎರಡು ತರಗತಿಗಳನ್ನು ಮಾತ್ರ ನಿಗದಿ ಮಾಡಲಾಗಿದೆ. ದೈಹಿಕ ಶಿಕ್ಷಣದಿಂದಲೂ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೂ ಕೆಲಸ ಇಲ್ಲದಂತಾಗುತ್ತಿದೆ. ನಗರದಲ್ಲಿ ಶಾಲೆಗಳನ್ನು ಕೂಡ 30*40 ನಿವೇಶನಗಳಲ್ಲಿ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ. ಕೆಲ ಶಾಲೆಗಳು ಸ್ವಂತ ಕಟ್ಟಡಗಳಿಲ್ಲದೇ ಬಾಡಿಗೆ ಕಟ್ಟಡಗಳನ್ನು ಪಡೆದಿವೆ. ಇದರಿಂದಾಗಿ ಮಕ್ಕಳಿಗೆ ಯಾವುದೇ ರೀತಿಯ ಶಿಕ್ಷಣೇತರ ಕೌಶಲ್ಯಗಳು ಸಿಗುತಿಲ್ಲ.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸುವ ವೇಳೆ ಕೇವಲ ಶಾಲೆಗಳ ಬೋಧನಾ ಗುಣಮಟ್ಟ ಮತ್ತು ಸುರಕ್ಷತೆ ವಿಷಯಗಳಗೆ ಆದ್ಯತೆ ನೀಡುತ್ತಿದ್ದಾರೆಯೇ ವಿನಾ, ಮಕ್ಕಳ ಪಠ್ಯೇತರ ಪ್ರಗತಿಗೆ ಬೇಕಾದ ಆಟದ ಮೈದಾನ, ತರಗತಿಗಳು ಇವೆಯೇ ಎಂಬುದನ್ನು ಪರಿಶೀಲಿಸದ ಸ್ಥಿತಿಗೆ ತಲುಪಿದ್ದಾರೆ. ಆಟದ ಮೈದಾನಗಳಿಲ್ಲಿದ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣ ಇಲ್ಲದೆ ಮಾನಸಿಕ ಒತ್ತಡ ಕೂಡ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳು ಖಿನ್ನತೆಗೊಳಗಾಗುವ ಸಾಧ್ಯತೆ ಇರುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿಸಲು 2017ರ ತನಕ ಆಟದ ಮೈದಾನವಿಲ್ಲದ ಸಾವಿರಾರು ಶಾಲೆಗಳಿಗೆ ಅನುಮತಿ ನೀಡಲಾಗಿದೆ. ನಂತರ ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳು ನುಮತಿ ಪಡೆಯಬೇಕಿದ್ದರೆ ಕನಿಷ್ಠ ಒಂದೂವರೆ ಎಕರೆ ವಿಸ್ತೀರ್ಣ ಹೊಂದಿರಬೇಕು ಮತ್ತು ಬಿಬಿಎಂಪಿ ಹೊರವಲಯಗಳಲ್ಲಿ ಕನಿಷ್ಠ ಮೂರು ಎಕರೆ ಜಮೀನು ಹೊಂದಿರಬೇಕು. ನಂತರ ಶಾಲೆಗಳು ಯಾವುದಾದರೂ ಟ್ರಸ್ಟ್‌ , ಸೊಸೈಟಿ ಅಥವಾ ಕಂಪನಿ ಕಾಯ್ದೆ ಅಡಿಯಲ್ಲಿ ನೋಂದಣಿಯಾಗಿರಬೇಕು. ಶಾಲೆ ಪ್ರಾರಂಭಿಸುವ ಸ್ಥಳ ಸ್ವಂತದ್ದಾಗಿರಬೇಕು ಅಥವಾ 30ವರ್ಷಗಳ ಗುತ್ತಿಗೆ ಪಡೆದಿರಬೇಕು. ನಂತರ ತರಗತಿ ಪ್ರಾರಂಭಿಸಲು ಸುಸಜ್ಜಿತ ಕಟ್ಟಡ, ಶಿಕ್ಷಕರು ಮತ್ತು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವುದು ಕಡ್ಡಾಯವಾಗಿದೆ. ಇಷ್ಟೆಲ್ಲಾ ನಿರ್ಬಂಧನೆಗಳಿದ್ದರೂ ಶಿಕ್ಷಣ ಇಲಾಖೆ ಆಟದ ಮೈದಾನಗಳಿಲ್ಲದ ಶಾಲೆಗಳಿಗೆ ಶಿಕ್ಷಣ ಇಲಾಖೆಯೇ ಅನುಮೋದನೆ ನೀಡುತ್ತಿವೆ ಎಂಬ ಆರೋಪವೂ ಇದೆ.

