ಆಧಾರ್‌ ಕಾರ್ಡ್‌ಗೆ ತಪ್ಪದ ಪಡಿಪಾಟಲು

•ಡಿಜಿಟಲ್ ಯುಗದಲ್ಲೂ ರಾತ್ರಿಯಿಂದಲೇ ಸರದಿ ಸಾಲು•ಕೇಳುವಿರಾ ನೆರೆ ಸಂತ್ರಸ್ತರ ಅಹವಾಲು

Team Udayavani, Aug 13, 2019, 5:03 PM IST

hubali-tdy-4

ನವಲಗುಂದ: ಪಟ್ಟಣದ ಕೆವಿಜಿ ಬ್ಯಾಂಕ್‌ ಮುಂದೆ ಕಾಯುತ್ತಿರುವ ಜನರು.

ನವಲಗುಂದ: ಆಧಾರ್‌ ಕಾರ್ಡ್‌ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಬೇಕಾಗಿದ್ದು, ಅದನ್ನು ಪಡೆಯಲು, ತಿದ್ದುಪಡಿ ಮಾಡಿಸಿಕೊಳ್ಳಲು ಇರುವ ವ್ಯವಸ್ಥೆ ಹೈರಾಣಾಗಿಸಿದೆ. ದಿನಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಡಿಜಿಟಲ್ ಯುಗದಲ್ಲಿ ಇಂದಿಗೂ ಸಾಧ್ಯವಾಗದಿರುವುದು ತಾಲೂಕಿನ ನೆರೆ ಪೀಡಿತರನ್ನು ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ.

ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಟ್ಟಣದ ಕೆವಿಜಿ ಬ್ಯಾಂಕ್‌ ಮುಂದೆ ನೂರಾರು ಜನ ಆಧಾರ ಕಾರ್ಡ್‌ ತಿದ್ದುಪಡಿ, ಇತರೆ ಕೆಲಸಕ್ಕಾಗಿ ರವಿವಾರ ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು.

ಮೂರು ಕೇಂದ್ರಗಳು: ತಾಲೂಕಿನ ವ್ಯಾಪ್ತಿಯಲ್ಲಿ ಮೂರು ಆಧಾರ್‌ ಕೇಂದ್ರಗಳು ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಎರಡು ಕಡೆ ಅಂದರೆ ಕೆವಿಜಿ ಬ್ಯಾಂಕ್‌ನಲ್ಲಿ ಹಾಗೂ ಎಸ್‌ಬಿಎಂ(ಎಸ್‌ಬಿಐ)ನಲ್ಲಿ ಖಾಸಗಿಯವರು ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೊಂದು ಕೇಂದ್ರ ಸ್ಥಳೀಯ ಅಂಚೆ ಕಚೇರಿಯಲ್ಲಿದೆ.

ಅಂಚೆ ಕಚೇರಿಯ ಕೇಂದ್ರದಲ್ಲಿ ಕಂಪ್ಯೂಟರ್‌ ಸಿಬ್ಬಂದಿ ಇಲ್ಲ, ಆಧಾರ್‌ ಕಾರ್ಡ್‌ ಮಾಡುವುದಿಲ್ಲವೆಂದು ಹೇಳಿ ಕಳುಹಿಸುತ್ತಿದ್ದಾರೆ. ಇನ್ನೆರಡು ಆಧಾರ್‌ ಕೇಂದ್ರಗಳಲ್ಲಿ ವಾರಕ್ಕೊಮ್ಮೆ ಟೋಕನ್‌ ನೀಡಿ ನಿಗದಿತ ದಿನಾಂಕದಂದು ಆಗಮಿಸಿ ತಿದ್ದುಪಡಿ ಮಾಡಿಸಿಕೊಳ್ಳಲು ಹೇಳುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಜನರು ಅಲೆದಾಡುವಂತಾಗಿದೆ.

ಪ್ರಸ್ತುತ ನೆರೆಯಿಂದ ಹಲವು ಗ್ರಾಮಗಳು ಪೀಡಿತವಾಗಿದ್ದು, ಜನರು ಮನೆ-ಜಮೀನು ಪರಿಸ್ಥಿತಿ ಸರಿಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೇ ಮೊರಬ, ಬೆಳವಟಗಿ ಇತರೆ ಗ್ರಾಮದವರು ತಮ್ಮ ಆಧಾರ ಕಾರ್ಡ್‌ ತಿದ್ದುಪಡಿಗಾಗಿ ಒಂದು ದಿನ ಮುಂಚಿತವಾಗಿ ಗ್ರಾಮದಿಂದ ಬಂದು ಸರದಿ ಸಾಲಿನಲ್ಲಿ ನಿಂತು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.

