ಕೊಡಗಿನಲ್ಲಿ ಮಳೆ ಕ್ಷೀಣ ಮುಂದುವರಿದ ಪ್ರವಾಹ ಆತಂಕ
Team Udayavani, Aug 12, 2019, 6:20 AM IST
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರವಿವಾರ ಮಳೆ ಕ್ಷೀಣವಾಗಿ ನದಿಗಳ ನೀರಿನ ಮಟ್ಟ ಇಳಿಮುಖಗೊಂಡಿದ್ದರೂ ಆತಂಕದ ವಾತಾವರಣ ಮುಂದುವರಿದಿದೆ.
ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಪ್ರವಾಹ ಇಳಿಮುಖವಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಪ್ರವಾಹದ ಮಟ್ಟ ಇಳಿದಿದೆಯಾದರೂ ಇನ್ನೂ ಸಂಚಾರ ಸುಗಮವಾಗಿಲ್ಲ.
ಬರೆ ಕುಸಿತದ ಆತಂಕ
ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಬರೆ ಕುಸಿತವಾಗಿದ್ದು, ಮಳೆಯ ಪ್ರಮಾಣ ಹೆಚ್ಚಾದಲ್ಲಿ ಸಂಪರ್ಕ ಕಡಿತಗೊಳ್ಳುವ ಅಪಾಯ ಎದುರಾಗಿದೆ. ಕುಶಾಲನಗರ, ಕೊಪ್ಪ ವ್ಯಾಪ್ತಿಯಲ್ಲಿ ಕಾವೇರಿಯ ಪ್ರವಾಹದ ಅಬ್ಬರಕ್ಕೆ ಸುಮಾರು 500ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಕುಶಾಲನಗರದಲ್ಲಿ ರವಿವಾರವೂ ರಾ. ಹೆ.ಬಂದ್ ಅಗಿತ್ತು. ಕೂಪ್ಪ, ಕುಶಾಲನಗರ ಕಡೆಗೆ ಬರುವ ಜನರನ್ನು ಬೋಟ್ ಮೂಲಕ ಸಾಗಿಸಲಾಗುತ್ತಿದೆ. ತಾವರೆಕರೆ ರಸ್ತೆ ಮೇಲೆ ನೀರು ನಿಂತಿ ದ್ದರೂ ಚಾಲಕನೊಬ್ಬ ಬಸ್‌ನ್ನು ದಾಟಿಸಲು ಮುಂದಾಗಿ ನೀರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಕುಶಾಲ ನಗರ -ಮೈಸೂರು ರಸ್ತೆ, ಕೂಡಿಗೆ – ಕಣಿವೆ ರಸ್ತೆ, ಕುಶಾಲನಗರ- ಹೆಬ್ಟಾಲೆ ರಸ್ತೆಯಲ್ಲಿ ವಾಹನ ಸಂಚಾರ ಪ್ರಾರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.