ಸಾರ್ವಜನಿಕ ಮೈದಾನವೇ ಗತಿ!: ಕೆಲ ಶಾಲೆಗಳಲ್ಲಿ ಆಟದ ಮೈದಾನವಿಲ್ಲದ ಕಾರಣ ಶಾಲೆಯ ಸಮೀಪ, ಸುತ್ತಮುತ್ತ ಇರುವ ಬಿಬಿಎಂಪಿ ಅಥವಾ ಸಾರ್ವಜನಿಕ ಆಟದ ಮೈದಾನಗಳನ್ನೇ ನಂಬಿಕೊಂಡಿವೆ. ಮಕ್ಕಳ ದೈಹಿಕ ಕ್ಷಮತೆಗಾಗಿ ನಿತ್ಯವು ಶಾಲಾ ಆವರಣದ ಹೊರಗಿನ ಆಟದ ಮೈದಾನಗಳಿಗೆ ಕರೆದುಕೊಂಡು ಹೋಗುವುದು ಶಿಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿಯಾಗಿಬಿಟ್ಟಿದೆ. ರಸ್ತೆ ದಾಟುವಾಗ ಮಕ್ಕಳು ಅಪಘಾತಕ್ಕೆ ತುತ್ತಾಗದಂತೆ ಎಚ್ಚರಿಕೆಯನ್ನೂ ವಹಿಸಬೇಕಾಗಿದೆ. ಶಾಲೆಯ ಹೊರಾವರಣದಲ್ಲಿ ಇರುವ ಮೈದಾನಕ್ಕೆ ಸರತಿ ಸಾಲಿನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದು ಮತ್ತು ಅಲ್ಲಿಂದ ವಾಪಸ್‌ ಅದೇ ಮಾದರಿಯಲ್ಲಿ ಕರೆ ತರುವುದೇ ಶಿಕ್ಷಕರಿಗೆ ತಲೆನೋವಾಗಿದೆ.

ಶಾಲೆಗೆ ಸೇರಿದ ಮೈದಾನ ಹೊರತುಪಡಿಸಿ ಬೇರೆ ಯಾವುದೇ ಮೈದಾನದಲ್ಲಿ ಮಕ್ಕಳಿಗೆ ಆಟವಾಡುವ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಅನಾಹುತಗಳು ನಡೆದರೆ ಶಾಲಾಡಳಿತ ಮಂಡಳಿಯೇ ನೇರ ಹೊಣೆ ಹೊರತು, ಶಿಕ್ಷಣ ಇಲಾಖೆ ಇದಕ್ಕೆ ಯವುದೇ ರೀತಿಯಲ್ಲೂ ಸ್ಪಂದಿಸುವುದಿಲ್ಲ. ಈ ಕಾರಣದಿಂದಲೇ ಕೆಲವೊಂದು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶಾಲಾ ಹೊರಗಿನ ಮೈದಾನಗಳಿಗೆ ಕರೆದುಕೊಂಡು ಹೋಗುತ್ತಿಲ್ಲ. ಶಾಲೆಯಲ್ಲೂ ದೈಹಿಕ ಶಿಕ್ಷಣ ನೀಡುತ್ತಿಲ್ಲ.

ಕ್ರೀಡೆ ಒಳಾಂಗಣಕ್ಕೆ ಸೀಮಿತ: ಬಹುತೇಕ ಶಾಲೆಗಳಲ್ಲಿ ಮೈದಾನ ಇಲ್ಲದೇ ಇರುವುದರಿಂದ ಮಳೆಗಾಲದ ಆಟ ಮತ್ತು ಒಳಾಂಗಣ ಕ್ರೀಡಾಂಗಣದಲ್ಲಿ ಆಟಬಹುದಾದ ಆಟಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಓಡಾಡಿ ಆಡುವ ಆಟಕ್ಕೆ ಶಾಲೆಗಳಿಂದಲೇ ತಡೆ ಬೀಳುತ್ತಿವೆ. ಕಬಡ್ಡಿ, ಖೋ-ಖೋ, ಕ್ರಿಕೆಟ್‌, ವಾಲಿಬಾಲ್‌, ಪುಟ್‌ಬಾಲ್‌, ಬಾಸ್ಕೆಟ್‌ಬಾಲ್‌, ನೆಟ್‌ಬಾಲ್‌, ಥ್ರೋಬಾಲ್‌ ಮೊದಲಾದ ಕ್ರೀಡೆಗಳು ಮಕ್ಕಳ ಪಠ್ಯಪುಸ್ತಕಕ್ಕೆ ಸೀಮಿತವಾಗಿಬಿಟ್ಟಿವೆ. ಕೇರಂ, ಚೆಸ್‌, ಬ್ಯಾಡ್ಮಿಂಟನ್‌, ಇತ್ಯಾದಿ ಒಳಾಂಗಣ ಕ್ರೀಡೆಗಳಿಗೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಒಗ್ಗಿಕೊಳ್ಳುತ್ತಿದ್ದಾರೆ.

