ಇನ್ನು ಬುಲೆಟ್ ಬೈಕ್ ಸರ್ವೀಸ್ ದರ ಜೇಬಿಗೆ ಹಿತಕರ!
Team Udayavani, Aug 12, 2019, 7:00 PM IST
ಮುಂಬಯಿ: ಬುಲೆಟ್ ಬೈಕ್ ತೆಗೆದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇದ್ದಿದ್ದೇ. ಆದರೆ ಈ ಆಸೆ ಹೇಳಿಕೊಂಡ್ರೆ, ಬೇಡ ಕಣೋ.. ಸರ್ವಿಸ್ ಸಿಕ್ಕಾಪಟ್ಟೆ ಕಾಸ್ಟ್ಲೀ ಅನ್ನೋ ಜನರೂ ಇದ್ದರು. ಇದನ್ನೇ ಗಮನದಲ್ಲಿಟ್ಟುಕೊಂಡು, ಜೇಬಿಗೆ ಹಿತಕರ ಎನಿಸುವಂತೆ ಸರ್ವಿಸ್ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲು ರಾಯಲ್ ಎನ್ ಫೀಲ್ಡ್ ಮುಂದಾಗಿದೆ. ಎನ್ ಫೀಲ್ಡ್ ನ ಈ ಹೊಸ ಯೋಜನೆ ಎನ್ ಫೀಲ್ಡ್, ಕ್ಲಾಸಿಕ್, ಥಂಡರ್ ಬರ್ಡ್ನ ಹೊಸ ಮಾದರಿ ಬೈಕ್ ಗೆ ಅನ್ವಯಿಸಲಿದೆ.
ಬದಲಾವಣೆ ಏನು?
ಇನ್ನು ಬುಲೆಟ್ ಬೈಕ್ ಗಳಲ್ಲಿ ಸರ್ವಿಸ್ ಕಿಲೋಮೀಟರ್ 10 ಸಾವಿರ ಇರಲಿದೆ. ಸದ್ಯ 4 ಸಾವಿರಕ್ಕೊಮ್ಮೆ ಆಯಿಲ್ ಚೇಂಜ್ ಮಾಡುತ್ತಿದ್ದರೆ, ಇನ್ನು 10 ಸಾವಿರ ಕಿ.ಮೀ.ಗೆ ಒಂದು ಬಾರಿ ಆಯಿಲ್ ಚೇಂಜ್ ಮಾಡಿದರೆ ಸಾಕಾಗುತ್ತದೆ. ಇದಕ್ಕಾಗಿ ರಾಯಲ್ ಎನ್ ಫೀಲ್ಡ್ ಹೊಸ ಮಾದರಿಯ ಸೆಮಿ ಸಿಂಥೆಟಿಕ್ ಆಯಿಲ್ ಅನ್ನು ತನ್ನ ಬೈಕ್ ಗಳ ಎಂಜಿನ್ ನಲ್ಲಿ ಬಳಸಲು ಉದ್ದೇಶಿಸಿದೆ. ಇದರೊಂದಿಗೆ ಸರ್ವೀಸ್ ಸಮಯವನ್ನು ಈಗಿನ 3 ತಿಂಗಳು ಅಥವಾ 3/4 ಸಾವಿರ ಕಿ.ಮೀ.ಗೆ ಬದಲಾಗಿ 6 ತಿಂಗಳು ಅಥವಾ 5 ಸಾವಿರ ಕಿ.ಮೀ.ಗೆ ಒಂದು ಬಾರಿ ಮಾಡಿದರೆ ಸಾಕು. ಇದರಿಂದ ಶೇ.40ರಷ್ಟು ಹಣ ಉಳಿತಾಯವಾಗಲಿದೆ ಎಂದು ಎನ್ ಫೀಲ್ಡ್ ಕಂಪೆನಿ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.