![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 12, 2019, 6:03 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಂಡನ್: ಯಾವುದೋ ಕೆಲಸ ಮಾಡಿಕೊಡಲು ಲಂಚ ಕೊಡುವುದು ಗೊತ್ತೇ ಇದೆ. ಲಂಚದ ಸಮಸ್ಯೆ ವಿಶ್ವಾದ್ಯಂತ ಹಬ್ಬಿರುವುದೂ ಹೌದು. ಆದರೆ ಇಲ್ಲೊಂದು ವಿಶೇಷವಿದೆ. ಇಲ್ಲಿ ಲಂಚ ಕೊಡುವುದು ಯಾವುದೇ ಕೆಲಸ ಮಾಡುವುದಕ್ಕಲ್ಲ, ಅಧಿಕಾರಿಗಳಿಗೂ ಅಲ್ಲ. ಬದಲಿಗೆ ಹೆತ್ತವರು ಮಕ್ಕಳಿಗೇ ಲಂಚ ಕೊಡುತ್ತಿದ್ದಾರೆ. ಇಷ್ಟಕ್ಕೂ ಲಂಚ ಕೊಡುವುದು ಸ್ಮಾರ್ಟ್ ಫೋನ್ ಆದಷ್ಟೂ ಕಡಿಮೆ ಬಳಸಲಿ ಎಂಬ ಉದ್ದೇಶದಿಂದ!
ಲಂಡನ್‌ನಲ್ಲಿ ಹೆಲಿಕ್‌ಸ್ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಅಲ್ಲಿನ ಶೇ.23ಕ್ಕೂ ಹೆಚ್ಚು ಹೆತ್ತವರು ಮಕ್ಕಳು ಸ್ಮಾರ್ಟ್ ಫೋನ್ ಮುಟ್ಟದಿರಲಿ (ಸ್ವಿಚ್ ಆಫ್) ಮಾಡಲು ಹಣ ಕೊಡುತ್ತಾರಂತೆ. ಹೀಗೆ ಹಣ ಕೊಡುವುದರಿಂದ ಮಕ್ಕಳು ಬೇರೆಲ್ಲಾದರೂ ತಿರುಗಾಟಕ್ಕೆ, ಆಟ ಆಡೋದಕ್ಕೆ ಹೋಗುತ್ತಾರೆ ಎನ್ನುವುದು ಅವರ ಲೆಕ್ಕಾಚಾರ. ಅಲ್ಲದೆ ಮಕ್ಕಳು ಸ್ಮಾರ್ಟ್ ಫೋನ್ ಬಿಟ್ಟು ಬೆಡ್ ರೂಂನಲ್ಲಿ ಆಟ, ಮನೆ ಶುಚಿಗೊಳಿಸುವುದು, ನೀರು ಹಾಯಿಸುವುದು ಇತ್ಯಾದಿ ಕೆಲಸಗಳಲ್ಲಿ ಭಾಗಿಯಾಗಲಿ ಎಂದು ಹೆತ್ತವರು ಬಯಸುತ್ತಾರಂತೆ.
ಹೀಗೆ ಹೆತ್ತವರು ಕೊಟ್ಟ ಹಣದಲ್ಲಿ ಏನು ಮಾಡುತ್ತೀರಿ ಎಂದು ಮಕ್ಕಳನ್ನು ಕೇಳಿದಾಗ, ಅವರಲ್ಲಿ ಕೆಲವರು ನಾವು ಫೋನ್ ಆ್ಯಪ್‌ಗಳಿಗೆ, ಟೀವಿ ವೀಡಿಯೋಗಳಿಗೆ, ಸಂಗೀತ ಕೇಳಲು ಖರ್ಚು ಮಾಡುತ್ತೇವೆ ಎಂದು ಅಚ್ಚರಿಯ ಉತ್ತರ ನೀಡಿದ್ದಾರೆ. ಶೇ.40ರಷ್ಟು ಮಂದಿ ಹೆತ್ತವರು ಕೊಟ್ಟ ಹಣದಲ್ಲಿ ಸಿಹಿ ಖರೀದಿಸುತ್ತೇವೆ ಎಂದು ಹೇಳಿದರೆ, ಶೇ.31ರಷ್ಟು ಮಂದಿ ವಿವಿಧ ಆಟಗಳಿಗೆ, ಶೇ.30ರಷ್ಟು ಮಂದಿ ಆಟಿಕೆಗಳಿಗೆ ಖರ್ಚು ಮಾಡುತ್ತೇವೆ ಎಂದು ಹೇಳಿದ್ದಾರಂತೆ. ಸಮಾಧಾನಕರ ಸಂಗತಿಯೆಂದರೆ ಶೇ.70ರಷ್ಟು ಮಂದಿ ನಾವು ಹುಂಡಿಯಲ್ಲಿ ಹಣ ಜೋಪಾನವಾಗಿಡುವುದೂ ಇದೆ ಎಂದು ಹೇಳಿದ್ದಾರಂತೆ!
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.