ಬಿಬಿಎಂಪಿ ಶಾಲೆಗಳ ಪರಿಸ್ಥಿತಿ: ನಗರದಲ್ಲಿ ಬಿಬಿಎಂಪಿ ನಿರ್ವಹಿಸುತ್ತಿರುವ 158 ಶಾಲೆಗಳಿದ್ದು, ಇವುಗಳ ಪೈಕಿ 130 ಶಾಲೆಗಳು ಆಟದ ಮೈದಾನಗಳನ್ನು ಹೊಂದಿವೆ. ಇನ್ನುಳಿದ ಶಾಲೆಗಳು ಆಟದ ಮೈದಾನಗಳಿಲ್ಲದ ಕಾರಣ ಮಕ್ಕಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗುತಿದ್ದಾರೆ. ಇನ್ನು ಈ ಶಾಲೆ ಮಕ್ಕಳು ತಮ್ಮ ಆಟೋಟಗಳಿಗಾಗಿ ಶಾಲೆ ಅಕ್ಕಪಕ್ಕದಲ್ಲಿನ ಸಾರ್ವಜನಿಕ ಕ್ರೀಡಾಂಗಣಗಳಗಳನ್ನು ಬಳಸುತ್ತಿದ್ದಾರೆ.

ಆಟದ ಮೈದಾನದ ಉಪಯೋಗ
-ಆಟದ ಸಂದರ್ಭದಲ್ಲಿ ಪ್ರಶಾಂತವಾಗಿ ಓಡಾಟ ಮಾಡುವುದಿಂದ ಮಕ್ಕಳಿಗೆ ಉತ್ತಮ ದೈಹಿಕ ವ್ಯಾಯಾಮ ಸಿಗುತ್ತದೆ.

-ನಗರ ಸಂಪೂರ್ಣವಾಗಿ ಕಾಂಕ್ರಿಟ್‌ನಿಂದ ಆವರಿಸುತಿದ್ದು, ಮಳೆ ನೀರು ಇಂಗಲು ಆಟದ ಮೈದಾನದಂತಹ ಖಾಲಿ ಪ್ರದೇಶಗಳು ಸಹಾಯಕಾರಿಯಾಗುತ್ತವೆ.

-ಆಟದ ಮೈದಾನಗಳು ಹಸಿರು ಹುಲ್ಲಿನಿಂದ ಕೂಡಿದ್ದರೆ ಮಕ್ಕಳಿಗೆ ಸದಾ ಚೈತನ್ಯ ತುಂಬುವ ಕೆಲಸ ಮಾಡುತ್ತವೆ.

-ಆಟದ ಮೈದಾನ ಇದ್ದಾಗ ಮಾತ್ರ ಶಾಲೆಯಲ್ಲಿ ಆಟ ಮತ್ತು ಪಾಠಕ್ಕೆ ಸಮಾನ ಆದ್ಯತೆ ಸಿಗುತ್ತದೆ.

-ಆಟದ ಮೈದಾನವನ್ನು ಸಮರ್ಪಕವಾಗಿ ಬಳಸಿಕೊಂಡು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಕಷ್ಟು ಕ್ರೀಡಾಪಟುಗಳು ನಮ್ಮೆದುರು ಇದ್ದಾರೆ.

ಮಕ್ಕಳ ಆಟೋಟಕ್ಕೆ ಅಗತ್ಯವಿರುವ ಮೈದಾನವನ್ನು ಪ್ರತಿ ಶಾಲೆಯೂ ಹೊಂದಿರಬೇಕು. ಬಹಳ ವರ್ಷಗಳ ಹಿಂದೆ ಆರಂಭವಾಗಿರುವ ಹಲವು ಶಾಲೆಗಳಲ್ಲಿ ಮೈದಾನ ಇಲ್ಲದೇ ಇರುವುದು ತಿಳಿದು ಬಂದಿದೆ. ಆದರೆ, ಹೊಸದಾಗಿ ಅರಂಭವಾಗುವ ಶಾಲೆಗಳಿಗೆ ಕನಿಷ್ಠ ಕಬಡ್ಡಿ ಕೋರ್ಟ್‌ನಷ್ಟು ಅಳತೆಯ ಮೈದಾನವನ್ನಾದರೂ ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮ ಇದೆ. ಇದು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಹೀಗೆ ಎಲ್ಲ ಮಾದರಿಯ ಶಾಲೆಗಳಿಗೂ ಅನ್ವಯವಾಗುತ್ತದೆ.
-ಸಿ.ಬಿ.ಜಯರಂಗ, ಶಿಕ್ಷಣ ಇಲಾಖೆ ಉಪನಿರ್ದೇಶಕರು (ಬೆಂ.ಉತ್ತರ)

