ಕರಾವಳಿ ಭಾಗದ ಅಪರಾಧ ಸುದ್ದಿಗಳು


Team Udayavani, Aug 13, 2019, 5:02 AM IST

Crime-545

ಜಾನುವಾರು ಕಳವಿಗೆ ಯತ್ನ: ಆರು ಮಂದಿ ಬಂಧನ
ಬೈಂದೂರು: ರಸ್ತೆ ಬದಿ ಮಲಗಿರುವ ಜಾನುವಾರುಗಳನ್ನು ಕಳವು ನಡೆಸಲು ಟವೇರ ವಾಹನದಲ್ಲಿ ಹೊಂಚು ಹಾಕುತ್ತಿದ್ದ ತಂಡದ 6 ಮಂದಿ ಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಎಸ್‌ಐ ತಿಮ್ಮೇಶ ಬಿ.ಎನ್‌.ಅವರಿಗೆ ರವಿವಾರ ರಾತ್ರಿ ಸಿಕ್ಕಿದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಾಹನ ಸಹಿತ ಬಂಧಿಸಲಾಗಿದೆ.

ಶಿರೂರು ತೂದಳ್ಳಿಯ ಉದೂರು ಜಂಕ್ಷನ್‌ ಬಳಿಯಲ್ಲಿ ಒಂದು ಸಿಲ್ವರ್‌ ಬಣ್ಣದ ವಾಹನದಲ್ಲಿ ಆರೋಪಿಗಳು ಮಾರಕಾಸ್ತ್ರ ಸಹಿತ ಸುತ್ತಾಡುತ್ತಿದ್ದರು. ಆ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ ಹಗ್ಗ, ದೊಣ್ಣೆ, ಕತ್ತಿ ಮುಂತಾದವುಗಳಿದ್ದವು. ಈ ಸಂಬಂಧ ವಿಚಾರಿಸಿದಾಗ ರಸ್ತೆ ಬದಿಯಲ್ಲಿ ಮಲಗಿರುವ ದನಗಳನ್ನು ಕಳವು ಮಾಡಲು ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಅವರನ್ನು ವಾಹನ ಸಹಿತ ಬಂಧಿಸಲಾಗಿದೆ.

ಶಿರೂರಿನ ಬುಖಾರಿ ಕಾಲನಿಯ ಮಹಮ್ಮದ್‌ ಮುಬೀನ್‌ (29), ಯುನೂಸ್‌ ಮುಗುಡಿ (29), ಮಹಮ್ಮದ್‌ ಅರಫಾತ್‌ (25), ಮೌಲಾನಾ ಖಾಸಿಂ (29), ಶಬಾಜ್‌ ಮಹಮ್ಮದ್‌ ಹನೀಫ್ (22) ಮತ್ತು ಶಿರೂರು ಮೈದಿನಪುರದ ಶೇಖ್‌ ಮಹಮ್ಮದ ಅಲ್ತಾಫ್ (30) ಬಂಧಿತರು.ಇವರಿಂದ ಹಗ್ಗ,ದೊಣ್ಣೆ,ಕತ್ತಿ ಮುಂತಾದವುಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಸ್ಕತ್ತೂರು: ಆತ್ಮಹತ್ಯೆ
ಕುಂದಾಪುರ: ಹೆಸ್ಕತ್ತೂರು ಗ್ರಾಮ ಅರೆಕಲ್ಲುಮನೆಯ ಸಂತೋಷ ಶೆಟ್ಟಿ (44) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಅವರು ಆ. 9ರಂದು ಸಂಜೆ 6 ಗಂಟೆಗೆ ಮನೆಗೆ ಬಂದಿದ್ದರು. ಆ. 11ರಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಎಲ್ಲಿಗೋ ಹೋದವರು ವಾಪಸ್‌ ಬಂದಿರಲಿಲ್ಲ. ಹುಡುಕಾಡಿದಾಗ ಮನೆ ಹತ್ತಿರದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದುದು ಕಂಡು ಬಂತು.

