ಆಲಮಟ್ಟಿಯಿಂದ 5.70 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ


Team Udayavani, Aug 13, 2019, 1:58 PM IST

vp-tdy-1

ಆಲಮಟ್ಟಿ: ಲಾಲ್ ಬಹಾದ್ದೂರ ಶಾಸ್ತ್ರಿ ಆಣೆಕಟ್ಟಿನಿಂದ ಸೋಮವಾರ 5.70 ಲಕ್ಷ ಕ್ಯೂಸೆಕ್‌ ನೀರು ನದಿ ಪಾತ್ರಕ್ಕೆ ಬಿಡಲಾಯಿತು.

ಆಲಮಟ್ಟಿ: ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಒಳ ಹರಿವು ಮತ್ತೆ ಹೆಚ್ಚಿದ್ದು ನದಿ ಪಾತ್ರಕ್ಕೆ ಬಿಡುವ ನೀರು ಮತ್ತೆ ಹೆಚ್ಚಾಗಿ ಕೃಷ್ಣೆ ದಡದಲ್ಲಿರುವ ಗ್ರಾಮಗಳ ನಾಗರಿಕರ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಮಹಾರಾಷ್ಟ್ರದ ಧೂಮ, ವಾರಣಾ, ಉರ್ಮೋದಿ, ತರಾಳಿ, ಕೊಯ್ನಾ, ಯವತಿ ಮಸೋಳಿ, ಪಂಚಗಂಗಾ, ದೂದಗಂಗಾ ರಾಜ್ಯದ ಘಟಪ್ರಭಾ ನದಿಗಳ ಉಗಮ ಸ್ಥಾನ ಹಾಗೂ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ಎಲ್ಲ ನದಿಗಳು ತುಂಬಿ ಹರಿದು ಕೃಷ್ಣೆಯನ್ನು ಸೇರುತ್ತವೆ. ಇದರಿಂದ ಕೃಷ್ಣೆ ಪ್ರವಾಹ ಅಪಾಯಮಟ್ಟ ಮೀರಿ ಹರಿಯುವಂತಾಗಿದ್ದು, ಕಳೆದ ಕೆಲ ದಿನಗಳಿಂದ ಗಡಿ ಭಾಗದ ರಾಜಾಪುರ ಬ್ಯಾರೇಜ್‌, ಹಿಪ್ಪರಗಿ ಬ್ಯಾರೇಜ್‌ಗಳಿಗೆ ಕೃಷ್ಣೆ ನೀರು ವ್ಯಾಪಕವಾಗಿ ಹರಿದು ಬಂದು ಬ್ಯಾರೇಜುಗಳಿಂದ ನೀರು ಹೊರ ಹೋಗಲು ಗೇಟುಗಳ ಪ್ರಮಾಣ ಕಡಿಮೆಯಿದ್ದು ಬ್ಯಾರೇಜುಗಳ ಹಿಂಭಾಗ ಹಾಗೂ ಮುಂಭಾಗದ ಗ್ರಾಮಗಳಲ್ಲಿ ನೀರು ನುಗ್ಗಿದ್ದರಿಂದ ಕೃಷ್ಣಾ ನದಿ ದಡದಲ್ಲಿರುವ ರೈತರ ಬೆಳೆಗಳು ಜಲಾವೃತವಾಗಿರುವುದಲ್ಲದೇ ಗ್ರಾಮಗಳಲ್ಲಿ ವ್ಯಾಪಕ ನೀರು ಬಂದು ಗ್ರಾಮಸ್ಥರು ಗ್ರಾಮಗಳನ್ನು ತೊರೆಯುವಂತಾಗಿದೆ.

ಇನ್ನು ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಹಿರಿಯ ಅಧಿಕಾರಿಗಳು ನೀರು ಕಡಿಮೆಯಾಗುತ್ತದೆ ಎಂದು ಹೇಳುತ್ತಿದ್ದರೂ ಕೂಡ ಜಲಾಶಯಕ್ಕೆ 6,11,759 ಕ್ಯೂಸೆಕ್‌ ನೀರು ಒಳ ಹರಿವಿದೆ. ಇದರಿಂದ 5.70 ಲಕ್ಷ ಕ್ಯೂಸೆಕ್‌ ನೀರನ್ನು ನದಿ ಪಾತ್ರಕ್ಕೆ ಬಿಟ್ಟಿರುವುದರಿಂದ ಮುಂಭಾಗದಲ್ಲಿರುವ ಅರಳದಿನ್ನಿ, ಯಲಗೂರ, ಕಾಶಿನಕುಂಟಿ, ಬೂದಿಹಾಳ ಪಿ.ಎನ್‌, ಮಸೂತಿ, ಬಳಬಟ್ಟಿ, ಮುದೂರ ಸೇರಿದಂತೆ ಸುಮಾರು ಜಿಲ್ಲೆಯ 29 ಗ್ರಾಮಗಳು ಹಾಗೂ ಬಾಗಲಕೋಟೆ ಜಿಲ್ಲೆಯ 30ಕ್ಕೂ ಅಧಿಕ ಗ್ರಾಮಗಳ ರೈತರ ಜಮೀನಿನಲ್ಲಿರುವ ಬೆಳೆಗಳು ಕೃಷ್ಣಾರ್ಪಣವಾಗಿವೆ.