ಆಟದ ಮೈದಾನಗಳಿಲ್ಲದ ಶಾಲೆಗಳು ಪಾಲಿಕೆಯ ಪಾರ್ಕ್‌ ಮತ್ತು ಆಟದ ಮೈದಾನಗಳನ್ನು ಬಳಸಲು ಈಗಾಗಲೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ತಮ್ಮ ಶಾಲೆಗಳ ಆವರಣದಿಂದ ಹೊರಗೆ ಹೋಗಿ ಆಟವಾಡಲು ಮಕ್ಕಳು ಹೆಚ್ಚು ಆಸಕ್ತಿ ತೋರುವುದಿಲ್ಲ. ಸುರಕ್ಷತೆ ದೃಷ್ಟಿಯಿಂದ ಶಾಲೆಗಳಿಂದಾಚೆಗೆ ಹೋಗಲು ಆಗುವುದಿಲ್ಲ. ಶಾಲೆಗಳಲ್ಲಿ ಆಟದ ಮೈದಾನಗಳಿಲ್ಲದಿದ್ದರೆ ಮಕ್ಕಳಲ್ಲಿನ ಶಾಲೆಗಳ ಮೇಲಿನ ಭಾವನೆಗಳು ಕಡಿಮೆಯಾಗುತ್ತವೆ. ಮಕ್ಕಳಲ್ಲಿ ನಾವೆಲ್ಲಾ ಒಂದು ನಮ್ಮ ಶಾಲೆ ಎಂಬ ಭಾವನೆಗಳು ಮೂಡುವುದಿಲ್ಲ. ಮಕ್ಕಳಲ್ಲಿ ಪರಸ್ಪರ ಅನ್ಯೋನ್ಯತೆ ಬೆಳೆಯುವುದಿಲ್ಲ. ಮಕ್ಕಳನ್ನು ಆಟದ ಮೈದಾನಕ್ಕೆ ಹೋಗದಂತಹ ವಾತಾವರಣ ನಿರ್ಮಿಸುವ ಶಾಲೆಗಳು ಮಕ್ಕಳ ಹಕ್ಕನ್ನು ಕಿತ್ತುಕೊಂಡಂತೆ, ಇದು ಮಕ್ಕಳ ಹಕ್ಕು ಉಲ್ಲಂಘನೆ.
-ನಾಗಸಿಂಹ ಜಿ.ರಾವ್‌, ಶಿಕ್ಷಣ ತಜ್ಞ

ಶಾಲೆಗಳ ಪಕ್ಕದಲ್ಲಿರುವ ಖಾಲಿ ಜಾಗವನ್ನು ಆಟದ ಮೈದಾನಗಳಾಗಿ ಬಳಸುವಂತೆ ಕೋರ್ಟ್‌ ಆದೇಶಿಸಿದೆ. ಆದರೆ ಸದ್ಯ ಎಲ್ಲ ಸರ್ಕಾರಿ ಜಾಗಗಳನ್ನು ಪಾರ್ಕ್‌ , ಸರ್ಕಾರಿ ಕಚೇರಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಪ್ರತಿ ಪಾರ್ಕ್‌ ನಲ್ಲಿ ಮಕ್ಕಳು ಆಟವಾಡಲು ಮೈದಾನಗಳನ್ನು ಅಭಿವೃದ್ದಿಪಡಿಸಬೇಕಿದೆ. ರಾಜಧಾನಿ ಬೆಳೆದಿರುವ ಕಾರಣ ಕಟ್ಟಡಗಳನ್ನು ನೆಲಸಮ ಮಾಡಿ ಆಟದ ಮೈದಾನ ನಿರ್ಮಿಸಲು ಅಸಾಧ್ಯ. ಸರ್ಕಾರಿ ಜಾಗಗಳನ್ನು ಆಟದ ಮೈದಾನಗಳಾಗಿ ಪರಿವರ್ತಿಸಿ, ಸರ್ಕಾರಿ ಜಾಗಗಳಿಲ್ಲದ ಪ್ರದೇಶಗಳಲ್ಲಿ ಪಾರ್ಕ್‌ ಗಳಲ್ಲಿನ ಸ್ವಲ್ಪ ಜಾಗ ಮಕ್ಕಳ ಆಟದ ಮೈದಾನಕ್ಕೆ ಮೀಸಲಿಡಬೇಕು.
-ಡಿ.ಶಶಿಕುಮಾರ್‌, ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ

* ರಾಜು ಖಾರ್ವಿ ಕೊಡೇರಿ/ ಲೋಕೇಶ್‌ ರಾಮ್‌

ಟಾಪ್ ನ್ಯೂಸ್

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

5

New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.