ಮೃತರು ಮೊದಲು ಸ್ವಂತ ಹೊಟೇಲ್‌ ಹೊಂದಿದ್ದರು. ಈಗ ಸರಿಯಾದ ಕೆಲಸ ಇಲ್ಲದೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರ ಸತೀಶ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.

ಮಣಿಪಾಲ: ಪಬ್‌ನಲ್ಲಿ ದಾಂಧಲೆ; ಹಲ್ಲೆ ಆರೋಪ
ಉಡುಪಿ: ಮಣಿಪಾಲದ ವಿದ್ಯಾರತ್ನ ನಗರದ ಪಬ್‌ನಲ್ಲಿ ಆ.11ರಂದು ತಡರಾತ್ರಿ ದಾಂಧಲೆ, ಹಲ್ಲೆ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ.

ನಾಲ್ಕು ಕಾರುಗಳಲ್ಲಿ ಬಂದ 10-12 ಮಂದಿಯನ್ನು ಪಬ್‌ನ ಒಳಗೆ ಬಿಡದ ಕಾರಣ ಆ ತಂಡ ಪಬ್‌ನ ಬೌನ್ಸರ್‌ಗಳಾದ ಮುಕೇಶ್‌, ನಿಖೀಲ್‌ ಮತ್ತು ಪ್ರಣೀತ್‌ ಅವರಿಗೆ ಬಿಯರ್‌ ಬಾಟಲಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಪಬ್‌ನ ಅಕ್ವೇರಿಯಂ, ಕಂಪ್ಯೂಟರ್‌, ಬಾರ್‌ ಕೌಂಟರ್‌ಗಳನ್ನು ಕಲ್ಲು ಮತ್ತು ಬಿಯರ್‌ ಬಾಟಲಿಗಳಿಂದ ಹಾನಿಗೊಳಿಸಿದ್ದಾರೆ. ಅಲ್ಲದೆ ಚಿನ್ನದ ಸರವನ್ನು ಸೆಳೆದೊಯ್ದಿದ್ದಾರೆ ಎಂದು ಬಾರ್‌ ಅನ್ನು ಲೀಸ್‌ ಪಡೆದು ನಡೆಸುತ್ತಿರುವ ಉಪ್ಪೂರಿನ ಪ್ರಜ್ವಲ್‌ ಅವರು ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.

ಬಾಟಲಿಯಿಂದ ಹಲ್ಲೆ; ಜೀವಬೆದರಿಕೆ
ಉಡುಪಿ: ಕಟಪಾಡಿ ಮೂಡಬೆಟ್ಟಿನ ಚೇತನ್‌ರಾಜ್‌ ಶೆಟ್ಟಿ ಅವರಿಗೆ ಮಣಿಪಾಲದಲ್ಲಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಆ. 10ರಂದು ರಾತ್ರಿ 11.45ಕ್ಕೆ ಮಣಿಪಾಲ ವಿದ್ಯಾರತ್ನ ನಗರದ ಬಾರ್‌ನಲ್ಲಿ ಊಟ ಮುಗಿಸಿ ಹೊರಗಡೆ ನಿಂತಿದ್ದಾಗ ವರುಣ್‌ ಹೆಗ್ಡೆ, ಬಿಪಿನ್‌ ರೈ ಹಾಗೂ ಇತರರು ಬಂದು ಬಿಯರ್‌ ಬಾಟಲಿಯಿಂದ ಹೊಡೆದು, ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಚೇತನರಾಜ್‌ ಶೆಟ್ಟಿ ಅವರು ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.

