42 ಸಾವು, ನಾಲ್ಕು ಲಕ್ಷ ಹೆಕ್ಟೇರ್‌ ಬೆಳೆ ಹಾನಿ

Team Udayavani, Aug 13, 2019, 3:09 AM IST

42-savvu

ಬೆಂಗಳೂರು: ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಆ.1 ರಿಂದ 12 ರವರೆಗೆ ಪ್ರವಾಹ ಪೀಡಿತ 17 ಜಿಲ್ಲೆಗಳಲ್ಲಿ 86 ತಾಲೂಕುಗಳು ಪ್ರವಾಹಕ್ಕೆ ಸಿಲುಕಿವೆ. 42 ಜನ ಜೀವ ಕಳೆದುಕೊಂಡಿದ್ದು, 12 ಜನ ಕಾಣೆಯಾಗಿದ್ದಾರೆ. 548 ಪ್ರಾಣಿಗಳು ಜೀವ ಕಳೆದುಕೊಂಡಿವೆ. ಜನ ಜಾನುವಾರು ಹಾನಿ ಹಾಗೂ ಆಸ್ತಿಪಾಸ್ತಿಗೆ ನಷ್ಟವಾಗಿರುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಮಾಹಿತಿ ಪ್ರಕಟಿಸಿದ್ದು, ಹದಿನೇಳು ಜಿಲ್ಲೆಗಳ 2694 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿಕೊಂಡಿವೆ.

ಪ್ರವಾಹದಲ್ಲಿ ಸಿಲುಕಿದ್ದ 5.81 ಲಕ್ಷ ಜನರನ್ನು ರಕ್ಷಿಸಲಾ ಗಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 3.45 ಲಕ್ಷ ಜನರನ್ನು ರಕ್ಷಿಸಲಾಗಿದೆ. ಬಾಗಲಕೋಟೆಯಲ್ಲಿ 1 ಲಕ್ಷ ಸಂತ್ರಸ್ತರನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ ನಿರಾಶ್ರಿತರಾಗಿರುವ ಜನರಿಗೆ 1181 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದ್ದು, 3.32 ಲಕ್ಷ ಜನರು ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ್ದ 50,595 ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 50,554 ಪ್ರಾಣಿಗಳನ್ನು ರಕ್ಷಿಸಲಾಗಿದ್ದು, 32,305 ಜಾನುವಾರಗಳಿಗೆ ಗೋ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಪ್ರವಾಹದಿಂದ 4 ಲಕ್ಷ 21 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ನಾಶವಾಗಿದ್ದು, 31,800 ಮನೆಗಳು ಜಖಂಗೊಂಡಿವೆ ಎಂದು ಕಂದಾಯ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಸಾವಿಗೀಡಾದ ಪ್ರಾಣಿಗಳು: ಬೆಳಗಾವಿ 133, ಬಾಗಲಕೋಟೆ-29, ಉತ್ತರ ಕನ್ನಡ-31, ಶಿವಮೊಗ್ಗ-24, ಉಡುಪಿ-4, ಚಿಕ್ಕಮಗಳೂರು-2, ಗದಗ-25, ಮೈಸೂರು-4, ಧಾರವಾಡ-187, ಹಾವೇರಿ-109 ಜಾನುವಾರುಗಳು ಸಾವಿಗೀಡಾಗಿವೆ.

ತಾಲೂಕುಗಳು: ಬೆಳಗಾವಿ-10, ಬಾಗಲಕೋಟೆ-6, ವಿಜಯಪುರ-4,ರಾಯ ಚೂರು-3, ಯಾದಗಿರಿ-3, ಉತ್ತರ ಕನ್ನಡ-11, ದಕ್ಷಿಣ ಕನ್ನಡ-5, ಶಿವಮೊಗ್ಗ-7, ಉಡುಪಿ-3, ಕೊಡಗು-3, ಚಿಕ್ಕಮಗ ಳೂರು-4, ಹಾಸನ-8, ಗದಗ-3, ಮೈಸೂರು-3, ಧಾರವಾಡ-5, ಹಾವೇರಿ-6, ಕಲಬುರಗಿ-2 ತಾಲೂಕು ಗಳಿಗೆ ಹಾನಿಗೊಳಗಾಗಿವೆ.

ಹಳ್ಳಿಗಳು: ಬೆಳಗಾವಿ-365, ಬಾಗಲ ಕೋಟೆ-173, ವಿಜಯಪುರ-73, ರಾಯ ಚೂರು-29, ಯಾದಗಿರಿ-8, ಉತ್ತರ ಕನ್ನಡ-216, ದಕ್ಷಿಣ ಕನ್ನಡ-50, ಶಿವಮೊಗ್ಗ-556, ಉಡುಪಿ-4, ಕೊಡಗು-58, ಚಿಕ್ಕಮಗಳೂರು-72, ಹಾಸನ- 655, ಗದಗ-175, ಮೈಸೂರು- 51, ಧಾರವಾಡ-21, ಹಾವೇರಿ-138, ಕಲಬುರಗಿ-50 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ.

