ಮೂಡಲಪಾಯ ಅಕಾಡೆಮಿ ಸ್ಥಾಪನೆಗೆ ಒತ್ತಾಯ
Team Udayavani, Aug 13, 2019, 4:58 PM IST
ರಾಮನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.
ರಾಮನಗರ: ನಗರದ ಹೊರವಲಯದಲ್ಲಿರುವ ಜಾನಪದ ಲೋಕದಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ಮೂಡಲಪಾಯ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವಂತೆ ಜಾನಪದ ಕಲಾವಿದರು, ಕರ್ನಾಟಕ ರಾಜ್ಯದ ದಕ್ಷಿಣ ಭಾಗದ ಜಾನಪದ ವಿದ್ವಾಂಸರು ನಿರ್ಣಯ ಕೈಗೊಂಡಿದ್ದಾರೆ.
ಈ ಸಂಬಂಧ ಜಾನಪದ ಲೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮುಂತಾದ ಜಿಲ್ಲೆಗಳಲ್ಲಿ ವ್ಯಾಪಿರಿಸುವ ಮೂಡಲಪಾಯ ಯಕ್ಷಗಾನ ನಿರ್ಲಕ್ಷಕ್ಕೆ ಒಳಗಾಗಿದೆ. ಈ ಕಲೆಯ ಪುನರುಜ್ಜೀವನಕ್ಕೆ ಅಕಾಡೆಮಿ ಸ್ಥಾಪಿಸಿವುದು ಅವ್ಯಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಮಾಲೋಚನೆ ಸಭೆ ನಡೆದಿದೆ. ಸಮಾಲೋಚನ ಸಭೆಯಲ್ಲಿ ಕರ್ನಾಟಕ ದಕ್ಷಿಣ ಭಾಗದ ಜಾನಪದ ವಿದ್ವಾಂಸರು, ಭಾಗವತರು, ಕಲಾವಿದರು ಭಾಗವಹಿಸಿದ್ದು, ಮೂಡಲಪಾಯ ಯಕ್ಷಗಾನ ಅಕಾಡಮಿ ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮೂಡಲಪಾಲಯ ಕಲಾ ಪ್ರಾಕಾರಕ್ಕೆ ಪರಾಂಪರಿಕವಾದ ಮೂಡಲಪಾಯ ಭಾಗವತರು, ಮುಖವೀಣೆ, ಮದ್ದಲೆಯ ಭಾಗವತರು ಇದ್ದಾರೆ. ಅಲ್ಲದೆ ಹತ್ತಾರು ಜಿಲ್ಲೆಗಳಲ್ಲಿ ಸಾವಿರಾರುಕಲಾವಿದರು ಹಂಚಿಹೋಗಿದ್ದಾರೆ. ಅನೇಕ ತಾತ್ವಿಕ ಕಾರಣಗಳಿಂದಾಗಿ ಇದು ಅಳಿವಿನ ಅಂಚಿಗೆ ತಲುಪಿದೆ. ಕರಾವಳಿ ಪ್ರದೇಶದಲ್ಲಿ ಇರುವಂತೆ ದೇವಾಲಯಗಳಾಗಲಿ, ಉದ್ದಿಮೆಪರಿಗಳಾಗಲಿ, ಅಕಾಡೆಮಿಗಳಾಗಲಿ ಈ ಕಲೆಯನ್ನು ಬೆಳೆಸಲಿಲ್ಲ. ಕಲೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಸೃಷ್ಠಿಯಗಿರುವುದರಿಂದ ಕಲೆಯ ಪುನರುಜ್ಜೀವನಕ್ಕಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪನೆಗೆ ಶೀಘ್ರದಲ್ಲೇ ಮುಖ್ಯ ಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಖಾತೆಯ ಮಾಜಿ ಸಚಿವರು, ಇಲಾಖೆಯ ನಿರ್ದೇಶಕರು, ಈ ಭಾಗದ ವಿಧಾನ ಸಭೆ, ವಿಧಾನ ಪರಿಷತ್ ಸದಸ್ಯರಿಗೆ ಮನವಿ ಮಾಡಲಾಗುವುದು ಎಂದರು.