ಪರಿಸರವಾದಿ ಶಶಿಧರ ಶೆಟ್ಟಿ ವಿರುದ್ಧ ಪ್ರಕರಣ ದಾಖಲು
ಮಾಜಿ ಕಾರ್ಪೊರೇಟರ್‌ಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪ
ಮಂಗಳೂರು: ಮಾಜಿ ಕಾರ್ಪೊರೇಟರ್‌ ನಾಗವೇಣಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಬ್ಬಿ ಸಿದ ಹಾಗೂ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ ಆರೋಪದಡಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ
(ಎನ್‌ಇಸಿಎಫ್) ಸಂಚಾಲಕ ಶಶಿಧರ ಶೆಟ್ಟಿ ಅವರ ವಿರುದ್ಧ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ನಾನು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿ ನಡೆಸಿ, ಹೆಚ್ಚಿನ ಬಿಲ್‌ ಮಂಜೂರು ಮಾಡಿ ಅಧಿಕಾರ ದುರುಪಯೋಗ ಮಾಡಿದ್ದೇನೆ ಎಂದು ಶಶಿಧರ್‌ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರ ಡಿದ್ದಲ್ಲದೆ, ಸುಳ್ಳು ದಾಖಲೆ ತೋರಿಸಿ ಮಾನಹಾನಿ ಮಾಡಿದ್ದಾರೆ. ಆ.11ರಂದು ನಿಜ ವಿಷಯ ಮನವರಿಕೆ ಮಾಡಲು ಅವರ ಮನೆಗೆ ಹೋಗಿದ್ದಾಗ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ. ಇನ್ನೊಂದು ಸಲ ಬಂದರೆ ಶೂಟ್‌ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ನಾಗವೇಣಿ ದೂರಿನಲ್ಲಿ ವಿವರಿಸಿದ್ದಾರೆ.

ಈ ಕುರಿತು ನಗರ ಪೊಲೀಸ್‌ ಆಯುಕ್ತರಿಗೆ, ಮಹಿಳಾ ಆಯೋಗ, ಮಾನವ ಹಕ್ಕುಗಳ ನಿಗಮ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಿಗೂ ನಾಗವೇಣಿ ದೂರು ಸಲ್ಲಿಸಿದ್ದಾರೆ.

ಐವರ ಬಂಧನ: ಬೈಕ್‌,ಸ್ಕೂಟರ್‌ ವಶ
ಮಣಿಪಾಲ ಸಮೀಪದ ಸಗ್ರಿ ಸುಲಿಗೆ ಪ್ರಕರಣ
ಉಡುಪಿ: ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಸಗ್ರಿ ಶಾಲೆಗೆ ಹೋಗುವ ರಸ್ತೆಯಲ್ಲಿ ಆ. 9ರ ತಡರಾತ್ರಿ 1.15ಕ್ಕೆ ಬೈಕಿನಲ್ಲಿ ಹೋಗುತ್ತಿದ್ದ ಮೂಡುಸಗ್ರಿ ನಿವಾಸಿ ನರಸಿಂಹ ನಾಯಕ್‌ ಅವರಿಗೆ ಹಲ್ಲೆ ಮಾಡಿ, ಅವರಲ್ಲಿದ್ದ ಸೊತ್ತುಗಳನ್ನು ದರೋಡೆಗೈದ ಆರೋಪದಲ್ಲಿ ಐವರನ್ನು ರವಿವಾರ ಬಂಧಿಸಲಾಗಿದೆ. ಬಂಧಿತರಲ್ಲಿ ಓರ್ವ ಅಪ್ರಾಪ್ತ ವಯಸ್ಸಿನ ಬಾಲಕನೂ ಸೇರಿದ್ದಾನೆ.

ಕಟಪಾಡಿ ವಿನೋಬಾ ನಗರ ಕೊರಗಜ್ಜ ದೈವಸ್ಥಾನ ಸಮೀಪದ ನಿವಾಸಿ ಆತೀಶ್‌ ಡಿ’ಸಿಲ್ವಾ (22), ಕುರ್ಕಾಲು ಪಗಡಿಗುತ್ತಿನ ಪ್ರೇಮನಾಥ್‌ ಯಾನೆ ರೇವ್‌ (19), ಕೊಡವೂರು ಗರಡಿಮಜಲಿನ ಯೋಗೀಶ್‌ (19) ಮತ್ತು ಆರೂರು ಬಂಗ್ಲೆಗುಡ್ಡೆಯ ಸಂದೇಶ್‌ (18) ಹಾಗೂ ಇನ್ನೋರ್ವ (ಕಾನೂನು ಸಂಘರ್ಷಕ್ಕೆ ಒಳಗಾದ) ಬಾಲಕ ಬಂಧಿತರು.

