ವಿದೇಶಾಂಗ ಇಲಾಖೆಗೆ ಸುಷ್ಮಾರಿಂದ ಹೊಸ ಸ್ಪರ್ಶ
Team Udayavani, Aug 14, 2019, 5:18 AM IST
ನವದೆಹಲಿ: ಬಿಜೆಪಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರು, ಭಾರತದ ವಿದೇಶಾಂಗ ಸಚಿವಾಲಯವನ್ನು ‘ಶಿಷ್ಟಾಚಾರದ ಸಚಿವಾಲಯ’ದಿಂದ ‘ಜನರ ದೂರು ದುಮ್ಮಾನಗಳನ್ನು ಆಲಿಸುವ ಸಚಿವಾಲಯ’ವನ್ನಾಗಿ ಬದಲಾಯಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಕಳೆದ ವಾರ ನಿಧನರಾದ ಸುಷ್ಮಾ ಅವರ ನೆನಪಿಗಾಗಿ ಮಂಗಳವಾರ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವಾರು ವಿಷಯಗಳಲ್ಲಿ ಸುಷ್ಮಾಜೀ ತಮಗೆ ಅಮೂಲ್ಯ ಸಲಹೆಗಳನ್ನು ನೀಡುತ್ತಿದ್ದರು ಎಂದು ತಿಳಿಸಿದರು. ‘2014ರಲ್ಲಿ ವಿಶ್ವಸಂಸ್ಥೆಯಲ್ಲಿ ನನಗೆ ಮೊದಲು ಭಾಷಣ ಮಾಡುವ ಅವಕಾಶ ಸಿಕ್ಕಾಗ, ಸಾಮಾನ್ಯವಾಗಿ ನಾನು ಭಾಷಣ ಬರೆದುಕೊಳ್ಳದೇ ಮಾತನಾಡುವ ಅಭ್ಯಾಸವಿದ್ದು ಅದರಂತೆಯೇ ವಿಶ್ವಸಂಸ್ಥೆಯಲ್ಲೂ ಮಾತನಾಡುವುದಾಗಿ ತಿಳಿಸಿದ್ದೆ. ಆದರೆ, ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಬಗ್ಗೆ ನೀವು ಮಾತನಾಡಬೇಕಿರುವುದರಿಂದ ಆ ಭಾಷಣಕ್ಕೆ ಪೂರ್ವ ತಯಾರಿ ಬೇಕು’ ಎಂದಿದ್ದರು. ನಾನು ಅವರ ಸಲಹೆಯನ್ನು ಅಳವಡಿಸಿಕೊಂಡಿದ್ದೆ. ಇಂಥ ಹಲವಾರು ಸಲಹೆಗಳನ್ನು ಅವರು ನೀಡುತ್ತಿದ್ದರು” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.