ಪಡವಲಪಾಯ ಯಕ್ಷಗಾನ ಕರಾವಳಿ ಕರ್ನಾಟಕದ ಕಾಸರಗೂಡಿನಿಂದ, ಹೊನ್ನಾವರದವರೆಗೆ ವ್ಯಾಪಿಸಿದೆ. ಮೂಡಲಪಾಲ ಆಟವು ಬಯಲುಸೀಮೆಯ ಪ್ರಮುಖ ಜನಪದ ರಂಗ ಪ್ರಕಾಋವಾಗಿದೆ. ಮೈಸೂರಿನಿಂದ ಆರಂಭಗೊಂಡು ಬಳ್ಳಾರಿಯವರೆಗೆ ವ್ಯಾಪಿಸಿದೆ. ದೊಡ್ಡಾಟ ಬಯಲಾಟವು ಬಳ್ಳಾರಿಯಿಂದ ಮೇಲಕ್ಕೆ ಬೀದರ್, ಗುಲ್ಬರ್ಗವರೆಗೆ ವ್ಯಾಪಿಸಿದೆ ಎಂದು ವಿವರಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಮಾತನಾಡಿ ಮೂಡಲಪಾಯಕ್ಕೆ ಅದರದೇ ಆದ ವಿಶಿಷ್ಟ ಸಾಹಿತ್ಯ ಪ್ರಕಾರವಿದೆ, ರಂಗ ಸಂಪ್ರದಾಯವಿದೆ, ವಾದ್ಯಪರಿಕರಗಳಲ್ಲಿ, ವೇಷಭೂಷಣಗಳಲ್ಲಿ ಎಲ್ಲ ಪ್ರಕಾರಗಳಿಗಿಂತ ಭಿನ್ನವಾಗಿದೆ ಎಂದರು.
ಮೊದಲು ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಸ್ತಿತ್ವದಲ್ಲಿತ್ತು. ತದ ನಂತರ ಜಾನಪದ ಮತ್ತು ಯಕ್ಷಗಾನವನ್ನು ಪ್ರತ್ಯೇಕಿಸಿ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. 2017ರಲ್ಲಿ ಬಯಲಾಟ ಅಕಾಡೆಮಿಯೂ ಸ್ಥಾಪನೆಯಗಿದ್ದು ಬಾಗಲ ಕೋಟೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೂ ಮೂಡಲಪಾಯ ಯಕ್ಷಗಾನ ಕಲೆಗೆ ಪ್ರಾಧನ್ಯತೆ ದೊರಕಿಲ್ಲ. ಮೇಲಾಗಿ ಮೂಡಲಪಾಯ ಯಕ್ಷಗಾನವನ್ನು ಬಯಲಾಟ ಅಕಾಡಮಿಗೆ ಸೇರಬೇಕೋ, ಬಯಲಾಟ ಅಕಾಡೆಮಿಗೆ ಸೇರಬೇಕೋ ಎಂಬ ಜಿಜ್ಞಾಸೆಯೂ ಇದೆ. ನಿರ್ಲಕ್ಷಕ್ಕೆ ಒಳಗಾಗಿರುವ ಮೂಡಲಪಾಯ ಜನಪದ ರಂಗಭೂಮಿಗೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ ಅಳಿವಿನ ಅಂಚಿನಲ್ಲಿರುವ ಈ ಕಲೆಯ ಬೆಳವಣಿಗೆಗೆ ಸಹಕಾರಿಯಾಗಬೇಕು, ಮೂಡಲಪಾಯ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿಯೇ ಸ್ಥಾಪಿಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಜಾನಪದ ವಿದ್ವಾಂಸರುಗಳಾದ ಡಾ.ಪಿ.ಕೆ.ರಾಜಶೇಖರ್, ಡಾ.ಜಯಲಕ್ಷ್ಮಿ ಸೀತಾಪುರ, ಡಾ.ಚಂದ್ರು ಕಾಳೇನಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು, ಜಾನಪದ ಲೋಕದ ಆಡಳಿತಾಧಿಕಾರಿ ಡಾ.ಕುರುವ ಬಸವರಾಜ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.