ಬಂಧಿತರಿಂದ 1 ಕೆಟಿಎಂ ಬೈಕ್‌, 1 ಸ್ಕೂಟರ್‌, 1 ಮೊಬೈಲ್‌ ಹಾಗೂ ನರಸಿಂಹ ನಾಯಕ್‌ ಅವರಿಗೆ ಸೇರಿದ ದಾಖಲೆಪತ್ರಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ನರಸಿಂಹ ನಾಯಕ್‌ ಅವರನ್ನು ಅಡ್ಡಗಟ್ಟಿ ಕೋಲು ಹಾಗೂ ಹೆಲ್ಮೆಟ್‌ನಿಂದ ಹೊಡೆದು 24 ಗ್ರಾಂ ತೂಕದ, 70,000 ರೂ. ಮೌಲ್ಯದ ಚಿನ್ನದ ಸರ, 29,000 ರೂ. ಮೌಲ್ಯದ ಮೊಬೈಲ್‌, ಎಟಿಎಂ ಕಾರ್ಡ್‌, ಆಧಾರ್‌ ಕಾರ್ಡ್‌, ವೋಟರ್‌ ಐಡಿ, 31,000 ರೂ. ನಗದು ಇದ್ದ ಪರ್ಸನ್ನು ಸುಲಿಗೆ ಮಾಡಲಾಗಿತ್ತು.

ಎಸ್‌ಪಿ ನಿಶಾ ಜೇಮ್ಸ್‌, ಎಎಸ್‌ಪಿ ಕುಮಾರ ಚಂದ್ರ ಹಾಗೂ ಡಿವೈಎಸ್‌ಪಿ ಟಿ. ಆರ್‌. ಜೈಶಂಕರ್‌ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಣಿಪಾಲ ಠಾಣಾ ಪ್ರಭಾರ ಸಿಐ ಸಂಪತ್‌ ಕುಮಾರ್‌, ಎಸ್‌ ಐ ಶ್ರೀಧರ ನಂಬಿಯಾರ್‌, ಎಎಸ್‌ಐ ಉಮೇಶ್‌ ಜೋಗಿ, ದಿವಾಕರ್‌ ಶರ್ಮ, ಸಿಬಂದಿ ವರ್ಗದ ಅಬ್ದುಲ್‌ ರಜಾಕ್‌, ಪ್ರಸನ್ನ ಕುಮಾರ್‌, ಥಾಮ್ಸನ್‌, ಪ್ರವೀಣ್‌, ಸಂತೋಷ, ಆದರ್ಶ, ಜೀಪು ಚಾಲಕರಾದ ಸುರೇಶ್‌ ನಾಯ್ಕ, ಸುದೀಪ್‌ ಮತ್ತು ಸತೀಶ್‌ ಪಾಲ್ಗೊಂಡಿದ್ದರು.

ಲೈಂಗಿಕ ಚುಡಾವಣೆ ಪ್ರಕರಣದಲ್ಲೂ ಭಾಗಿ ಬಂಧಿತರ ಪೈಕಿ ಆತೀಶ್‌ ಡಿ’ ಸಿಲ್ವಾ, ಸಂದೇಶ್‌ ಹಾಗೂ ಬಾಲಕ ಮಣಿಪಾಲ ಠಾಣೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿಯ ಲೈಂಗಿಕ ಚುಡಾವಣೆ ಪ್ರಕರಣದಲ್ಲೂ ಭಾಗಿ ಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಹಾರಾಡಿ: ನೇಣು ಬಿಗಿದು ಆತ್ಮಹತ್ಯೆ
ಬ್ರಹ್ಮಾವರ: ಹಾರಾಡಿ ಗ್ರಾಮದ ಮೂಡುಬೆಟ್ಟಿನ ಕೃಷ್ಣ ಪೂಜಾರಿ (40) ಅವರು ರವಿವಾರ ಮನೆ ಹಿಂದಿರುವ ಹುಣಸೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಗುಲ್ಬರ್ಗಾದ ಸುರಪುರದಲ್ಲಿ ಹೊಟೇಲ್‌ ಕಾರ್ಮಿಕರಾ ಗಿದ್ದರು. ಸುಮಾರು ಒಂದು ತಿಂಗಳ ಹಿಂದೆ ಊರಿಗೆ ಬಂದಿದ್ದ ಅವರು ವಿಪರೀತ ಮದ್ಯಸೇವನೆ ಮಾಡುತ್ತಿದ್ದರು ಎನ್ನಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾರ್ಕಳದಲ್ಲಿ ವಿದ್ಯುತ್‌ ಸ್ಪರ್ಶ: ಎರಡು ದನ ಸಾವು
ಅಜೆಕಾರು: ಬೈಲೂರು ಸಮೀಪದ ಜಾರ್ಕಳದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್‌ ತಂತಿಗಳನ್ನು ಸ್ಪರ್ಶಿಸಿ ಎರಡು ದನಗಳು ಸಾವಿ ಗೀಡಾದ ಘಟನೆ ಸೋಮ ವಾರ
ಸಂಭವಿಸಿದೆ.

