ನೆರೆ ತಪ್ಪಿಸುತ್ತಿವೆ ಲಿಂಗನಮಕ್ಕಿ-ಟೇಲರೀಸ್
•ತ್ರಿವಿಧ ಲಾಭಕ್ಕಾಗಿ ಅಣೆಕಟ್ಟುಗಳ ನಿರ್ಮಾಣ •ವಿದ್ಯುತ್ ಉತ್ಪಾದನೆ-ನೀರಾವರಿ ಬಳಕೆಗೆ
Team Udayavani, Aug 14, 2019, 2:30 PM IST
ಹೊನ್ನಾವರ: 1964ರಲ್ಲಿ ಉದ್ಘಾಟನೆಗೊಂಡ ಲಿಂಗನಮಕ್ಕಿ ಅಣೆಕಟ್ಟು ಕೇವಲ 2 ಅವಧಿಯ ಹೊರತಾಗಿ 50 ವರ್ಷಗಳಿಗೂ ಹೆಚ್ಚುಕಾಲ ಶರಾವತಿಕೊಳ್ಳವನ್ನು ನೆರೆಹಾವಳಿಯಿಂದ ಕಾಪಾಡಿದೆ ಎಂಬ ಸತ್ಯವನ್ನು ಈಗ ನೆರೆಯ ನೋವಿನಲ್ಲೂ ನೆನಪಿಸಿಕೊಳ್ಳಬೇಕಾಗಿದೆ.
ನೇಪಾಳ ಮಳೆ ಉತ್ತರಭಾರತವನ್ನು, ಮಹಾರಾಷ್ಟ್ರದ ಮಳೆ ಬಯಲುಸೀಮೆಯನ್ನು, ಸಹ್ಯಾದ್ರಿಯ ಮಳೆ ಅಘನಾಶಿನಿ, ಕಾಳಿ, ಬೇಡ್ತಿ ತೀರವನ್ನು ಮುಳುಗಿಸುತ್ತಿದ್ದರೆ ಶರಾವತಿಕೊಳ್ಳದ ಜನ ಅಣೆಕಟ್ಟು ತುಂಬಿದರೂ ತುಳುಕದಂತೆ ಮಾಡು ಎಂದು ಪ್ರಾರ್ಥಿಸುತ್ತಿದ್ದಾರೆ.
ವಿದ್ಯುತ್ ಉತ್ಪಾದನೆ, ನೀರಾವರಿ ಬಳಕೆ ಮತ್ತು ನೆರೆ ನಿಯಂತ್ರಣ ಈ ತ್ರಿವಿಧ ಲಾಭಕ್ಕಾಗಿ ಅಣೆಕಟ್ಟುಗಳು ನಿರ್ಮಾಣಗೊಂಡವು. ಸರ್ಕಾರಕ್ಕೆ ಆದಾಯಬರುವ ವಿದ್ಯುತ್ ಉತ್ಪಾದನೆ ನಂತರ ಜನರಿಗೆ ಉಪಯುಕ್ತವಾಗುವ ನೆರೆ ನಿಯಂತ್ರಣ ಮತ್ತು ನೀರಾವರಿಗೆ ಸರ್ಕಾರಗಳು ಹೆಚ್ಚು ಕಾಳಜಿ ವಹಿಸಲಿಲ್ಲ. ನೀರು ತುಂಬಿಸುತ್ತಲೇ ಹೋಗಿ ಕೊನೆಯ ಘಳಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಬಂದು ಜನಜೀವನವನ್ನು ಸಂಕಷ್ಟಕ್ಕೆ ನೂಕಿತು. ಲೆಕ್ಕಾಚಾರದಷ್ಟು ನೀರು ಕೃಷಿಗೆ ಬಳಕೆಯಾಗದ ಕಾರಣ ಇನ್ನೂ ನೀರಾವರಿ ಇಲ್ಲದ ಏಕಬೆಳೆ ಪ್ರದೇಶವನ್ನು ಕಾಣಬಹುದು.
ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಗುವ ಮೊದಲು ಶರಾವತಿಕೊಳ್ಳದಲ್ಲಿ ಕಾಯಂ ನೆರೆ ಬರುತ್ತಿತ್ತು. ಹೊಳೆಸಾಲಿನವರಿಗೆ ಹೆಣ್ಣು ಕೊಡುವವರು ಇರಲಿಲ್ಲ. ಅಳಿಯನ ಬೆಳೆಯೊಂದಿಗೆ ಮಗಳೂ ಹೋದರೆ ಎಂಬ ಚಿಂತೆ. ಲಿಂಗನಮಕ್ಕಿ ಅಣೆಕಟ್ಟಿನ ನಂತರ ಬೇಸಿಗೆಯಲ್ಲೂ ಶರಾವತಿಯಲ್ಲಿ ಪ್ರವಾಹ ಇರುವುದರಿಂದ ಶರಾವತಿಕೊಳ್ಳ ತಾಲೂಕಿನಲ್ಲಿ ಸಮೃದ್ಧ ಭೂಮಿಯಾಯಿತು. 80ರ ದಶಕದಲ್ಲಿ ಒಂದೆರಡು ಬಾರಿ ಗರಿಷ್ಠ 1819 ಅಡಿ ನೀರು ತುಂಬಿಸಿದ್ದರು. ಒಂದು ಅಡಿ ನೀರು ಒಂದು ಕೋಟಿ ರೂ. ವಿದ್ಯುತ್ ಉತ್ಪಾದಿಸುತ್ತದೆ ಎಂಬುದು ಕೆಪಿಸಿ ವಾದವಾಗಿತ್ತು. 80ರ ದಶಕದಲ್ಲಿ ಎರಡು ಬಾರಿ ಏಕಾಏಕಿ ನೀರು ಬಿಟ್ಟು ಅನಾಹುತವಾದ ಕಾರಣ ಕೆಪಿಸಿ ಬುದ್ಧಿಕಲಿಯಿತು. ಈಗ ಅಣೆಕಟ್ಟು ತುಂಬುತ್ತಿದ್ದಂತೆಯೇ ಹಿತಮಿತವಾಗಿ ನೀರು ಬಿಟ್ಟು ಗೇರುಸೊಪ್ಪ ಅಣೆಕಟ್ಟನ್ನು ಸಮತೋಲನ ಕಾಯುವ ಅಣೆಕಟ್ಟನ್ನಾಗಿ ಬಳಸಿಕೊಂಡು ನೆರೆ ತಪ್ಪಿಸುತ್ತಿದೆ.
ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಗಿ 55ವರ್ಷಗಳಲ್ಲಿ ಕೇವಲ 16ಬಾರಿ ಪೂರ್ತಿ ತುಂಬಿದೆ. ಎರಡು ಬಾರಿ ನಿರ್ಲಕ್ಷದಿಂದ ನೀರು ಬಿಡುವಂತಾಯಿತು. ಉಳಿದ ಅರ್ಧ ದಶಕದಲ್ಲಿ ಲಿಂಗನಮಕ್ಕಿ ಶರಾವತಿಕೊಳ್ಳದಲ್ಲಿ ಸಮೃದ್ಧ ನೀರನ್ನು ಒದಗಿಸಿದೆ. ಈ ದೃಷ್ಠಿಯಿಂದ ಕೃತಜ್ಞರಾಗಿರಬೇಕಾಗಿದೆ. ಜಲವಿದ್ಯುತ್ ಯೋಜನೆ ಕಡಿಮೆವೆಚ್ಚದ್ದಾದರೂ ಪರಿಸರ ನಾಶವಾಗುವ ಭೀತಿಯಿಂದ ಬೇಡ್ತಿ, ಅಘನಾಶಿನಿ ಸಹಿತ ರಾಜ್ಯದ ಹಲವು ಇಂತಹ ಯೋಜನೆಯನ್ನು ಜನರ ಪ್ರತಿಭಟನೆ ಮಧ್ಯೆ ಕೈಬಿಡಲಾಯಿತು. ಅಣು, ಉಷ್ಣ ವಿದ್ಯುತ್ ಉತ್ಪಾದನೆಯಲ್ಲೂ ಪರಿಸರ ಹಾನಿಯಿದೆ. ಎಲ್ಲ ಯೋಜನೆಗೂ ವಿರೋಧವಿದೆ, ಆದರೆ ವಿದ್ಯುತ್ ಎಲ್ಲರಿಗೂ ಬೇಕಿದೆ.
ಪಶ್ಚಿಮ ಘಟ್ಟದಲ್ಲಿ ಇಳಿದು ಬರುವ ನೀರಿಗೆ ಅಲ್ಲಲ್ಲಿ ಕಿರು ಅಣೆಕಟ್ಟು ನಿರ್ಮಿಸಿ, ಆಯಾಭಾಗಕ್ಕೆ ವಿದ್ಯುತ್ ಮತ್ತು ಕೃಷಿ ಭೂಮಿಗೆ ನೀರು ಪಡೆಯುವ, ಪ್ರವಾಹ ತಡೆಯುವಂತಹ ಯೋಜನೆ ಉಯುಕ್ತವಾಗುತ್ತಿತ್ತು. ಇದರಿಂದ ಪರಿಸರವೂ ಉಳಿಯುತ್ತಿತ್ತು. ವಿದೇಶಗಳಲ್ಲಿ ಯಶಸ್ವಿಯಾದ ಇಂತಹ ಯೋಜನೆಯ ಅಧ್ಯಯನಕ್ಕೂ ಜನರು ಅವಕಾಶಕೊಡಲಿಲ್ಲ. ಎತ್ತರ ಜಾಗ ಮನೆಕಟ್ಟಿಕೊಳ್ಳಲು ಸಿಗುವುದಿಲ್ಲ, ಪ್ರವಾಹ ತಡೆಯಲೂ ಸಾಧ್ಯವಾಗುವುದಿಲ್ಲ. ಲಿಂಗನಮಕ್ಕಿ, ಟೇಲರೀಸ್ ಜಲವಿದ್ಯುತ್ ಯೋಜನೆಗಳ ಅಡ್ಡಪರಿಣಾಮ ಹೇಳುವಾಗ ಅದರ ಒಳಿತನ್ನು ಈ ಕಾಲದಲ್ಲಿ ಸ್ಮರಿಸುವುದು ಅನಿವಾರ್ಯ.
•ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.