ಈಗಾಗಲೇ ಮಸೂತಿ, ಗಂಗೂರ ಸೇರಿದಂತೆ ಕೆಲ ಗ್ರಾಮಗಳು ಜಲಾವೃತವಾಗಿದ್ದು ಶಾಸ್ತ್ರಿ ಸಾಗರದ ಕೂಗಳತೆಯಲ್ಲಿರುವ ಅರಳದಿನ್ನಿ ಗ್ರಾಮದ ಸಮೀಪದಲ್ಲಿ ಕೃಷ್ಣೆ ನೆರೆ ಹಾವಳಿ ನೀರು ಅರಳದಿನ್ನಿ-ಯಲಗೂರ ರಸ್ತೆಯನ್ನು ಜಲಾವೃತಗೊಳಿಸಿದ್ದರಿಂದ ಗ್ರಾಮಕ್ಕೆ ನೀರು ಬರಬಹುದೆಂದು ನಾಗರಿಕರು ಆತಂಕ ಪಡುವಂತಾಗಿದೆ.

ಸ್ಥಳಾಂತರಿಸಿ: ಗ್ರಾಮವು ಆಲಮಟ್ಟಿ ಜಲಾಶಯದ ಮುಂಭಾಗದಲ್ಲಿದ್ದು ಯಾವಾಗಲಾದರೂ ಅನಾಹುತವಾಗಬಹುದು. ಆದ್ದರಿಂದ ಅನಾಹುತಗಳು ಸಂಭವಿಸುವುದಕ್ಕಿಂತ ಮುಂಚಿತವಾಗಿಯೇ ಗ್ರಾಮವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಅಲ್ಲದೇ ಪ್ರತಿ ಮಳೆಗಾಲದಲ್ಲಿ ಸ್ವಲ್ಪ ಮಳೆ ಹೆಚ್ಚಾದರೆ ಸಾಕು ಮತ್ತು ಕೃಷ್ಣಾ ನದಿಗೆ ಪ್ರವಾಹ ಬಂದಾಗಲೊಮ್ಮೆ ನಾರಾಯಣಪುರದ ಬಸವ ಸಾಗರದ ಜಲಾಶಯದಿಂದ ಹಿನ್ನೀರು ಅರಳದಿನ್ನಿಯ ರೈತರ ಬೆಳೆಗಳು ಜಲಾವೃತವಾಗುವುದು ವಾಡಿಕೆಯಾಗಿದೆ. ಇನ್ನು ಪರಿಹಾರವೂ ಅಷ್ಟಕ್ಕಷ್ಟೇ ದೊರೆಯುತ್ತದೆ. ಇದರಿಂದ ಬೀಜಗೊಬ್ಬರದ ಮೊತ್ತವೂ ಆಗುವದಿಲ್ಲ ಎನ್ನುತ್ತಾರೆ ಗ್ರಾಮದ ಮಲ್ಲನಗೌಡ ಬಿರಾದಾರ.

ಭೇಟಿ: ನೆರೆ ಪೀಡಿತ ಅರಳದಿನ್ನಿ ಗ್ರಾಮಕ್ಕೆ ಶಾಸಕ ಶಿವಾನಂದ ಪಾಟೀಲ, ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಸಂಸದ ರಮೇಶ ಜಿಗಜಿಣಗಿ, ಜಿಪಂ ಸದಸ್ಯೆ ಬಸಮ್ಮ ಮಾದರ, ತಾಪಂ ಸದಸ್ಯ ಮಲ್ಲು ರಾಠೊಡ, ಮುಖಂಡರಾದ ಸಂಗರಾಜ ದೇಸಾಯಿ, ಸೋಮನಗೌಡ ಪಾಟೀಲ (ಮನಗೂಳಿ) ಹಾಗೂ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೋಹ್ಮದ್‌ ಮೋಹ್ಸಿನ್‌, ಎಸ್ಪಿ ಪ್ರಕಾಶ ನಿಕ್ಕಂ, ತಹಶೀಲ್ದಾರ್‌, ತಾಪಂ ಆಡಳಿತಾಧಿಕಾರಿ ಸೇರಿದಂತೆ ಹಲವಾರು ಮುಖಂಡರು ಭೇಟಿ ನೀಡಿದ್ದಾರೆ.

ಇನ್ನು ಆಲಮಟ್ಟಿ ಪಿಡಿಒ ಮಂಜುಳಾ ಘಂಟಿ, ಅಧ್ಯಕ್ಷೆ ಸೈದಮ್ಮ ಬೆಣ್ಣಿ, ಗ್ರಾಮ ಲೆಕ್ಕಾಧಿಕಾರಿ ನಾನಾಗೌಡ ಪಾಟೀಲ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಹಾಗೂ ಅವರ ತಂಡ, ಪೊಲೀಸ್‌ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಳಿಯಂತೆ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.