ತಿಂಗಳೇ ಬೇಕಾದೀತು: ನೆರೆಹಾವಳಿಯಿಂದ ಮನೆಗಳಲ್ಲಿ ನೀರು ಹೋಗಿ ತಮ್ಮ ಕಾಗದ ಪತ್ರಗಳು ಜಖಂಗೊಂಡಿರುವವರು ಸರಕಾರಿ ಸವಲತ್ತು ಪಡೆದುಕೊಳ್ಳುವುದು ಕಷ್ಟದ ಕೆಲಸವಾಗುತ್ತದೆ. ಪ್ರವಾಹದಲ್ಲಿ ರೇಶನ್‌ ಕಾರ್ಡ್‌, ಆಧಾರ ಕಾರ್ಡ್‌, ಓಟಿನ ಕಾರ್ಡ್‌ ಇತರೆ ಕಾಗದಪತ್ರಗಳನ್ನು ಕಳೆದುಕೊಂಡಿದ್ದರೆ ಅವುಗಳಿಗಾಗಿ ತಿಂಗಳುಗಟ್ಟಲೇ ಕಾಯುವ ಪರಿಸ್ಥಿತಿ ಎದುರಾಗಿದೆ. ತಾಲೂಕಾಡಳಿತ ಇತ್ತ ಗಮನ ಹರಿಸಬೇಕಿದೆ. ಆಧಾರ ಕಾರ್ಡ್‌ ತಿದ್ದುಪಡಿ, ಇನ್ನಿತರ ಕಾಗದಪತ್ರಗಳನ್ನು ಜನರಿಗೆ ಪಡೆಯುವಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

ಆಧಾರ ಕಾರ್ಡ್‌ ತಿದ್ದುಪಡಿ ಮಾಡೂದು ದೊಡ್ಡ ತೊಂದರೆ ಇದೆ. ಹೊಲ, ಮನೆ ಕೆಲಸ ಬಿಟ್ಟು ಇದಕ್ಕ ನಿಂದಿರಬೇಕು. ಇದಕ್ಕ ಬ್ಯಾರಿ ಪರಿಹಾರ ಇಲ್ಲನ್ರಿ ಸಾಕಾಗೈತ್ರಿಪ್ಪಾ. ಎಲ್ಲಾ ಆನ್‌ಲೈನ್‌ ಅಂತಾರಾ, ಬೆಳಗ್ಗೆ 5ಕ್ಕೆ ಬಂದು ಕಾಯೋದು ತಪ್ಪುದಿಲ್ಲ.•ಸುರೇಶ ಅಣ್ಣಿಗೇರಿ, ನವಲಗುಂದ ನಿವಾಸಿ

ನಮ್ಮ ಗ್ರಾಮಕ್ಕೆ ಪ್ರವಾಹ ಬಂದು ಪಟ್ಟಣಕ್ಕೆ ಬರಲು ರಸ್ತೆ ಕೆಟ್ಟಿದೆ. ಇನಾಂಹೊಂಗಲದ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬೆಳಗ್ಗೆ 5ಕ್ಕೆ ಬಂದಿದ್ದೆ. ಬ್ಯಾಂಕ್‌ನವರು ಟೋಕನ್‌ ನೀಡಿದ ಮೇಲೆ ಮತ್ತೂಮ್ಮೆ ಬಂದು ನಮ್ಮ ಆಧಾರ ಕಾರ್ಡ್‌ ತಿದ್ದುಪಡಿ ಮಾಡಿಸಬೇಕು. ಈ ವ್ಯವಸ್ಥೆಯಿಂದ ಬಹಳ ಬೇಸರವಾಗಿದೆ. ಎಲ್ಲದಕ್ಕೂ ಆಧಾರ ಕಾರ್ಡ್‌ ಕಡ್ಡಾಯವಾಗಿದ್ದರಿಂದ ಯಾವಾಗ ಹೇಳುತ್ತಾರೋ ಆಗ ಮತ್ತೆ ಅಲೆದಾಡಬೇಕಿದೆ.•ನಾಗಪ್ಪ ಹದ್ದಣ್ಣವರ, ಮೊರಬ ಗ್ರಾಮಸ್ಥ

•ಪುಂಡಲೀಕ ಮುಧೋಳೆ

ಟಾಪ್ ನ್ಯೂಸ್

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

missing

ಬರಿಮಾರು ವ್ಯಕ್ತಿ ನಾಪತ್ತೆ; ನದಿ ಕಿನಾರೆಯಲ್ಲಿ ಪಾದರಕ್ಷೆ, ಮೇವಿನ ಕಟ್ಟು ಪತ್ತೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.