ಸರಕಾರಿ ಕಚೇರಿಗಳಲ್ಲಿ ಯಾವಾಗ ಮಳೆನೀರು ಕೊಯ್ಲು ?
Team Udayavani, Aug 14, 2019, 6:05 AM IST
ಉಡುಪಿ: ಸಾರ್ವಜನಿಕರ ಮನೆಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿ ಆಳವಡಿಸುವಂತೆ ಸೂಚನೆ ನೀಡಿರುವ ಜಿಲ್ಲಾಡಳಿತ ತನ್ನ ಕಚೇರಿ ಕಟ್ಟಡ , ಇತರ ಸರಕಾರಿ ಕಚೇರಿಗಳಲ್ಲಿ ಮಳೆ ನೀರುಕೊಯ್ಲು ಆಳವಡಿಸದೆ ಇರುವುದು ಶೋಚನೀಯ.
ಜಿಲ್ಲೆಯ ಗ್ರಾ.ಪಂ., ತಾ.ಪಂ, ಜಿಲ್ಲಾಧಿಕಾರಿ ಕಚೇರಿ, ಸರಕಾರಿ ಆಸ್ಪತ್ರೆ, ವಿವಿಧ ಇಲಾಖೆಗಳ ಕಟ್ಟಡದಲ್ಲಿ ಇಂದಿಗೂ ಮಳೆನೀರು ಕೊಯ್ಲು ಅಳವಡಿಸಿಲ್ಲ. ಬಹುತೇಕ ಗ್ರಾ.ಪಂ. ಕಟ್ಟಡಗಳು ಹೊಸತೇ ಆದರೂ ಮಳೆನೀರು ಕೊಯ್ಲನ್ನು ಅಳವಡಿಸಿ ಕೊಂಡಿಲ್ಲ. ಈ ಬಾರಿಯ ಬೇಸಗೆಯಲ್ಲಿ ಜಿಲ್ಲೆಯ 5 ತಾಲೂಕುಗಳು ನೀರಿನ ಸಮಸ್ಯೆಗೆ ತತ್ತರಿಸಿ ಹೋಗಿವೆೆ. ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ‘ಉದಯವಾಣಿ’ ದಿನಪತ್ರಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಜಲಸಾಕ್ಷರ ಅಭಿಯಾನ ಆರಂಭಿಸಿ ಜನರಲ್ಲಿ ಮಳೆನೀರು ಕೊಯ್ಲು ಕುರಿತು ಅರಿವು ಮೂಡಿಸುತ್ತಿದೆ.
ಸಮಾಜಕ್ಕೆ ಮಾದರಿಯಾಗಲಿ
ಜಿಲ್ಲಾಧಿಕಾರಿ ಕಚೇರಿಗೆ ಪ್ರತಿನಿತ್ಯ ಒಂದಲ್ಲ ಒಂದು ಕೆಲಸಕ್ಕೆ ಸಾರ್ವಜನಿಕರು ಬರುತ್ತಾರೆ. ಇಲ್ಲಿರುವ ಕಟ್ಟಡಗಳಿಗೆ ಮಳೆನೀರು ಕೊಯ್ಲನ್ನು ಅಳವಡಿಸಿಕೊಂಡರೆ ಬಹುತೇಕ ರಿಗೆ ಅದೊಂದು ಪ್ರಾತ್ಯಕ್ಷಿಕೆಯೋಪಾದಿ ಕೆಲಸ ಮಾಡುತ್ತದೆ. ಅದನ್ನು ಮಾದರಿಯಾಗಿ ಸ್ವೀಕರಿಸಿ ಜನತೆ ತಮ್ಮ ಮನೆಗಳಲ್ಲಿಯೂ ಮಳೆನೀರು ಕೊಯ್ಲು ಅಳವಡಿಸುತ್ತಾರೆ.
ವರ್ಷಕ್ಕೆ 24.28 ಕೋ.ಲೀ. ನೀರು ವ್ಯರ್ಥ!
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆ ನೀರನ್ನು ಶೇಖರಿಸಿ, ಪುನರ್ಬಳಕೆ ಮಾಡಿಕೊಳ್ಳುವ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸದೇ ಇರುವುದು ವಿಪರ್ಯಾಸ. 9,940 ಚ.ಮೀ. ವಿಶಾಲವಾಗಿರುವ ಜಿಲಾಧಿಕಾರಿ ಕಚೇರಿಯು ವರ್ಷಕ್ಕೆ ಕಟ್ಟಡದ ಮೇಲ್ಛಾವಣಿಯ ಮೇಲೆ 3.97 ಕೋ.ಲೀ. ಮಳೆ ನೀರು ಬೀಳುತ್ತದೆ. ಇಷ್ಟು ನೀರಿನ ಮೂಲವಿರುವ ಇಲ್ಲಿ ಮಳೆನೀರು ಕೊಯ್ಲನ್ನು ಅಳವಡಿಸಿಕೊಳ್ಳದ ಕಾರಣ ಸುಮಾರು 15 ಎಕ್ರೆ ಭೂಮಿಯಲ್ಲಿ ಸುಮಾರು 24.28 ಕೋ.ಲೀ. ಮಳೆ ನೀರು ವ್ಯರ್ಥವಾಗುತ್ತಿದೆ.
ಸರಕಾರಿ ನಿಯಮವಿದ್ದರೂ ಯಾವುದೇ ಸರಕಾರಿ ಕಚೇರಿಗಳಾಗಲಿ, ನೂತನವಾಗಿ ನಿರ್ಮಾಣವಾಗುತ್ತಿರುವ ಖಾಸಗಿ ಕಟ್ಟಡ ಗಳಲ್ಲಾಗಲಿ ಮಳೆನೀರು ಕೊಯ್ಲು ಕಡ್ಡಾಯದ ಬಗ್ಗೆ ಗಮಹರಿಸುತ್ತಿಲ್ಲ. ನೀರಿನ ಕೊರತೆಯ ಕುರಿತು ಬೊಬ್ಬೆ ಹಾಕಿದರೆ ಸಾಲದು, ನಮಗೆ ಲಭ್ಯವಾಗುವ ನೀರನ್ನು ವ್ಯರ್ಥವಾಗದಂತೆ ಬಳಕೆ ಮಾಡಿಕೊಳ್ಳಬೇಕು ಎಂಬ ಅರಿವು ಜನರಲ್ಲಿ ಮೂಡಬೇಕಾದ ಅವಶ್ಯಕತೆಯಿದೆ.
ಪ್ರತಿ ಹನಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.