ಜನರ ರಕ್ಷಣೆ: ಬೆಳಗಾವಿ-3.45 ಲಕ್ಷ, ಬಾಗಲಕೋಟೆ-1 ಲಕ್ಷ, ವಿಜಯಪುರ- 8650, ರಾಯಚೂರು-2639, ಯಾದಗಿರಿ-318, ಉತ್ತರ ಕನ್ನಡ-3088, ದಕ್ಷಿಣ ಕನ್ನಡ-3516, ಶಿವಮೊಗ್ಗ-6200, ಕೊಡಗು-4600, ಚಿಕ್ಕಮಗಳೂರು-980, ಗದಗ-51171, ಮೈಸೂರು-4889, ಧಾರವಾಡ-35680, ಹಾವೇರಿ-14350 ಜನರನ್ನು ರಕ್ಷಿಸಲಾಗಿದೆ.

ಸಾಂತ್ವನ ಕೇಂದ್ರಗಳು: ಬೆಳಗಾವಿ-436, ಬಾಗಲಕೋಟೆ-203, ವಿಜಯಪುರ-7, ರಾಯಚೂರು-15, ಯಾದಗಿರಿ-15, ಉತ್ತರ ಕನ್ನಡ-93, ದಕ್ಷಿಣ ಕನ್ನಡ-30, ಶಿವಮೊಗ್ಗ-25, ಉಡುಪಿ-0, ಕೊಡಗು-44, ಚಿಕ್ಕಮಗಳೂರು-12, ಹಾಸನ-11, ಗದಗ-40, ಮೈಸೂರು-32, ಧಾರವಾಡ-81, ಹಾವೇರಿ-137 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದೆ.

ಬೆಳೆ ಹಾನಿ: ಬೆಳಗಾವಿ-1.57 ಲಕ್ಷ ಹೆ., ಬಾಗಲಕೋಟೆ-29,765, ವಿಜಯಪುರ -16642, ರಾಯಚೂರು-2821, ಯಾದಗಿರಿ-2360, ಉತ್ತರ ಕನ್ನಡ- 10,100, ದಕ್ಷಿಣ ಕನ್ನಡ-14, ಶಿವಮೊಗ್ಗ- 18319, ಉಡುಪಿ-1171, ಕೊಡಗು-0, ಚಿಕ್ಕಮಗಳೂರು-1483, ಹಾಸನ- 2485, ಗದಗ-6172, ಮೈಸೂರು-201, ಧಾರವಾಡ-1.07 ಲಕ್ಷ, ಹಾವೇರಿ- 59773, ಕಲಬುರಗಿ-5830 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಮನೆ ಹಾನಿ: ಬೆಳಗಾವಿ-9748, ಬಾಗಲಕೋಟೆ-ಪರಿಶೀಲನೆಯಲ್ಲಿದೆ. ಉತ್ತರ ಕನ್ನಡ-2072, ದಕ್ಷಿಣ ಕನ್ನಡ-432, ಶಿವಮೊಗ್ಗ-805, ಉಡುಪಿ-455, ಕೊಡಗು-16, ಚಿಕ್ಕಮಗಳೂರು-327, ಹಾಸನ-763, ಗದಗ-1853, ಮೈಸೂರು-832, ಧಾರವಾಡ-7931, ಹಾವೇರಿ-6566 ಮನೆಗಳು ಹಾನಿಗೊಳಗಾಗಿವೆ.

ಎಲ್ಲಿ, ಎಷ್ಟು ಜೀವಹಾನಿ?
ಬೆಳಗಾವಿ 12
ಬಾಗಲಕೋಟೆ 2
ಉತ್ತರ ಕನ್ನಡ 4
ದಕ್ಷಿಣ ಕನ್ನಡ 2
ಶಿವಮೊಗ್ಗ 3
ಉಡುಪಿ-2
ಕೊಡಗು-7
ಚಿಕ್ಕಮಗಳೂರು 5
ಮೈಸೂರು 2
ಧಾರವಾಡ 3

ಕಾಣೆಯಾದವರು: ಬೆಳಗಾವಿ-2, ಕೊಡಗು-8, ಚಿಕ್ಕಮಗಳೂರು-1, ಹಾವೇರಿ-1 ಕಾಣೆಯಾಗಿದ್ದಾರೆ.

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.