ಮಧ್ಯರಾತ್ರಿ ಆಗಮಿಸಿದ ಹೆಬ್ಟಾವು!
ಫ್ಲ್ಯಾಟ್ ನಿವಾಸಿಗಳ ನಿದ್ದೆ ಭಂಗ
Team Udayavani, Aug 12, 2019, 9:28 PM IST
ಉಡುಪಿ: ಹೆಬ್ಟಾವೊಂದರ ಉಪಟಳದಿಂದಾಗಿ ಫ್ಲ್ಯಾಟ್ ನಿವಾಸಿಗಳು ರಾತ್ರಿ ಇಡೀ ನಿದ್ದೆ ಬಿಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.
ಎಂಜಿಎಂ ಕಾಲೇಜು ಬಳಿಯಲ್ಲಿರುವ ಎಸ್‌ಎಸ್ ರೆಸಿಡೆನ್ಸಿಯಲ್ಲಿ ರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಘಟನೆ ನಡೆಯಿತು. ಕಟ್ಟಡದ 4ನೇ ಮಹಡಿ ಏರಿದ ಹೆಬ್ಟಾವು ವೆಂಟಿಲೇಟರ್ ಮೂಲಕ ಕೊಠಡಿ ಸಂಖ್ಯೆ 404ರೊಳಗೆ ಪ್ರವೇಶಿಸಿತ್ತು. ಈ ವೇಳೆ ಭಾರದ ಒತ್ತಡಕ್ಕೆ ಗಾಜು ಒಡೆದ ಕಾರಣ ಮನೆಯವರು ಎಚ್ಚೆತ್ತುಕೊಂಡರು. ನೋಡುವಾಗ ಆಶ್ಚರ್ಯ ಕಾದಿತ್ತು. ಸುಮಾರು 8 ಅಡಿ ಉದ್ದದ ಹೆಬ್ಟಾವು ಅತ್ತಿಂದಿತ್ತ ಹೋಗುತ್ತಿತ್ತು!
ನೆರವಿಗೆ ಬಂದ ಸ್ಥಳೀಯರು
ಫ್ಲ್ಯಾಟ್ ನಿವಾಸಿಗಳ ಈ ಕಾರ್ಯಾಚರಣೆ ರಾತ್ರಿ ಇಡೀ ನಡೆದಿತ್ತು. ಬಳಿಕ ಪಕ್ಕದ ಮನೆಯೊಂದರ ನಿವಾಸಿ ಗೋಪಾಲ್ ಎಂಬವರು ಹಾವನ್ನು ಕೆಳಕ್ಕೆ ಬೀಳಿಸುವಲ್ಲಿ ಯಶಸ್ವಿಯಾದರು. ಬಳಿಕ ಅದನ್ನು ಗೋಣಿಚೀಲಕ್ಕೆ ಹಾಕಿ ಪೆರಂಪಳ್ಳಿ ಬಳಿ ಇರುವ ಕಾಡಿಗೆ ಬಿಡಲಾಯಿತು. ಈ ಎಲ್ಲ ಕಾರ್ಯಾಚರಣೆಗಳು ಮಗಿಯುವಾಗ ಬೆಳಗ್ಗೆ 7 ಸರಿದಿತ್ತು.
4ರಿಂದ 2; 2ರಿಂದ ಮತ್ತೆ 4!
ಆ ಕೊಠಡಿಯಲ್ಲಿದ್ದದ್ದು ಇಬ್ಬರು ಮಾತ್ರ. ಏನು ಮಾಡುವುದೆಂದು ತೋಚದ ಅವರು ಪಕ್ಕದ ಕೊಠಡಿಯವರಿಗೆಲ್ಲ ಮಾಹಿತಿ ನೀಡಿದರು. ಉರಗ ತಜ್ಞರನ್ನು ಸಂಪರ್ಕಿಸುವ ಕೆಲಸ ನಡೆಯಿತಾದರೂ ರಾತ್ರಿ ವೇಳೆಯಾದ ಕಾರಣ ಯಾರು ಕೂಡ ಕರೆ ಸ್ವೀಕರಿಸಲಿಲ್ಲ. ಈ ನಡುವೆ ಹೆಬ್ಟಾವು 4ನೇ ಮಹಡಿಯಿಂದ 2ನೇ ಮಹಡಿಯತ್ತ ಧಾವಿಸಿತು. ಹಾವನ್ನು ಕೆಳಕ್ಕೆ ಬೀಳಿಸುವ ಪ್ರಯತ್ನ ಮಾಡಲಾಯಿತಾದರೂ ಯಶಸ್ವಿಯಾಗಲಿಲ್ಲ. ಜನರು ಉಪಟಳ ಮಾಡುತ್ತಿದ್ದಾರೆ ಎಂದು ಅರಿತುಕೊಂಡೋ ಏನೋ ಹೆಬ್ಟಾವು ಮತ್ತೆ ಸಾಗಿದ್ದು ಅದೇ 4ನೇ ಮಹಡಿಗೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.