ಶಶಿಧರ ಕಿಣಿ ಎಂಬವರ ಮನೆಯ ಬಳಿ ವಿದ್ಯುತ್‌ ತಂತಿಗಳು ಕಡಿದು ಬಿದ್ದಿತ್ತು. ಸ್ಥಳೀಯ ನಿವಾಸಿ ಕೊರಪಳು ಪೂಜಾರಿ ಅವರ ಮೇಯಲು ಬಿಟ್ಟಿದ್ದ ದನಗಳು ಈ ತಂತಿಯನ್ನು ಸ್ಪರ್ಶಿಸಿ ಮೃತಪಟ್ಟಿವೆ. ದನದ ಮಾಲ ಕ ರಿಗೆ ಸುಮಾರು 40 ಸಾ. ರೂ. ನಷ್ಟ ಅಂದಾಜಿಸಲಾಗಿದೆ.

ಶಿಕ್ಷಕಿ ಜಾನಕಿ ಕೊಲೆ ಪ್ರಕರಣ: ವಿಚಾರಣೆ ಆರಂಭ
ಕಾಸರಗೋಡು: ಹೊಸದುರ್ಗ ತಾಲೂಕಿನ ಚೀಮೇನಿ ಪುಲಿಯನ್ನೂರಿನ ನಿವೃತ್ತ ಅಧ್ಯಾಪಿಕೆ ಪಿ.ವಿ. ಜಾನಕಿ (67) ಅವರನ್ನು ಕೊಲೆಗೈದು, ಪತಿ ನಿವೃತ್ತ ಅಧ್ಯಾಪಕ ಕಳತ್ತರ ಕೃಷ್ಣನ್‌ (70) ಅವರನ್ನು ಕೊಲೆಗೈಯಲು ಯತ್ನಿಸಿದ ಪ್ರಕರಣದ ವಿಚಾರಣೆ ಕಾಸರಗೋಡು ಪ್ರಿನ್ಸಿಪಲ್‌ ಜಿಲ್ಲಾ ಸೆಶನ್ಸ್‌ ನ್ಯಾಯಾಲಯದಲ್ಲಿ ಆರಂಭಗೊಂಡಿತು. 2017ರ ಡಿ. 13ರಂದು ರಾತ್ರಿ ಘಟನೆ ನಡೆದಿತ್ತು.

ಅಕ್ರಮ ಜಾನುವಾರು ಸಾಗಾಟ: ಆರೋಪಿಗಳು ಪರಾರಿ
ಬೈಂದೂರು: ಶಿರೂರು ಮಾರ್ಕೆಟ್‌ ಕಡೆಯಿಂದ ಟಾಟಾ ಏಸ್‌ ವಾಹನದಲ್ಲಿ ಬೈಂದೂರು ಕಡೆಗೆ ಅಕ್ರಮವಾಗಿ ಮೂರು ಗಂಡು ಕರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ವಾಹನ ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿ ಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಎಸ್‌ಐ ತಿಮ್ಮೇಶ ಬಿ. ಎನ್‌. ನೇತೃತ್ವದಲ್ಲಿ ಪೊಲೀಸರು ಕೋಣ್ಮಕ್ಕಿಯಲ್ಲಿ ಈ ಕಾರ್ಯಾ ಚರಣೆ ನಡೆಸಿದ್ದಾರೆ. ಪೊಲೀಸ್‌ ಜೀಪನ್ನು ನೋಡಿ ಆರೋ ಪಿಗಳು ಜಾನುವಾರು ಸಹಿತ ವಾಹನವನ್ನು ತೊರೆದು ಪರಾರಿಯಾದರು.

ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಮೂರು ಕರುಗಳ ಕಾಲನ್ನು ಹಿಂಸಾತ್ಮಕವಾಗಿ ಕಟ್ಟಿರುವುದು ಕಂಡು ಬಂತು. ಸುಮಾರು 15 ಸಾ.ರೂ. ಮೌಲ್ಯದ ಕರು ಗಳು ಮತ್ತು 4 ಲ.ರೂ. ಮೌಲ್ಯದ ವಾಹನವನ್ನು ವಶಕ್ಕೆ ಪಡೆ ದು ಕೊಳ್ಳಲಾಗಿದೆ. ಜಾನುವಾರುಗಳನ್ನು ಕದ್ದು ತಂದಿರ ಬೇಕು ಎಂದು ಶಂಕಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಅನಾಥ ಮಹಿಳೆ ಸಾವು: ಸೂಚನೆ
ವಿಟ್ಲ: ಪತಿ ಹಾಗೂ ಮಕ್ಕಳಿಂದ ದೂರ ಆಗಿದ್ದ ಮಹಿಳೆ ಯೊಬ್ಬರು ಅನಾ ರೋಗ್ಯದಿಂದ ಮೃತ ಪಟ್ಟಿದ್ದು, ಆಕೆಯ ಮೃತದೇಹವನ್ನುಪಡೆ ಯಲು ವಾರಸು ದಾರರು ವಿಟ್ಲ ಪೊಲೀಸ್‌ ಠಾಣೆಗೆ ಆಗಮಿಸಬೇಕೆಂದು ಠಾಣಾಧಿಕಾರಿ ವಿನಂತಿಸಿದ್ದಾರೆ.

ಮೂಲತಃ ಬಳ್ಳಾರಿ ಮೂಲದ ಹಾಗೂ ಪ್ರಸ್ತುತ ಇಡಿRದು ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ, ಈರಣ್ಣ ಗೌಡ ಅವರ ಪತ್ನಿ ಪಾರ್ವತಮ್ಮ ಯಾನೆ ಪದ್ಮಾವತಿ ಮೃತಪಟ್ಟವರು. ಈಕೆಯ ಪತಿ ಈರಣ್ಣ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ವರ್ಷಗಳ ಹಿಂದೆ ಆತನು ಪತ್ನಿ ಹಾಗೂ ಮೂವರು ಪುತ್ರರನ್ನು ತೊರೆದಿದ್ದಾನೆ ಎನ್ನಲಾಗಿದೆ. 1989ರಲ್ಲಿ ಪುತ್ರರಾದ ಈರಣ್ಣ, ಗೋವರ್ಧನ ಹಾಗೂ ನಾಗರಾಜ್‌ ಅವರು ಕೂಡ ಇವರಿಂದ ದೂರವಾಗಿದ್ದರು. ಬಳಿಕ ಆಕೆ ಹೊಟ್ಟೆಪಾಡಿಗಾಗಿ ಅಲೆದಾಡುತ್ತ ಇಡಿRದು ಗ್ರಾಮದ ಕೋಲ್ಪೆಯ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು.
ಆಕೆಯ ಬಳಿಯಿರುವ ಆಧಾರ್‌ ಕಾರ್ಡ್‌ನಲ್ಲಿ ಆಕೆಯ ವಿಳಾಸ ಹಾಸನ ಜಿಲ್ಲೆ ಎಂದು ನಮೂದಾಗಿದೆ. ಮೃತದೇಹವನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸ ಲಾಗಿದೆ. ವಾರಸುದಾರರು ವಿಟ್ಲ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

1-moidin

ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್‌ ಬಾವ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.